ದಿನೇಶ್ ಕಾರ್ತಿಕ್ ಗುಡ್‌ಬೈ: ಆರ್‌ಸಿಬಿ ಅಭಿಮಾನಿಗಳಿಗೆ ಆಘಾತ!

ದಿನೇಶ್ ಕಾರ್ತಿಕ್ ಈಗ ಕನ್ನಡ ನಾಡಿನ ಮಗನೇ ಆಗಿದ್ದಾರೆ. ಆರ್‌ಸಿಬಿ ತಂಡದ ಆಟಗಾರನ ಅಬ್ಬರಕ್ಕೆ ಇಡೀ ಕ್ರಿಕೆಟ್ ಜಗತ್ತು ಫಿದಾ ಆಗಿದ್ದು, ಎಲ್ಲೆಲ್ಲೂ ದಿನೇಶ್ ಕಾರ್ತಿಕ್ ಆಟದ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಸಮಯದಲ್ಲೇ ಆರ್‌ಸಿಬಿ ಅಂದ್ರೆ ಬೆಂಗಳೂರು ಐಪಿಎಲ್ ತಂಡದ ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿ ಸಿಕ್ಕಿದೆ.

ದಿನೇಶ್ ಕಾರ್ತಿಕ್ ಅವರ ಹೆಸರು ಕೇಳಿದರೆ ಈಗ ಕನ್ನಡಿಗರು ಖುಷಿಯಾಗುತ್ತಾರೆ. ಯಾಕಂದ್ರೆ ಈ ವಯಸ್ಸಲ್ಲೂ ಆರ್‌ಸಿಬಿ ಟೀಂ ಪರವಾಗಿ ದಿನೇಶ್ ಕಾರ್ತಿಕ್ ಪಡುತ್ತಿರುವ ಶ್ರಮ ಅಷ್ಟಿಷ್ಟಲ್ಲ. ಈ ರೀತಿ ದಿನೇಶ್ ಕಾರ್ತಿಕ್ ಅವರಿಗೆ ಮರುಜನ್ಮ ನೀಡಿದ್ದ ಐಪಿಎಲ್ ತಂಡವಾದ ಆರ್‌ಸಿಬಿ ಪರ, ಸದಾ ಋಣಿಯಾಗಿ ಆಟ ಆಡುತ್ತಿದ್ದಾರೆ ದಿನೇಶ್ ಕಾರ್ತಿಕ್. ಆದರೆ ಇದೇ ಸಮಯದಲ್ಲಿ ಈಗ ಆರ್‌ಸಿಬಿ ಅಂದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿ ಇದೀಗ ಹೊರಬಿದ್ದಿದೆ.

Explore How Dinesh Karthik Is Saying Goodbye To RCB In 2024

ದಿನೇಶ್ ಕಾರ್ತಿಕ್ ಔಟ್?

ಹೌದು, ಆರ್‌ಸಿಬಿ ತಂಡಕ್ಕೆ ನೀಡಿರುವ ಖಾಸಗಿ ಸಂದರ್ಶನದಲ್ಲಿ ಇದೀಗ ದಿನೇಶ್ ಕಾರ್ತಿಕ್ ಅವರು ತಮ್ಮ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ. ಚನ್ನೈ ತಂಡದ ಆಟಗಾರ ಹಾಗೂ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಧೋನಿ ಅವರ ಬಗ್ಗೆ ಮನಸ್ಸು ತುಂಬಿ ಮಾತನಾಡಿರುವ ದಿನೇಶ್ ಕಾರ್ತಿಕ್, ತಮ್ಮ ನಿವೃತ್ತಿ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಧೋನಿ ಮತ್ತು ತಾವು ಒಂದೇ ಸಮಯಕ್ಕೆ ಕ್ರಿಕೆಟ್ ವೃತ್ತಿ ಬದುಕನ್ನು ಆರಂಭಿಸಿದ ಬಗ್ಗೆ ಮಾತನಾಡಿದ ಡಿಕೆ, ಈಗ ತಮ್ಮ ನಿವೃತ್ತಿ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

ಅಭಿಮಾನಿಗಳು ಏನ್ ಹೇಳುತ್ತಾರೆ?

ದಿನೇಶ್ ಕಾರ್ತಿಕ್ ಅವರು ಹೇಳಿರುವ ಪ್ರಕಾರ ಬೆಂಗಳೂರಿನಲ್ಲಿ ನಡೆಯಲಿರುವ ಐಪಿಎಲ್‌ನ ಮ್ಯಾಚ್ ದಿನೇಶ್ ಕಾರ್ತಿಕ್ ಅವರಿಗೆ ಕೊನೆಯ ಪಂದ್ಯ ಆಗಲಿದೆ. ಧೋನಿ ಅವರ ಜೊತೆಗೆ, ದಿನೇಶ್ ಕಾರ್ತಿಕ್ ಕೂಡ ಈ ಮೂಲಕ ನಿವೃತ್ತಿ ಪಡೆಯುವುದು ಪಕ್ಕಾ ಆಗಿದೆ. ಆದರೆ ಈಗ ಈ ಸುದ್ದಿ ಕೇಳಿದ ಅಭಿಮಾನಿಗಳು ಸಾಕಷ್ಟು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ದಿನೇಶ್ ಕಾರ್ತಿಕ್ ಇನ್ನಷ್ಟು ದಿನಗಳ ಕಾಲ ಐಪಿಎಲ್ ಆಡುವ ನಿರೀಕ್ಷೆ ಅಭಿಮಾನಿಗಳಿಗೆ ಇತ್ತು. ಆದರೆ, ಈಗ ಆಗುತ್ತಿರುವುದೇ ಬೇರೆ.

ಗೆದ್ದೇ ಗೆಲ್ಲುತ್ತೆ ಬೆಂಗಳೂರು ತಂಡ!

ಆರ್‌ಸಿಬಿ.. ಆರ್‌ಸಿಬಿ.. ಆರ್‌ಸಿಬಿ.. ಹೀಗೆ ಎಲ್ಲೆಲ್ಲೂ ಆರ್‌ಸಿಬಿ ತಂಡ ಟ್ರೆಂಡ್ ಹುಟ್ಟುಹಾಕಿ ಹವಾ ಎಬ್ಬಿಸಿದೆ. ನಮ್ಮ ಬೆಂಗಳೂರು ತಂಡವಾದ ಆರ್‌ಸಿಬಿ ಗೆದ್ದೇ ಗೆಲ್ಲುತ್ತೆ, ಉಪಾಂತ್ಯಕ್ಕೆ ತಲುಪಲಿದೆ ಅಂತಾ ಫ್ಯಾನ್ಸ್ ಕಾಯುತ್ತಿದ್ದಾರೆ. ಇದೇ ಸಮಯದಲ್ಲಿ ಆರ್‌ಸಿಬಿ ತಂಡ ಸಕಲ ಸಿದ್ಧತೆ ಆರಂಭಿಸಿದೆ. ಮತ್ತೊಂದು ಕಡೆ ಪಂದ್ಯ ನೋಡಲು ಕಾಯುತ್ತಿರುವ ಆರ್‌ಸಿಬಿ ಫ್ಯಾನ್ಸ್ ಎಲ್ಲೆಲ್ಲೂ ಟ್ರೆಂಡ್ ಸೃಷ್ಟಿಸುತ್ತಿದ್ದಾರೆ. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಆರ್‌ಸಿಬಿ ಮತ್ತು ಚೆನ್ನೈ ಪಂದ್ಯ ಹವಾ ಎಬ್ಬಿಸಿದೆ. ಹಾಗೇ ಟಿಕೆಟ್‌ಗೆ ಕೂಡ ಭಾರಿ ಡಿಮ್ಯಾಂಡ್ ಇದೆ. ಆದರೆ ಮಳೆ ಮಾತ್ರ ಬರಬಾರದು ಅಷ್ಟೇ!

ದಿನೇಶ್ ಕಾರ್ತಿಕ್ ಅದ್ಭುತ ಆಟಗಾರ

ಆರ್‌ಸಿಬಿ ತಂಡಕ್ಕೆ ದಿನೇಶ್ ಕಾರ್ತಿಕ್ ಎಂಟ್ರಿ ಕೊಟ್ಟ ನಂತರ ಭರ್ಜರಿ ಸೌಂಡ್ ಮಾಡ್ತಿದ್ದಾರೆ. ಅದ್ರಲ್ಲೂ ಹಲವು ಪಂದ್ಯಗಳಲ್ಲಿ ಆರ್‌ಸಿಬಿ ಗೆದ್ದು ಬೀಗಲು ಇದೇ ದಿನೇಶ್ ಕಾರ್ತಿಕ್ ಬಹು ಮುಖ್ಯ ಪಾತ್ರ ವಹಿಸಿದ್ದರು. ಆದರೆ ದಿನೇಶ್ ಕಾರ್ತಿಕ್ ಅವರು ಈಗ ತಮ್ಮ ಐಪಿಎಲ್ ವೃತ್ತಿ ಜೀವನ ಮುಗಿಸಲು ಸಜ್ಜಾಗಿದ್ದು, ಅಭಿಮಾನಿಗಳಿಗೆ ಇದು ಬೇಸರದ ವಿಚಾರವಾಗಿದೆ. ಆದ್ರೂ ದಿನೇಶ್ ಕಾರ್ತಿಕ್ ಅವರು ನಿವೃತ್ತಿ ಪಡೆಯಲು ಗಟ್ಟಿ ನಿರ್ಧಾರ ಕೈಗೊಂಡಿದ್ದು ಈ ಕುರಿತು ಈಗ ಎಲ್ಲೆಲ್ಲೂ ಬೇಸರ ವ್ಯಕ್ತವಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಕೂಡ ಈ ಬಗ್ಗೆ, ಆರ್‌ಸಿಬಿ ಫ್ಯಾನ್ಸ್ ನೋವು ಹೊರಹಾಕುತ್ತಿದ್ದು. ದಯವಿಟ್ಟು ನೀವು ಮತ್ತೆ ಆಡಿ ಅಂತಿದ್ದಾರೆ ಅಭಿಮಾನಿಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+