ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಪಾಕಿಸ್ತಾನ ಕ್ರಿಕೆಟ್ ಕದನಕ್ಕೆ ಇಂಗ್ಲೆಂಡ್ ಆತಿಥ್ಯದ ಆಫರ್!

|
Google Oneindia Kannada News

ಲಂಡನ್, ಸೆ. 28: ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಪಂದ್ಯಾವಳಿಯ ಕ್ರೇಜ್ ಗಮನಿಸಿದ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಭರ್ಜರಿ ಆಫರ್ ನೀಡಿದ್ದ ವರದಿ ಬಂದಿದೆ. ಟೆಲಿಗ್ರಾಫ್ ವರದಿಯಂತೆ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ಕದನಕ್ಕೆ ಮೈದಾನ ಒದಗಿಸಿ ತಟಸ್ಥ ವೇದಿಕೆಯಲ್ಲಿ ಸರಣಿ ಆಯೋಜಿಸಲು ಇಸಿಬಿ ಮುಂದಾಗಿತ್ತು.

ಈ ಕುರಿತಂತೆ ಅತ್ಯುತ್ಸಾಹದಿಂದ ಭಾರತ ಪಾಕಿಸ್ತಾನ ಕ್ರಿಕೆಟ್ ಸರಣಿ ಆಯೋಜನೆ ಬಗ್ಗೆ ಭಾರತೀಯ ಕ್ರಿಕೆಟ್ ಮಂಡಳಿ(ಬಿಸಿಸಿಐ) ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಂದೆ ಇಸಿಬಿ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಎರಡು ಇಂಗ್ಲೆಂಡ್ ನೀಡಿದ್ದ ಆಫರನ್ನು ಬಿಸಿಸಿಐ ಹಾಗೂ ಪಿಸಿಬಿ ತಿರಸ್ಕರಿಸಿವೆ ಎಂದು ಯುಕೆ ಮೂಲದ ಟೆಲಿಗ್ರಾಫ್ ವರದಿ ಮಾಡಿದೆ.

Instagram ಗಳಿಕೆ: ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಕೊಹ್ಲಿಗೆ ಎಷ್ಟನೇ ಸ್ಥಾನ?Instagram ಗಳಿಕೆ: ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಕೊಹ್ಲಿಗೆ ಎಷ್ಟನೇ ಸ್ಥಾನ?

ಟೆಲಿಗ್ರಾಫ್ ಪತ್ರಿಕೆ ವರದಿಯಂತೆ, "ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಉಪಾಧ್ಯಕ್ಷ ಮಾರ್ಟಿನ್ ಡಾರ್ಲೋ ಅವರು ಪ್ರಸ್ತುತ ಟ್ವೆಂಟಿ-20 ಸರಣಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೊಂದಿಗೆ ಮಾತುಕತೆ ನಡೆಸಿದ್ದಾರೆ ಮತ್ತು ಭವಿಷ್ಯದಲ್ಲಿ ಆದರ್ಶಪ್ರಾಯವಾಗಿ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಇಂಗ್ಲೆಂಡ್‌ನ ಮೈದಾನಗಳನ್ನು ವೇದಿಕೆಯನ್ನಾಗಿ ನೀಡುವುದಾಗಿ ಆಫರ್ ಮಾಡಿದ್ದರು. "

ECB offers to host India-Pakistan test series as a neutral venue, BCCI-PCB reject proposal

"ದಕ್ಷಿಣ ಏಷ್ಯಾದ ದೊಡ್ಡ ಜನಸಂಖ್ಯೆಯನ್ನು ಹೊಂದಿರುವ ಯುಕೆಯಲ್ಲಿ ಪಂದ್ಯಗಳು ದೊಡ್ಡ ಜನಸಮೂಹವನ್ನು ಆಕರ್ಷಿಸುತ್ತವೆ" ಎಂದು ಪತ್ರಿಕೆಯು ಅವರ ಪ್ರಸ್ತಾಪದ ಕಾರಣವನ್ನು ಹೇಳಿದೆ.

ಆದರೆ, ಸದ್ಯದಲ್ಲಿಯೇ ಇಂತಹ ಸರಣಿ ನಡೆಯುವ ಸಾಧ್ಯತೆ ಇಲ್ಲವೇ ಇಲ್ಲ ಎಂದು ಬಿಸಿಸಿಐ ಹೇಳಿದೆ. ತಟಸ್ಥ ಸ್ಥಳಗಳಲ್ಲಿ ದ್ವಿಪಕ್ಷೀಯ ಸರಣಿಗಳನ್ನು ಆಡುವ ಪರವಾಗಿಲ್ಲ ಎಂದು ಅದು ತನ್ನ ನಿಲುವನ್ನು ವರದಿ ಮಾಡಿದೆ.

"PCB ತಟಸ್ಥ ಸ್ಥಳದಲ್ಲಿ ಭಾರತವನ್ನು ಆಡಲು ಉತ್ಸುಕವಾಗಿಲ್ಲ ಆದರೆ ಎರಡು ಮಂಡಳಿಗಳ ನಡುವಿನ ಬೆಳೆಯುತ್ತಿರುವ ಸಂಬಂಧವನ್ನು ತೋರಿಸುವ ECB ಯ ಕೊಡುಗೆಗೆ ಕೃತಜ್ಞರಾಗಿರಬೇಕು. ದೊಡ್ಡ ರಾಷ್ಟ್ರಗಳು ಮತ್ತೆ ಪಾಕಿಸ್ತಾನದ ಪ್ರವಾಸವನ್ನು ಪ್ರಾರಂಭಿಸುತ್ತಿದ್ದು, ಇಂಥ ಸಂದರ್ಭದಲ್ಲಿ ತಟಸ್ಥ ಸ್ಥಳದಲ್ಲಿ ಆಡಿದರೆ, ಒಂದು ಹೆಜ್ಜೆ ಹಿಂದಕ್ಕೆ ಇಟ್ಟಂತೆ ಆಗುತ್ತದೆ ಎಂದು ಪಿಸಿಬಿ ಪ್ರತಿಕ್ರಿಯಿಸಿದೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ.

ಏಷ್ಯಾ ಕಪ್ 2022ರಲ್ಲಿ ಎರಡೂ ದೇಶಗಳು ಪರಸ್ಪರ ಮುಖಾಮುಖಿಯಾಗಿದ್ದು, ಆಸ್ಟ್ರೇಲಿಯಾದಲ್ಲಿ ಐಸಿಸಿ ಟಿ20 ವಿಶ್ವಕಪ್ 2022ರಲ್ಲಿ ಮತ್ತೆ ಮುಖಾಮುಖಿಯಾಗಲಿವೆ. ಇತ್ತೀಚೆಗೆ ಒಲಿಂಪಿಕ್ಸ್ ವೇಳೆ ನಡೆದ ಮಹಿಳಾ ಕ್ರಿಕೆಟ್ ತಂಡಗಳ ಪಂದ್ಯ ಸೇರಿದಂತೆ ಭಾರತ- ಪಾಕಿಸ್ತಾನ ನಡುವಿನ ಪಂದ್ಯ ಅತ್ಯಧಿಕ ವೀಕ್ಷಣೆ ಪಡೆದುಕೊಳ್ಳುತ್ತದೆ, ಮೈದಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಕರೆ ತರಲು ಇಂಥ ಸರಣಿ ಅಗತ್ಯವಿದೆ ಎಂದು ಕ್ರಿಕೆಟ್ ಮಂಡಳಿ ಯೋಜನೆಯಾಗಿದೆ. ಆದರೆ, ಸದ್ಯಕ್ಕೆ ಇಸಿಬಿ ಆಫರ್ ತಿರಸ್ಕರಗೊಂಡಿದೆ.

English summary
The England and Wales Cricket Board (ECB) has offered to host Test matches between India and Pakistan as a neutral venue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X