IPL 2025: ಕೋಟಿ, ಕೋಟಿ ಆಟಗಾರರಿಗೆ ಸುರಿಯುವ ಐಪಿಎಲ್ ತಂಡಗಳ ಮಾಲೀಕರಿಗೆ ದುಡ್ಡು ವಾಪಸ್ ಹೆಂಗೆ ಬರುತ್ತೆ?
ಐಪಿಎಲ್ ಹರಾಜು ನಡೆಯುವಾಗ ಕೋಟಿ, ಕೋಟಿ ಅಂತಾ ಕೇಳಿ ಕೇಳಿ ನಿಮಗೂ ಸಾಕಾಗಿ ಹೋಗಿದೆ ಅನಿಸುತ್ತೆ. ಏನಪ್ಪಾ ಕೋಟಿ ರೂಪಾಯಿಗೆ ಬೆಲೆಯೇ ಇಲ್ವಾ? ಅಂತಾ ಕೂಡ ನಿಮ್ಮ ಮನಸ್ಸಲ್ಲಿ ಬಂದೇ ಬಂದಿರುತ್ತೆ. ಆದರೆ ಆಟಗಾರರನ್ನು ಖರೀದಿ ಮಾಡಲು, 10 ಕೋಟಿ & 20 ಕೋಟಿ ಅಂತಾ ಸುರಿಯುವ ಐಪಿಎಲ್ ತಂಡಗಳ ಮಾಲೀಕರಿಗೆ ಹಣ ವಾಪಸ್ ಹೇಗೆ ಬರುತ್ತೆ ಅಂತಾ ನಿಮ್ಮ ತಲೆಯಲ್ಲಿ ಹುಳ ಓಡಾಡಿರುತ್ತೆ ತಾನೆ? ಹಾಗಾದ್ರೆ ಈ ನಿಮ್ಮ ಪ್ರಶ್ನೆಗೆ ಇಲ್ಲಿ ಉತ್ತರ ಹುಡುಕುವ ಬನ್ನಿ, ಹಾಗೇ ನಿಮ್ಮ ತಲೆಯಲ್ಲಿ ಓಡಾಡುವ ಪ್ರಶ್ನೆಯ ಹುಳು ಓಡಿಸುವ ಬನ್ನಿ!
ಭಾರತದಲ್ಲಿ ಕ್ರಿಕೆಟ್ ಅಂದ್ರೆ ಒಂದು ಧರ್ಮಕ್ಕೆ ಸಮಾನ, ಇಲ್ಲಿ ಕ್ರಿಕೆಟ್ ಅಭಿಮಾನಿಗಳಿಗೇನು ಕೊರತೆ ಇಲ್ಲ. 150 ಕೋಟಿ ಭಾರತೀಯರಲ್ಲಿ ಬಹುತೇಕರು ಇಷ್ಟಪಟ್ಟು ನೋಡುವುದು ಈ ಕ್ರಿಕೆಟ್ ಎಂಬ ಮಾಯಾಲೋಕದ ಆಟವನ್ನ. ಹೀಗೆ ಕ್ರಿಕೆಟ್ ಜಗತ್ತಿಗೇ ಒಂದು ದೊಡ್ಡ ತಿರುವು ನೀಡಿದ್ದೇ 'ಐಪಿಎಲ್' ಅಥವಾ 'ಇಂಡಿಯನ್ ಪ್ರಿಮಿಯರ್ ಲೀಗ್'. ಹೀಗೆ 'ಐಪಿಎಲ್'ನ ಮಾಯಾ ಲೋಕದಲ್ಲಿ ಲಕ್ಷಗಳಿಗೆ ಬೆಲೆಯೇ ಇಲ್ಲ, ಏನಿದ್ದರೂ ಇಲ್ಲಿ ಕೋಟಿಗಳದ್ದೇ ಮಾತು. ಹೀಗಿದ್ದಾಗ 2023ರ ಐಪಿಎಲ್ ಟೂರ್ನಿಯಲ್ಲಿ ಬಂದ ಒಟ್ಟು ಆದಾಯವೇ 11,769 ಕೋಟಿ ರೂಪಾಯಿ ಅಂದ್ರೆ ನೀವು ನಂಬುತ್ತೀರಾ?

ಒಂದು ತಂಡಕ್ಕೆ ₹120 ಕೋಟಿ ರೂಪಾಯಿ!
ಹೌದು, ಯಾವುದೇ ಒಂದು ತಂಡಕ್ಕೆ ಐಪಿಎಲ್ ಟೂರ್ನಿಯಲ್ಲಿ ಆಟಗಾರರ ಖರೀದಿಗೆ ₹120 ಕೋಟಿ ರೂಪಾಯಿ ಗರಿಷ್ಠ ಮಿತಿ ಇರುತ್ತದೆ. ಹಾಗೇ 18 ರಿಂದ 25 ಆಟಗಾರರನ್ನು ಒಂದು ತಂಡ ಖರೀದಿ ಮಾಡಲು ಅವಕಾಶ ಇರುತ್ತದೆ. ಹೀಗೆ 18 ರಿಂದ 25 ಆಟಗಾರರನ್ನು ಒಟ್ಟು ₹120 ಕೋಟಿ ರೂಪಾಯಿ ಒಳಗೆ ಖರೀದಿ ಮಾಡಬೇಕು. ಇದನ್ನು ಮೀರಿ ಯಾವುದೇ ತಂಡ ಖರ್ಚು ಮಾಡುವಂತೆ ಇಲ್ಲ & ಲೆಕ್ಕ ತೋರಿಸುವಂತೆಯೂ ಇಲ್ಲ. ಆದರೆ ಇಲ್ಲಿ ಬಹುಮುಖ್ಯ ಪ್ರಶ್ನೆ ಇವರಿಗೆ ವಾಪಸ್ ದುಡ್ಡು ಎಲ್ಲಿಂದ ಬರುತ್ತೆ? ಬನ್ನಿ ಆ ಬಗ್ಗೆ ಮಾಹಿತಿ ತಿಳಿಯೋಣ.
ಬ್ರಾಂಡ್‌ಗಳ ಮೂಲಕ ಸಾವಿರಾರು ಕೋಟಿ!
ಅಂದಹಾಗೆ ಯಾವುದೇ ಐಪಿಎಲ್ ತಂಡವನ್ನು ನೀವು ನೋಡಿದರೂ ಆ ತಂಡಗಳ ಟಿ-ಶರ್ಟ್ ಹಿಂದೆ & ಮುಂದೆ ಹಲವು ಬ್ರಾಂಡ್‌ಗಳ ಹೆಸರು ಇರುತ್ತದೆ. ಹೀಗೆ ಅವರೆಲ್ಲಾ ಬ್ರಾಂಡಿಂಗ್ ಮಾಡಲು ಬಿಟ್ಟಿಯಾಗಿ ಆಗೋದಿಲ್ಲ ಸರ್/ಮ್ಯಾಮ್, ಅವರು ನೂರಾರು ಕೋಟಿ ರೂಪಾಯಿ ಹಣ ಕೊಟ್ಟು ತಮ್ಮ ತಮ್ಮ ಬ್ರಾಂಡ್ ಸ್ಟಿಕ್ಕರ್ಸ್ ಹಾಕಿಸಿಕೊಳ್ಳಬೇಕು.
ಹೀಗೆ ಬ್ರಾಂಡಿಂಗ್ ಮೂಲಕ ತಾವು ಖರ್ಚು ಮಾಡಿರುವ ಹಣವನ್ನು ವಾಪಸ್ ಪಡೆಯುತ್ತವೆ ಐಪಿಎಲ್ ತಂಡಗಳು. ಮತ್ತೊಂದ್ಕಡೆ ಬಿಸಿಸಿಐ ಟಿವಿ ರೈಟ್ಸ್ ಸೇರಿದಂತೆ ಇನ್ನಿತರ ಮೂಲಗಳಿಂದ ಕೂಡ ಆದಾಯ ಗಳಿಸುತ್ತದೆ. ಹೀಗಿದ್ದಾಗ, 2023ರ ಐಪಿಎಲ್ ಟೂರ್ನಿಯಲ್ಲಿ ಬಂದ ಒಟ್ಟು ಆದಾಯವೇ 11,769 ಕೋಟಿ ರೂಪಾಯಿ ಆಗಿತ್ತಂತೆ!
ಒಟ್ನಲ್ಲಿ ಐಪಿಎಲ್ ಎನ್ನುವುದು ಸಮುದ್ರ ಇದ್ದಂತೆ, ಈ ಸಮುದ್ರದಲ್ಲಿ ಲಕ್ಷ ರೂಪಾಯಿ ಅಂದ್ರೆ ಬೆಲೆಯೇ ಇಲ್ಲ. ಇಲ್ಲಿ ಏನಿದ್ದರೂ ಮಾತು ಆರಂಭವಾಗುವುದು ಕೋಟಿ ರೂಪಾಯಿಯಿಂದ ಮಾತ್ರ. ಹೀಗೆ ಕೋಟಿಗಳ ಲೆಕ್ಕದಲ್ಲೇ ಐಪಿಎಲ್ ಟೂರ್ನಿ ನಡೆಯುತ್ತದೆ. ಈಗ ನಿಮಗೂ ಈ ಬಗ್ಗೆ ಒಂದು ಸಣ್ಣ ಮಾಹಿತಿ ಅರ್ಥ ಆಗಿರಬಹುದು. ದುಡ್ಡು ಬರುತ್ತೆ ಎಂಬ ನಂಬಿಕೆ ಮೇಲೆ ಐಪಿಎಲ್ ತಂಡಗಳು ಹಣ ಸುರಿಯುತ್ತವೆ. ಹಾಗೇ, ಕೋಟಿ ಕೋಟಿ ರೂಪಾಯಿ ಹಣವನ್ನು ಲಾಭದ ರೂಪದಲ್ಲಿ ವಾಪಸ್ ಪಡೆಯುತ್ತವೆ.












Click it and Unblock the Notifications