India vs Sri Lanka: ಪಂದ್ಯದ ಬಳಿಕ ಕಿತ್ತಾಡಿಕೊಂಡ ಫ್ಯಾನ್ಸ್: ವಿಡಿಯೋ ನೋಡಿ

ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ 2023 ರ ಏಷ್ಯಾ ಕಪ್‌ನ ಸೂಪರ್ 4 ಪಂದ್ಯದಲ್ಲಿ ಭಾರತ ತಂಡ ಆತಿಥೇಯ ಶ್ರೀಲಂಕಾ ವಿರುದ್ಧ 41 ರನ್‌ಗಳ ಜಯ ಸಾಧಿಸಿ, ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.

ಪಂದ್ಯ ಮುಕ್ತಾಯವಾದ ಬಳಿಕ ಭಾರತ - ಶ್ರೀಲಂಕಾ ಅಭಿಮಾನಿಗಳ ನಡುವೆ ಜಗಳ ನಡೆದಿದ್ದು, ಪರಸ್ಪರ ಹಲ್ಲೆ ಮಾಡುವ ಹಂತಕ್ಕೆ ತಲುಪಿತ್ತು. ಭಾರತ ಮತ್ತು ಶ್ರೀಲಂಕಾದ ಅಭಿಮಾನಿಗಳು ಸ್ಟೇಡಿಯಂನ ಮೇಲಿನ ಸ್ಟ್ಯಾಂಡ್‌ಗಳಲ್ಲಿ ಜಗಳವಾಡಿದ್ದು ವಿಡಿಯೋ ವೈರಲ್ ಆಗಿದೆ.

 Fan Brawl Breaks Out Following Intense IND vs SL Asia Cup 2023 Match

ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಶ್ರೀಲಂಕಾ ಜೆರ್ಸಿಯನ್ನು ಧರಿಸಿರುವ ಅಭಿಮಾನಿಯನ್ನು ಹಲವಾರು ಜನರು ತಡೆಹಿಡಿದಿದ್ದಾರೆ. ಆದಾಗ್ಯೂ, ಅಭಿಮಾನಿಯನ್ನು ತಡೆಯುವ ಪ್ರಯತ್ನಗಳು ವಿಫಲಗೊಳ್ಳುತ್ತವೆ, ಆತ ಭಾರತೀಯ ಅಭಿಮಾನಿಯ ಕಡೆಗೆ ಆಕ್ರಮಣಕಾರಿಯಾಗಿ ಓಡಿಹೋಗುವುದನ್ನು ಕಾಣಬಹುದು ಮತ್ತು ಅವನ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸುವುದನ್ನು ನೋಡಬಹುದು.

ಜಗಳ ಬಿಡಿಸಲು ಯತ್ನಿಸಿದ ಅಭಿಮಾನಿಗಳು

ಆಕ್ರೋಶಗೊಂಡ ಇಬ್ಬರು ಅಭಿಮಾನಿಗಳ ನಡುವೆ ಜಗಳ ಆರಂಭವಾದಾಗ, ಹತ್ತಾರು ಜನರು ಜಗಳವನ್ನು ತಡೆದು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ. ಕಹಿ ಘಟನೆ ಬಗ್ಗೆ ಶ್ರೀಲಂಕಾದ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆಯೇ ಎಂಬುದರ ಕುರಿತು ಯಾವುದೇ ವರದಿಯಾಗಿಲ್ಲ.

ರೋಚಕ ಪಂದ್ಯದಲ್ಲಿ ಗೆದ್ದ ಭಾರತ

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡ ಅತ್ಯುತ್ತಮ ಆರಂಭ ಪಡೆದುಕೊಂಡಿತು. ರೋಹಿತ್ ಶರ್ಮಾ ಮತ್ತು ಶುಬ್‌ಮನ್ ಗಿಲ್ ಉತ್ತಮವಾಗಿ ಬ್ಯಾಟಿಂಗ್ ಮಾಡಿ ಮೊದಲ ವಿಕೆಟ್‌ಗೆ 80 ರನ್ ಕಲೆಹಾಕಿದರು. ಆದರೂ, ದುನಿತ್ ವೆಲ್ಲಲಾಗೆ ಮತ್ತು ಚರಿತ್ ಅಸಲಂಕ ಮಾರಕ ಬೌಲಿಂಗ್ ದಾಳಿಗೆ ಸಿಕ್ಕ ಭಾರತ 213 ರನ್‌ಗಳಿಗೆ ಆಲೌಟ್ ಆಯಿತು.

ವೆಲ್ಲಲಾಗೆ 40 ರನ್ ನೀಡಿ 5 ವಿಕೆಟ್ ಪಡೆದರೆ, ಚರಿತ್ ಅಸಲಂಕ 18 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು. ರೋಹಿತ್ ಶರ್ಮಾ ಮಾತ್ರ ಅರ್ಧಶತಕದ ಗಡಿಯನ್ನು ದಾಟಿದ್ದಲ್ಲದೆ, ಏಕದಿನ ಕ್ರಿಕೆಟ್‌ನಲ್ಲಿ 10000 ರನ್ ಪೂರೈಸಿದ ಆಟಗಾರ ಎನಿಸಿಕೊಂಡರು.

ಭಾರತದ ಬಿಗಿಯಾದ ಬೌಲಿಂಗ್

ಸಾಧಾರಣ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿತು. ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಪವರ್‌ಪ್ಲೇನಲ್ಲಿ 3 ಪಡೆದು ಶ್ರೀಲಂಕಾ ಮೇಲೆ ಒತ್ತಡ ಹಾಕಿದರು. ಸದೀರ ಸಮರವಿಕ್ರಮ (17) ಮತ್ತು ಚರಿತ್ ಅಸಲಂಕಾ (22) ತಂಡಕ್ಕೆ ಆಸರೆಯಾದರು, ಕುಲದೀಪ್ ಯಾದವ್ (4/43) ಮತ್ತು ರವೀಂದ್ರ ಜಡೇಜಾ (2/33) ಉತ್ತಮ ಬೌಲಿಂಗ್ ದಾಳಿ ಮೂಲಕ ಲಂಕಾ ತಂಡಕ್ಕೆ ಆಘಾತ ನೀಡಿದರು.

ಧನಂಜಯ ಡಿ ಸಿಲ್ವಾ (41) ಮತ್ತು ದುನಿತ್ ವೆಲ್ಲಲಾಗೆ (42*) ಉತ್ತಮ ಹೋರಾಟವನ್ನು ನೀಡಿದರು ಆದರೆ ಲಂಕಾ ಆಟಗಾರರು 172 ರನ್‌ಗಳಿಗೆ ಆಲೌಟ್ ಆಗುವ ಮೂಲಕ 41 ರನ್‌ಗಳಿಂದ ಸೋಲೊಪ್ಪಿಕೊಂಡಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+