ಐಸಿಸಿ ವಿಶ್ವಕಪ್: ಪಾಕಿಸ್ತಾನ ತಂಡ ತನ್ನದೇ ತಪ್ಪಿನಿಂದ ವಿಶ್ವಕಪ್ ಅಖಾಡದಿಂದ ಹೊರಗೆ ಬಿದ್ದಿದ್ದು ಹೇಗೆ?
ಪಾಕಿಸ್ತಾನ ಕ್ರಿಕೆಟ್ ತಂಡ ತನಗೆ ಸಿಕ್ಕಿದ್ದ ಅತ್ಯದ್ಭುತ ಅವಕಾಶ ಕೈಚೆಲ್ಲಿಬಿಟ್ಟಿದೆ. ಅದ್ರಲ್ಲೂ ಭಾರತ ನೆಲದಲ್ಲಿ ನಡೆಯುತ್ತಿರುವ 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಅಖಾಡದಲ್ಲಿ ಕನಿಷ್ಠ ಸೆಮಿಫೈನಲ್ ತಲುಪುವ ಅವಕಾಶ ಪಾಕ್‌ಗೆ ಇತ್ತು. ಆದರೆ ಆಗಿದ್ದು ಉಲ್ಟಾ ಯಾಕಂದರೆ, ತನ್ನ ಕೈಯಲ್ಲಿದ್ದ ಸುಲಭ ಅವಕಾಶಗಳನ್ನ ಪಾಕಿಸ್ತಾನ ಆಟಗಾರರು ಕೈಚೆಲ್ಲಿ ಕೂತಿದ್ದಾರೆ. ಈ ಮೂಲಕ ಇನ್ನು ಕೆಲ ಗಂಟೆಗಳಲ್ಲಿ ಲಗೇಜ್ ತುಂಬಿಕೊಂಡು ಪಾಕಿಸ್ತಾನದ ಆಟಗಾರರು ತಮ್ಮ ತಮ್ಮ ಊರಿನ ದಾರಿ ಹಿಡಿಯಲಿದ್ದಾರೆ.
ವಿಶ್ವಕಪ್ ಆರಂಭದಲ್ಲಿ, ನೆದರ್ಲ್ಯಾಂಡ್ಸ್ & ಶ್ರೀಲಂಕಾ ವಿರುದ್ಧ ಗೆದ್ದು ಬೀಗಿದ್ದ ಪಾಕಿಸ್ತಾನ ನಂತರ ಭಾರತದ ವಿರುದ್ಧ ಹೀನಾಯ ಸೋಲು ಕಂಡಿತ್ತು. ಅಲ್ಲಿಂದ ಶುರುವಾದ ಪಾಕ್‌ನ ಹೀನಾಯ ಪ್ರದರ್ಶನ ಸರಿ ಹೋಗಲೇ ಇಲ್ಲ. ಅದರಲ್ಲೂ ಅಫ್ಘಾನಿಸ್ತಾನದ ವಿರುದ್ಧ ಕೂಡ ಹೀನಾಯ ಸೋಲು ಕಂಡಿತ್ತು.

ಈ ಹಿನ್ನೆಲೆ 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಲೀಗ್ ಹಂತದಲ್ಲೇ ಪಾಕಿಸ್ತಾನ ನಿರ್ಗಮಿಸುವುದು ಪಕ್ಕಾ ಆಗಿತ್ತು. ಆದರೂ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆದ್ದು ಬೀಗಿದ್ದ ಹಿನ್ನೆಲೆ, ಪಾಕಿಸ್ತಾನದ ಆಸೆ ಜೀವಂತವಾಗಿತ್ತು. ಈಗ ಇಂಗ್ಲೆಂಡ್ ವಿರುದ್ಧ ಕೊನೆಯ ಪಂದ್ಯ ಹೀನಾಯವಾಗಿ ಸೋತಿದೆ ಪಾಕ್.
ಪಾಕ್ ಮಾಜಿ ಆಟಗಾರರಿಂದಲೇ ಆಕ್ರೋಶ
ಅಂದಹಾಗೆ ಪಾಕಿಸ್ತಾನ ಯಾರ ಯಾರ ಮೇಲೊ ಸೋತಾಗ ಆಕ್ರೋಶ ವ್ಯಕ್ತವಾಗಲೇ ಇಲ್ಲ. ಆದರೆ ಯಾವಾಗ ಅಫ್ಘಾನಿಸ್ತಾನದ ವಿರುದ್ಧ ಪಾಕಿಸ್ತಾನ 8 ವಿಕೆಟ್‌ಗಳ ಹೀನಾಯ ಸೋಲು ಕಂಡಿತ್ತೋ, ಅಲ್ಲಿಂದ ನಂತರ ಪಾಕಿಸ್ತಾನದ ವಿರುದ್ಧ ಭಾರಿ ಆಕ್ರೋಶ ಮೊಳಗಿತ್ತು.
ಪಾಕ್ ತಂಡ ಅಫ್ಘಾನಿಸ್ತಾನ ವಿರುದ್ಧ 283 ರನ್‌ಗಳ ಟಾರ್ಗೆಟ್ ನೀಡಿದ್ರೂ, 8 ವಿಕೆಟ್ ಹೀನಾಯ ಸೋಲು ಕಂಡಿದ್ದು ದೊಡ್ಡ ಆಘಾತ ನೀಡಿತ್ತು. ನಂತರ ದಕ್ಷಿಣ ಆಫ್ರಿಕಾ ವಿರುದ್ದ ಕೂಡ 1 ವಿಕೆಟ್ ಅಂತರದಲ್ಲಿ ಪಾಕಿಸ್ತಾನ ಸೋತು ಸುಣ್ಣವಾಗಿತ್ತು. ಈಗ ಇಂಗ್ಲೆಂಡ್ ವಿರುದ್ಧವೂ 93 ರನ್‌ಗಳ ಸೋಲು ಕಂಡಿದೆ ಭಾರತದ ನೆರೆ ರಾಷ್ಟ್ರ ಪಾಕಿಸ್ತಾನ.

ಭಾರತ ತಂಡಕ್ಕೆ ನ್ಯೂಜಿಲೆಂಡ್ ಎದುರಾಳಿ
ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರ ಅಖಾಡದಲ್ಲಿ ಈಗಾಗ್ಲೇ ದಕ್ಷಿಣ ಆಫ್ರಿಕಾ & ಆಸ್ಟ್ರೇಲಿಯಾ ಟೀಂ ಮಧ್ಯೆ ಫೈಟ್ ಫಿಕ್ಸ್ ಆಗಿದೆ. ಆದರೆ ಭಾರತ ತಂಡ ಯಾರ ವಿರುದ್ಧ ಕದನ ಕಣಕ್ಕೆ ಇಳಿಯುತ್ತದೆ? ಅನ್ನೋ ಪ್ರಶ್ನೆ ಶತಕೋಟಿ ಭಾರತೀಯರನ್ನು ಕಾಡ್ತಿತ್ತು. ಈಗ ಶತಕೋಟಿ ಭಾರತೀಯರ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಅದು ಪಾಕಿಸ್ತಾನದ ಕ್ರಿಕೆಟ್ ತಂಡ ಮಾಡಿಕೊಂಡ ದೊಡ್ಡ ಎಡವಟ್ಟಿನಿಂದಾಗಿ, ನ್ಯೂಜಿಲೆಂಡ್ ತಂಡ ಎದ್ದೂ ಬಿದ್ದೂ ಸೆಮಿಫೈನಲ್ ತಲುಪಿದೆ. ಹೀಗಾಗಿ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಸೆಮಿಫೈನಲ್ ಕದನ ನಡೆಯಲಿದೆ. ನವೆಂಬರ್ 15 ಕ್ಕೆ ಭಾರತ & ನ್ಯೂಜಿಲೆಂಡ್ ನಡುವೆ ಮೊದಲ ಸೆಮಿಫೈನಲ್ ನಡೆಯಲಿದೆ.
ಮೈದಾನದಲ್ಲಿ ಪವಾಡ ನಡೆಯಬೇಕಿತ್ತು ಕಣ್ರೀ!
337 ರನ್ ಗಳಿಸಿ 338 ರನ್ ಗುರಿ ನೀಡಿದ ಇಂಗ್ಲೆಂಡ್ ಟೀಂ ಪಾಕಿಸ್ತಾನ ಟೀಂ ಹೆಡೆಮುರಿ ಕಟ್ಟಿದೆ. ಪಾಕಿಸ್ತಾನ ಇಂದು ಇಂಗ್ಲೆಂಡ್ ವಿರುದ್ಧ ಗೆದ್ದಿದ್ದರೂ 400 ಕ್ಕೂ ಹೆಚ್ಚು ರನ್ ಗಳಿಸಿ, 112 ರನ್ ಒಳಗೆ ಕಟ್ಟಿಹಾಕಬೇಕಿತ್ತು ಆದ್ರೆ ಇಂಗ್ಲೆಂಡ್ 112 ರನ್‌ಗಳಿಗೆ ಹೀನಾಯವಾಗಿ ಆಲೌಟ್ ಆಗೋದು ಅನುಮಾನವಾಗಿತ್ತು. ಹೀಗಿದ್ದಾಗಲೇ ಪಾಕಿಸ್ತಾನ ಮೊದಲಿಗೆ ಟಾಸ್ ಗೆದ್ದು ತನ್ನ ಇನ್ನಿಂಗ್ಸ್ ಆರಂಭಿಸಬೇಕಿತ್ತು, ಆದರೆ ಮೊದಲಿಗೆ ಟಾಸ್ ಸೋತು ಮುಖಭಂಗ ಎದುರಿಸಿತ್ತು ಪಾಕಿಸ್ತಾನ ತಂಡ.
ಟಾಸ್ ಸೋತು ಇಂಗ್ಲೆಂಡ್ ನೀಡಿದ್ದ ಗುರಿ ಬೆನ್ನುಹತ್ತಿದ್ದ ಪಾಕಿಸ್ತಾನ, ಭರ್ಜರಿ 284 ಎಸೆತ ಬಾಕಿ ಇರುವಂತೆ ಗೆಲ್ಲಬೇಕಿತ್ತು. ಇಂತಹ ಸ್ಥಿತಿಯಲ್ಲಿ ಆಗಿದ್ದೇ ಬೇರೆ, ಟಾಸ್ ಕೂಡ ಸೋತು ಪಂದ್ಯವನ್ನೂ ಪಾಕಿಸ್ತಾನ ಸೋತು ಹೋಗಿದೆ. 338 ರನ್ ಗುರಿ ಬೆನ್ನುಹತ್ತಿದ್ದ ಪಾಕಿಸ್ತಾನ, ಕೇವಲ 244 ರನ್‌ಗಳಿಗೆ ಆಲೌಟ್ ಆಗಿದೆ. ಈ ಹೀನಾಯ ಸೋಲಿನ ಮೂಲಕ, ಪಾಕಿಸ್ತಾನ 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಗುಡ್‌ಬೈ ಹೇಳಿದೆ ಪಾಕ್.












Click it and Unblock the Notifications