ಆಸ್ಟ್ರೇಲಿಯಾ ತಂಡಕ್ಕೆ ಸರಿಯಾಗಿ ಕೊಟ್ಟು ಸೇಡು ತೀರಿಸಿಕೊಂಡ ರೋಹಿತ್ ಶರ್ಮಾ!
ರೋಹಿತ್ ಶರ್ಮಾ ಇಂದು ಆಸ್ಟ್ರೇಲಿಯಾ ತಂಡದ ವಿರುದ್ಧ ಅಬ್ಬರಿಸಿದ್ದಾರೆ. ಅದರಲ್ಲೂ 2023ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಹೀನಾಯ ಸೋಲು ಕಂಡಿತ್ತು. ಹೀಗೆ ಭಾರತ ಸೋಲು ಕಂಡ 8 ತಿಂಗಳ ಒಳಗೆ, ಭಾರತ ಸೇಡು ತೀರಿಸಿಕೊಂಡಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡ 2024ರ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿಳಲು ಭಾರತ ಮುಹೂರ್ತ ಫಿಕ್ಸ್ ಮಾಡಿದೆ. ಹಾಗಿದ್ರೆ ರೋಹಿತ್ ಶರ್ಮಾ ಹೆಂಗೆಲ್ಲಾ ಸೇಡನ್ನ ತೀರಿಸಿಕೊಂಡರು ಗೊತ್ತಾ? ಮುಂದೆ ಓದಿ.
ಆಸ್ಟ್ರೇಲಿಯಾ ವಿರುದ್ಧದ, ಅಮೆರಿಕದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8 ಹಂತದ 3ನೇ ಪಂದ್ಯದಲ್ಲಿ ಭಾರತ ಆರಂಭದಲ್ಲೇ ಎಡವಿತ್ತು. ಮೊದಲಿಗೆ ಟಾಸ್ ಸೋತು ಹಿನ್ನಡೆ ಕಂಡ ಭಾರತ, ಅನಿವಾರ್ಯ ಸ್ಥಿತಿಯಲ್ಲಿ ಬ್ಯಾಟಿಂಗ್ ಆರಂಭ ಮಾಡಿತ್ತು. ಇದೇ ವೇಳೆ, ವಿರಾಟ್ ಕೊಹ್ಲಿ ಮತ್ತೆ ಸೊನ್ನೆ ಸುತ್ತಿ, ಡಕ್ ಔಟ್ ಆದರು. ಈ ಮೂಲಕ ವಿರಾಟ್ ಕೊಹ್ಲಿ ಔಟಾಗಿದ್ದು ಚಿಂತೆ ಹೆಚ್ಚಿಸಿತ್ತು. ಆದರೆ ಆಗಲೇ ರೋಹಿತ್ ಶರ್ಮಾ ರೊಚ್ಚಿಗೆದ್ದು ಕಾಂಗರೂ ಪಡೆಯ ಆಟಾಗಾರರಿಗೆ ಚಳಿ ಬಿಡಿಸಿದರು.

ಶತಕ ಬಾರಿಸಲು ರೋಹಿತ್ ಸಿದ್ಧ!
ರೋಹಿತ್ ಶರ್ಮಾ ಕೇವಲ 19 ಬಾಲ್ ಆಡಿ ಅರ್ಧ ಶತಕ ಬಾರಿಸಿದರು, ಈ ಮೂಲಕ ಭಾರತ ತಂಡಕ್ಕೆ ಬೆನ್ನೆಲುಬಾಗಿ ನಿಂತರು. ಇತ್ತೀಚಿನ ಮಾಹಿತಿ ಪ್ರಕಾರ ಭಾರತ ತಂಡವು 10 ಓವರ್ ಆಡಿದ್ದು, 114 ರನ್‌ಗೆ 2 ವಿಕೆಟ್ ಕಳೆದುಕೊಂಡಿದೆ. ಇನ್ನು ಭಾರತ ಟೀಂ ಕ್ಯಾಪ್ಟನ್ ರೋಹಿತ್ ಶರ್ಮಾ 36 ಬಾಲ್ ಆಡಿ 89 ರನ್ ಗಳಿಸಿದ್ದಾರೆ. 7 ಬೌಂಡರಿ & 8 ಸಿಕ್ಸರ್ ಸಿಡಿಸಿ 244.44 ಸರಾಸರಿಯಲ್ಲಿ ಔಟಾಗದೆ ಆಟವಾಡುತ್ತಿದ್ದಾರೆ ರೋಹಿತ್.
ಸೋತರೆ ಆಸ್ಟ್ರೇಲಿಯಾ ಮನೆ ಕಡೆಗೆ!
2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಈಗ ಸೂಪರ್-8 ಹಂತದ ಪಂದ್ಯಗಳು ನಡೀತಾ ಇವೆ. ಈಗಾಗಲೇ ಆಸ್ಟ್ರೇಲಿಯಾ 2 ಮ್ಯಾಚ್ ಆಡಿ 1 ಮ್ಯಾಚ್ ಸೋತಿದೆ. ಹಾಗೇ ಕೇವಲ ಒಂದೇ ಒಂದು ಪಂದ್ಯ ಗೆದ್ದಿದೆ. ಹೀಗಾಗಿ ಆಸ್ಟ್ರೇಲಿಯಾ ಇಂದು ಭಾರತದ ವಿರುದ್ಧವೂ ಪಂದ್ಯ ಸೋತರೆ ಒಟ್ಟು 3 ಪಂದ್ಯದಲ್ಲಿ 2 ಪಂದ್ಯ ಸೋತಂತೆ ಆಗುತ್ತದೆ. ಆದರೆ ಭಾರತ ತಂಡ ಗಾಗಲೇ 2 ಮ್ಯಾಚ್ ಗೆದ್ದು, ಈಗ 3ನೇ ಪಂದ್ಯ ಗೆಲ್ಲಲು ಸಜ್ಜಾಗಿದೆ.
ಸೇಡಿಗೆ ಸೇಡು ಗ್ಯಾರಂಟಿ?
ಆಸ್ಟ್ರೇಲಿಯಾ ತಂಡವು ಇಂದು ಸೋತರೆ, ಅಫ್ಘಾನಿಸ್ತಾನ ತಂಡಕ್ಕೆ ಇದು ವರವಾಗಲಿದೆ. ಯಾಕಂದ್ರೆ ಅಫ್ಘಾನ್ ತಂಡ ಸೆಮಿಫೈನಲ್ ಪ್ರವೇಶ ಬಹುತೇಕ ಪಕ್ಕಾ ಆಗಲಿದೆ. ಹೀಗಾಗಿ ಇಂದು ಭಾರತ ಗೆಲ್ಲಬೇಕು ಅಂತಾ, ಅಫ್ಘಾನ್ ತಂಡ ಕೂಡ ಬೇಡಿಕೊಳ್ಳುತ್ತಿದೆ. ಈಗಿನ ಸ್ಥಿತಿ ನೋಡಿದರೆ ಭಾರತ ತಂಡ ಈ ಪಂದ್ಯ ಗೆದ್ದು, ಆಸ್ಟ್ರೇಲಿಯಾ ಆಟಗಾರರಿಗೆ ಮನೆಯ ದಾರಿ ತೋರಿಸುವುದು ಬಹುತೇಕ ಪಕ್ಕಾ ಆಗಿದೆ. ಹಾಗೇ 2023ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ಫೈನಲ್ ಪಂದ್ಯ ಸೋತಿದ್ದಕ್ಕೆ ಸೇಡು ತೀರಿಸಿಕೊಂಡಂತೆ ಆಗಲಿದೆ.












Click it and Unblock the Notifications