ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಬೈನ ಎಕ್ಸ್‌ಪೋ 2020ದಲ್ಲಿ ಸರ್ಕಾರದ ಪಾಲುದಾರನಾಗಿ ಡ್ರೀಮ್ ಸ್ಪೋರ್ಟ್ಸ್

|
Google Oneindia Kannada News

ನವದೆಹಲಿ, ಅಕ್ಟೋಬರ್ 1: ಭಾರತದ ಪ್ರಮುಖ ಕ್ರೀಡಾ ತಂತ್ರಜ್ಞಾನ ಕಂಪನಿಯಾಗಿರುವ ಡ್ರೀಮ್ ಸ್ಪೋರ್ಟ್ಸ್ ಇಂದು ಪ್ರಗತಿ, ಅನುಶೋಧನೆ ಮತ್ತು ಸಂಸ್ಕೃತಿಯ ಕೇಂದ್ರವಾಗಿ ಭಾರತದ ಪುನರುತ್ಥಾನವನ್ನು ಪ್ರದರ್ಶಿಸಲು ಭಾರತ ಸರ್ಕಾರದೊಂದಿಗೆ ತನ್ನ ಪಾಲುದಾರಿಕೆಯನ್ನು ಘೋಷಿಸಿದೆ.

ಭಾಗವಹಿಸುವ 190 ದೇಶಗಳ ಪೈಕಿ ಒಂದಾಗಿರುವ ಇಂಡಿಯಾ ಪೆವಿಲಿಯನ್, ಕೋವಿಡ್ -19 ವಿರುದ್ಧ ಭಾರತದ ಅಸಾಧಾರಣ ಹೋರಾಟವನ್ನು ಪ್ರದರ್ಶಿಸುತ್ತದೆ ಮತ್ತು ಜಾಗತಿಕ ವ್ಯಾಪಾರಕ್ಕೆ ನರಮಂಡಲದ ಕೇಂದ್ರಬಿಂದುವಾಗಿ ದೇಶದ ಹೊರಹೊಮ್ಮುವಿಕೆಯನ್ನು ಪ್ರದರ್ಶಿಸಲಿದೆ. ಡ್ರೀಮ್ ಸ್ಪೋರ್ಟ್ಸ್ ಕ್ರೀಡೆ ಮತ್ತು ತಂತ್ರಜ್ಞಾನದ ಅನನ್ಯ ಛೇದಕದಲ್ಲಿರುವ ವ್ಯಾಪಕ ಅವಕಾಶವನ್ನು ಪ್ರದರ್ಶಿಸುವ ಜೊತೆಗೆ ಭಾರತೀಯ ಕ್ರೀಡಾ ಪರಿಸರ ವ್ಯವಸ್ಥೆಯೊಳಗಿನ ಡಿಜಿಟಲ್ ತಂತ್ರಜ್ಞಾನ ಮತ್ತು ಅನುಶೋಧನೆಗಳ ಮೂಲಕ ತರಬಹುದಾದ ದೊಡ್ಡ-ಪ್ರಮಾಣದ ಧನಾತ್ಮಕ ಪರಿವರ್ತನೆಗೆ ಜೀವ ತುಂಬಲಿದೆ.

ಸರ್ಕಾರಕ್ಕೆ ಜೂಜು-ಫ್ಯಾಂಟಸಿ ಗೇಮ್ ನಡುವಿನ ವ್ಯತ್ಯಾಸ ತಿಳಿಯಲಿ ಸರ್ಕಾರಕ್ಕೆ ಜೂಜು-ಫ್ಯಾಂಟಸಿ ಗೇಮ್ ನಡುವಿನ ವ್ಯತ್ಯಾಸ ತಿಳಿಯಲಿ

ಇಂದು ಇಂಡಿಯಾ ಪೆವಿಲಿಯನ್ ಉದ್ಘಾಟನೆ ಸಮಾರಂಭದಲ್ಲಿ ಎಫ್‌ಐಸಿಸಿಐ ಅಧ್ಯಕ್ಷ ಉದಯ್ ಶಂಕರ್ ಅವರು, "ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಗಳಲ್ಲಿ ಒಂದಾಗಿದೆ ಮತ್ತು ಮೂರನೇ ಅತಿದೊಡ್ಡ ಆರಂಭಿಕ ಪರಿಸರ ವ್ಯವಸ್ಥೆಯಾಗಿದೆ. ಸಂಭಾವ್ಯ ಹೂಡಿಕೆದಾರರಿಗೆ ಈ ಬೆಳವಣಿಗೆ, ಪ್ರಮುಖ ಅವಕಾಶಗಳು, ವ್ಯಾಪಾರ ಸಾಧನೆಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಸಾಂಸ್ಕೃತಿಕ ವೈವಿಧ್ಯತೆಯನ್ನು ಅನುಭವಿಸಲು ಇಂಡಿಯಾ ಪೆವಿಲಿಯನ್ ಜಾಗತಿಕ ವೇದಿಕೆ ಒದಗಿಸಲಿದೆ. ಕಳೆದ ಏಳು ವರ್ಷಗಳಲ್ಲಿ, ಭಾರತ ಸರ್ಕಾರದ ಆತ್ಮ ನಿರ್ಭರ ಭಾರತ್ ಮತ್ತು ಡಿಜಿಟಲ್ ಇಂಡಿಯಾವು ಬಹು ಹೊಸ ಆವಿಷ್ಕಾರ ಕೇಂದ್ರಗಳು ಮತ್ತು 50,000 ಕ್ಕೂ ಹೆಚ್ಚು ನೋಂದಾಯಿತ ಸ್ಟಾರ್ಟ್‍ಅಪ್‍ಗಳೊಂದಿಗೆ ಪ್ರಯೋಜನಗಳನ್ನು ಪಡೆದಿವೆ, ಇದು ಭಾರತದ ಡಿಜಿಟಲ್ ಪ್ರಯಾಣಕ್ಕೆ ಮಾರ್ಗಸೂಚಿಯನ್ನು ರೂಪಿಸಿದೆ. ಡ್ರೀಮ್ ಸ್ಪೋರ್ಟ್ಸ್ ಅಂತಹ ಒಂದು ಯಶಸ್ಸಿನ ಕಥೆಯಾಗಿದ್ದು ಅದು ಉದ್ಯಮ-ಕೇಂದ್ರಿತ ಸುಧಾರಣೆಗಳ ಪ್ರಭಾವವನ್ನು ಪ್ರತಿನಿಧಿಸುತ್ತದೆ ಮತ್ತು ಡಿಜಿಟಲ್ ಸಾಮಥ್ರ್ಯ ಮತ್ತು ಆಧುನಿಕ ಭಾರತವು ಜಗತ್ತಿಗೆ ತರಬಹುದಾದ ಪ್ರಗತಿಯ ಸಾಧ್ಯತೆಗಳನ್ನು ಪ್ರತಿನಿಧಿಸುತ್ತದೆ. ನಾವು ಅವರನ್ನು ಪಾಲುದಾರರಾಗಿ ಸ್ವಾಗತಿಸಲು ಎದುರು ನೋಡುತ್ತಿದ್ದೇವೆ" ಎಂದು ಬಣ್ಣಿಸಿದರು.

Dream Sports joins India’s march towards becoming a US$5 Trillion economy at Expo 2020 Dubai

ಪಾಲುದಾರಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಡ್ರೀಮ್ ಸ್ಪೋರ್ಟ್ಸ್ ಸಿಇಒ ಮತ್ತು ಸಹ-ಸಂಸ್ಥಾಪಕ ಹರ್ಷ ಜೈನ್, "ಡಿಜಿಟಲೀಕರಣ ಮತ್ತು ಸ್ವಾವಲಂಬನೆಯಲ್ಲಿ ಭಾರತ ಸರ್ಕಾರದ ಉಪಕ್ರಮಗಳನ್ನು ಬೆಂಬಲಿಸಲು ನಾವು ಸಂತೋಷಪಡುತ್ತೇವೆ. ಕ್ರೀಡೆ ಮತ್ತು ತಂತ್ರಜ್ಞಾನವನ್ನು ಒಟ್ಟಿಗೆ ತರುವ ಮೂಲಕ ಕ್ರೀಡೆಗಳನ್ನು ಉತ್ತಮಗೊಳಿಸುವುದು ನಮ್ಮ ಧ್ಯೇಯ. ಹಿಂದೆಂದಿಗಿಂತಲೂ ಅಭಿಮಾನಿಗಳನ್ನು ಕ್ರೀಡಾ ಚಟುವಟಿಕೆಗಳಲ್ಲಿ ಆಳವಾಗಿ ತೊಡಗಿಸಿಕೊಳ್ಳುವಂತೆ ಮಾಡುವ ಮೂಲಕ ಕ್ರೀಡೆಯ ಪ್ರಗತಿಗೆ ನೆರವಾಗುವ ಕ್ರೀಡಾ ಪರಿಸರವನ್ನು ಸೃಷ್ಟಿಸಲು ನಾವು ಬಯಸಿದ್ದೇವೆ. ಹಲವು ಕ್ರೀಡಾ ಕಂಪನಿಗಳಲ್ಲಿ ಹೂಡಿಕೆ ಮಾಡುವುದು, ಉದ್ಯೋಗ ಸೃಷ್ಟಿ ಮತ್ತು ತಳಮಟ್ಟದ ಉಪಕ್ರಮಗಳಲ್ಲಿ ಅಥ್ಲೀಟ್‍ಗಳಿಗೆ ನೆರವು ನೀಡುವ ಮೂಲಕ ಫ್ಯಾಂಟಸಿ ಕ್ರೀಡೆ ಉದ್ಯಮವನ್ನು ಬೆಳೆಸಿ, ಭಾರತದ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡುವ ನಿರೀಕ್ಷೆ ನಮ್ಮದು" ಎಮದು ಹೇಳಿದ್ದಾರೆ.

ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಒಂದು ವರ್ಷಕ್ಕೆ ಮುಂದೂಡಲ್ಪಟ್ಟ ಎಕ್ಸ್ ಪೋ 2020, ಇಂದಿನಿಂದ ಆರಂಭವಾಗಿದ್ದು, ಮಾರ್ಚ್ 31, 2022 ರಂದು ಮುಕ್ತಾಯಗೊಳ್ಳಲಿದೆ. ಭಾರತದ ಪೆವಿಲಿಯನ್ ಭಾರತದ 75 ವರ್ಷಗಳ ಸ್ವಾತಂತ್ರ್ಯದ ಆಚರಣೆಯನ್ನು ಪ್ರತಿಬಿಂಬಿಸುತ್ತದೆ ಹಾಗೂ ಇದನ್ನು "ಮುಕ್ತತೆ, ಅವಕಾಶ, ಬೆಳವಣಿಗೆ" ಎಂಬ ವಿಷಯದ ಮೇಲೆ ನಿರ್ಮಿಸಲಾಗಿದೆ. ಇದು ಇತ್ತೀಚಿನ ತಂತ್ರಜ್ಞಾನಗಳನ್ನು ಪ್ರದರ್ಶಿಸುತ್ತದೆ ಮತ್ತು ವರ್ಧಿತ ರಿಯಾಲಿಟಿ ಮತ್ತು ಪ್ರೊಜೆಕ್ಷನ್ ಮ್ಯಾಪಿಂಗ್‍ನಿಂದ ನಡೆಸಲ್ಪಡುವ ಸ್ಥಾಪನೆಗಳೊಂದಿಗೆ ಸುತ್ತುವರಿದ, ಭವಿಷ್ಯದ ವಾತಾವರಣವನ್ನು ಸೃಷ್ಟಿಸುತ್ತದೆ.

ದುಬೈ ಎಕ್ಸ್ ಪೋದಲ್ಲಿ ಸುಮಾರು 192ಕ್ಕೂ ಅಧಿಕ ದೇಶಗಳನ್ನು ಪ್ರತಿನಿಧಿಸುವ ವಿವಿಧ ಕ್ಷೇತ್ರಗಳ ಸಂಸ್ಥೆಗಳು, ಉದ್ದಿಮೆಗಳ ಮಳಿಗೆ ಮತ್ತು ಜಾಗತಿಕವಾಗಿ ಗುರುತಿಸಿಕೊಂಡ ಶಿಕ್ಷಣ ಸಂಸ್ಥೆಗಳು, ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಸಂಸ್ಥೆಗಳು ಭಾಗವಹಿಸುತ್ತವೆ.

English summary
Dream Sports, India's leading sports technology company, announced its partnership with the Government of India to showcase India’s resurgence as a hub for growth, innovation and culture.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X