ಹಳ್ಳಿ ಆಟಗಳ ಹಿಂದಿರುವ ಆ ವಿಶೇಷತೆಗಳು ಗೊತ್ತಾ?
ಇವತ್ತು ಮಕ್ಕಳು ಆಟಗಳನ್ನು ಮೊಬೈಲ್‌ನಲ್ಲಿ ಆಡಲು ಶುರು ಮಾಡಿದ್ದಾರೆ. ಆನ್‌ಲೈನ್ ಗೇಮ್‌ಗಳಲ್ಲಿ ನಿರತರಾಗುತ್ತಿರುವುದರಿಂದ ದೈಹಿಕವಾಗಿ, ಮಾನಸಿಕವಾಗಿ ದುರ್ಬಲರಾಗುತ್ತಿದ್ದಾರೆ. ಮಕ್ಕಳು ಆಡುತ್ತಾ ಬೆಳೆಯಬೇಕೆನ್ನುವುದು ರೂಢಿಯಲ್ಲಿರುವ ಮಾತು. ಆದ್ದರಿಂದ ಹಿಂದಿನ ಕಾಲದಲ್ಲಿ ದೈಹಿಕ ಮತ್ತು ಬುದ್ದಿಗೆ ಕಸರತ್ತು ನೀಡುವ ಆಟಗಳನ್ನು ಆಡುತ್ತಿದ್ದರು. ಆದರೀಗ ಆನ್ ಲೈನ್ ಗೇಮ್ ಗಳಿಗೆ ಮಕ್ಕಳು ದಾಸರಾಗುತ್ತಿದ್ದಾರೆ. ಅದರಾಚೆಗೆ ಕ್ರಿಕೆಟ್ ಆಡುತ್ತಾರೆ. ಉಳಿದಂತೆ ಎಲ್ಲ ಆಟಗಳು ಸದ್ದಿಲ್ಲದೆ ಮಕ್ಕಳಿಂದ ದೂರವಾಗುತ್ತಿವೆ.
ಮೂರ್ನಾಲ್ಕು ದಶಕಗಳ ಹಿಂದೆ ಎಲ್ಲಿ ನೋಡಿದರಲ್ಲಿ ಮಕ್ಕಳು ತಮಗೆ ತೋಚಿದ ಆಟವನ್ನೆಲ್ಲ ಆಡುತ್ತಿದ್ದರು. ಗೋಲಿ, ಗೋಣಿಚೀಲ ಓಟ, ಮರಕೋತಿ, ಬುಗುರಿ, ಖೋಖೋ ಹೀಗೆ ವಿವಿಧ ಬಗೆಯ ಆಟಗಳನ್ನು ಹಳ್ಳಿಗಳಲ್ಲಿ ಆಡಿದರೆ, ಇದರ ಜೊತೆಗೆ ಫುಟ್ ಬಾಲ್, ವಾಲಿಬಾಲ್, ಕ್ರಿಕೆಟ್ ಆಟಗಳನ್ನು ಪಟ್ಟಣಗಳಲ್ಲಿ ಆಡುತ್ತಿದ್ದರು. ಒಟ್ಟಾರೆ ಹೆಚ್ಚಿನ ಮಕ್ಕಳು ದೈಹಿಕ ಕಸರತ್ತಿನ ಆಟಗಳನ್ನೇ ಆಡುತ್ತಿದ್ದರು. ಆದರೆ ಈಗ ಮೊಬೈಲ್ ಬಂದ ಬಳಿಕ ಮಕ್ಕಳು ಆನ್ ಲೈನ್ ಗೇಮ್‌ಗಳಲ್ಲಿ ಹೆಚ್ಚಿನ ಸಮಯಗಳನ್ನು ಕಳೆಯುತ್ತಿರುವುದರಿಂದ ಆರೋಗ್ಯದ ಸಮಸ್ಯೆಗಳು ಎದುರಾಗುತ್ತಿವೆ.

ಕಾಲಕ್ಕೆ ತಕ್ಕಂತೆ ನಾವು ಬದಲಾಗಬೇಕು ಎನ್ನುವುದು ಪ್ರಕೃತಿ ನಿಯಮ. ಹೀಗಿರುವಾಗ ಹಿಂದಿನ ಕಾಲದಲ್ಲಿ ಅವತ್ತಿನ ಪರಿಸರಕ್ಕೆ ತಕ್ಕಂತೆ ದೊರೆಯುತ್ತಿದ್ದ ಸೌಲಭ್ಯಗಳನ್ನು ಬಳಸಿಕೊಂಡು ಆಟವಾಡುತ್ತಿದ್ದರು. ಜತೆಗೆ ಹಿರಿಯರು ಮಕ್ಕಳನ್ನು ಸೇರಿದಂತೆ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಊರ ಮೈದಾನಗಳಲ್ಲಿ ಗ್ರಾಮೀಣ ಕ್ರೀಡಾಕೂಟಗಳನ್ನು ನಡೆಸುತ್ತಿದ್ದರು. ಇದರಲ್ಲಿ ಮಕ್ಕಳು, ಮಹಿಳೆಯರು ವೃದ್ಧರು ಹೀಗೆ ಎಲ್ಲರೂ ಸೇರಿ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಸೋಲು ಗೆಲುವಿನ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಒಟ್ಟಾಗಿ ಕಲೆತು ಆಡುವುದು ಮುಖ್ಯವಾಗಿತ್ತು.
ಹಳ್ಳಿ ಆಟಗಳು ಬರೀ ಕ್ರೀಡೆಯಷ್ಟೇ ಆಗಿರಲಿಲ್ಲ ಕಾಲ ಬದಲಾದಂತೆ ಹಳ್ಳಿ ಆಟಗಳು ನಿಧಾನವಾಗಿ ತಮ್ಮ ವೈಭವವನ್ನು ಕಳೆದುಕೊಳ್ಳುತ್ತಾ ಹೋಗಿರಬಹುದು. ಆದರೆ ಆ ದಿನಗಳನ್ನು ಮತ್ತು ಹಳ್ಳಿ ಆಟಗಳನ್ನು ಹತ್ತಿರದಿಂದ ನೋಡಿದವರು ಅದರ ಬಗ್ಗೆ ಹಾಗೂ ಅದರ ಮಹತ್ವವನ್ನು ತುಂಬಾ ಚೆನ್ನಾಗಿ ಅರಿತುಕೊಂಡಿದ್ದರು.
ಅವತ್ತಿನ ಜನ ಕೂಡ ಹಳ್ಳಿ ಆಟಗಳನ್ನು ನೋಡುತ್ತಾ ಅದರ ಜೊತೆಗೆ ಬೆಳೆಯುತ್ತಿದ್ದರು. ಅವುಗಳೆಲ್ಲವೂ ಅವರ ಬದುಕಿಗೆ ಪೂರಕವಾಗಿದ್ದವು. ಅವು ಬರೀ ಕ್ರೀಡೆಯಾಗಿರಲಿಲ್ಲ ಬದುಕುವುದನ್ನು ಕಲಿಸುವ ಪಾಠಗಳಾಗಿದ್ದವು. ಪ್ರತಿಯೊಂದು ಆಟವೂ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರ ನೀಡುವ ವ್ಯಾಯಾಮಗಳಾಗಿದ್ದವು. ಅವು ದೈಹಿಕವಾಗಿಯೂ ಮಾನಸಿಕವಾಗಿಯೂ ಖುಷಿ, ಸಂತಸಪಡಲು ದಾರಿ ಮಾಡಿಕೊಡುತ್ತಿದ್ದವು.
ಏಕೆಂದರೆ ಅವತ್ತಿನ ಪ್ರತಿ ಆಟದ ಹಿಂದೆಯೂ ಬದುಕಿಗೆ ಹತ್ತು ಹಲವು ಪಾಠಗಳಿದ್ದವು. ದೈಹಿಕ ಸದೃಢತೆಗೂ ಅವು ಪೂರಕವಾಗಿದ್ದವು. ಅವುಗಳನ್ನು ಯಾವ ಕಾಲದಲ್ಲಿ ಆಡಬೇಕು ಎಂಬ ಕಟ್ಟಳೆಗಳಿದ್ದವು. ಆಗ ಬೇಟೆ ಆಡುವುದೇ ಮುಖ್ಯ ಆಗಿದ್ದುದರಿಂದ ಗುರಿಯಿಡಲು ಅನುಕೂಲ ಆಗಲೆಂದು ಗೋಲಿ, ಚಿಣ್ಣಿದಾಂಡು, ಪಿಕ್ಕಿನಾಟ ಆಡುವುದನ್ನು ಮಕ್ಕಳಿಗೆ ಹೇಳಿಕೊಡಲಾಗುತ್ತಿತ್ತು.
ಮಕ್ಕಳನ್ನು ಯೋಧರನ್ನಾಗಿಸುವ ಸಲುವಾಗಿ ಅವರಿಗೆ ಕೋಲು ಹಾರಿಸುವ ಆಟ, ದೇಹದ ಜಡತ್ವ ಹೊಡೆದೋಡಿಸಿ ಉತ್ಸಾಹ ತುಂಬಿಸುವ ಮತ್ತು ಬೆನ್ನಟ್ಟಿ ಅಕ್ರಮಣ ಪಟುತ್ವದ ಖೋಖೋ ಆಟ, ವ್ಯೂಹ ರಚನೆಯ ಹುಲಿ ಹಸುವಿನ ಆಟವನ್ನು ಚಿಕ್ಕಂದಿನಿಂದಲೇ ಆಡಿಸಿ ತಯಾರು ಮಾಡುತ್ತಿದ್ದರು.
ಗ್ರೀಕರು ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಿದ್ದರು: ಸಮರ ಸನ್ನದ್ಧತೆಗೆ ರಾಜನೀತಿಗೆ ಅನುಕೂಲ ಆಗುವ ಬೇಟೆಯ ಆಟ, ತಂತ್ರವನ್ನು ಕಲಿಸುವ ಚದುರಂಗ ಮುಂತಾದ ಆಟಗಳು ಬರೀ ಆಟ ಆಗಿರಲಿಲ್ಲ. ಅವುಗಳೆಲ್ಲವೂ ಮಕ್ಕಳು ಬೆಳೆದು ದೊಡ್ಡವರಾದಾಗ ಸಹಾಯಕ್ಕೆ ಬರುತ್ತಿದ್ದವು. ಇವು ಕೇವಲ ಮನರಂಜನೆ ಮಾತ್ರ ಅಲ್ಲದೆ ಬದುಕಿಗೂ ಮಾರ್ಗದರ್ಶಿ ಆಗಿದ್ದವು.
ಇವು ನಮ್ಮ ದೇಶದಲ್ಲಿ ಮಾತ್ರವಲ್ಲದೆ, ಈಜಿಪ್ಟ್, ಚೀನಾ, ಗ್ರೀಸ್, ರೋಮ್, ಆಸ್ಟ್ರೇಲಿಯಾ, ಭಾರತ ಮೊದಲಾದ ದೇಶಗಳಲ್ಲಿ ಬೇಟೆ, ಮಲ್ಲಯುದ್ದ, ಬಿಲ್ಲು ಬಾಣಗಳ ಪ್ರದರ್ಶನ, ಭಾರ ಎತ್ತುವುದು, ಗೋಲಿ, ಚೆಂಡು, ಬುಗುರಿ ಆಟಗಳು ಪ್ರಚಲಿತದಲ್ಲಿದ್ದವು ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಇನ್ನು ಗ್ರೀಕರು ತಮ್ಮ ಬದುಕಿನಲ್ಲಿ ಹೆಚ್ಚಿನ ಸಮಯವನ್ನು ಕ್ರೀಡೆಗಳಿಗಾಗಿಯೇ ಮೀಸಲಿಟ್ಟಿದ್ದರು. ಅಷ್ಟೇ ಅಲ್ಲದೆ ಅವರು, ಆಟ ಪಾಠಗಳಿಂದಲೇ ತಮ್ಮ ದೈಹಿಕ ಮತ್ತು ಬೌದ್ಧಿಕ ಬಲ ಬೆಳೆಸಿಕೊಂಡಿದ್ದರು.
ಅವರ ಸಾಧನೆಯಿಂದಲೇ ಒಲಂಪಿಕ್ಸ್ ಕ್ರೀಡೆಗಳು ರೂಪುಗೊಂಡಿದ್ದು ಸಾಕ್ಷಿಯಾಗಿ ನಮ್ಮ ಮುಂದೆ ನಿಂತಿದೆ. ಇದೆಲ್ಲವನ್ನು ಗಮನಿಸಿದರೆ, ಹಳ್ಳಿ ಆಟಗಳ ಮಹತ್ವ ಅರಿವಾಗುತ್ತದೆ. ಇವತ್ತು ನಾವು ಹಳ್ಳಿ ಆಟಗಳನ್ನು ಆಡಿ ಎಂದು ಮಕ್ಕಳಿಗೆ ಹೇಳುವುದು ಮೂರ್ಖತನವಾಗಬಹುದು. ಆದರೆ ಕುಳಿತಲ್ಲೇ ಕುಳಿತು ಆನ್ ಲೈನ್ ಗೇಮ್ ಗಳಲ್ಲಿ ತಲ್ಲೀನರಾಗುವುದನ್ನು ತಡೆದು ದೈಹಿಕ ಕಸರತ್ತು ನೀಡುವ ಆಟಗಳತ್ತ ಆಸಕ್ತಿ ತೋರುವಂತೆ ಮಾಡುವುದು ಇವತ್ತಿನ ಅಗತ್ಯತೆ ಆಗಿದೆ.
-
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ












Click it and Unblock the Notifications