Get Updates
Get notified of breaking news, exclusive insights, and must-see stories!

ICC World Cup: ವಿಶ್ವಕಪ್ ಗೆದ್ದು ಮನೆಗೆ ಹೋದ್ರೆ ಆಸ್ಟ್ರೇಲಿಯಾ ಆಟಗಾರರಿಗೆ ಮರ್ಯಾದಿ ಸಿಗಲೇ ಇಲ್ಲ!

ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೋಲು ಕಂಡ ಕಾರಣ ಆಸ್ಟ್ರೇಲಿಯಾ ಚಾಂಪಿಯನ್ ಆಗಿದೆ. ಹೀಗೆ ಚಾಂಪಿಯನ್ ಆಸಿಸ್ ತನ್ನ ತವರು ಆಸ್ಟ್ರೇಲಿಯಾಗೆ ತೆರಳಿದರೆ ಅವರಿಗೆ ಸಿಕ್ಕ ಮರ್ಯಾದಿ ಎಂತಹದ್ದು ಗೊತ್ತಾ?

ಹೌದು ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಭರ್ಜರಿಯಾಗಿ ವಿಶ್ವಕಪ್ ಗೆದ್ದು ಬೀಗಿ, 6ನೇ ಬಾರಿಗೆ ಕಪ್ ಮನೆಗೆ ತೆಗೆದುಕೊಂಡು ಹೋಗಿದೆ. ಆದರೆ ಇಂತಿಪ್ಪ ಆಸ್ಟ್ರೇಲಿಯಾ ಕ್ರಿಕೆಟ್ ಟೀಂ ಈ ಬಾರಿ ಭರ್ಜರಿಯಾಗಿ ಸ್ವಾಗತ ಬಯಸಿತ್ತು. ಆದರೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರ ಪ್ಯಾಟ್ ಕಮ್ಮಿನ್ಸ್ ಸೇರಿದಂತೆ ಹಲವು ತಮ್ಮ ತವರಿಗೆ ಮರಳಿದ್ದು, ಅವರಿಗೆಲ್ಲ ತಮ್ಮ ದೇಶ ಆಸ್ಟ್ರೇಲಿಯಾದಲ್ಲಿ ಹೇಳೋರು ಕೇಳೋರು ಇಲ್ಲದಂತಾಗಿದೆ. ಈ ವಿಡಿಯೋ ಫುಲ್ ವೈರಲ್ ಆಗುತ್ತಿದ್ದು, ವೆರೈಟಿ ವೆರೈಟಿ ಕಮೆಂಟ್ ಬರ್ತಿದೆ.

Discover How Australian Players Are Welcomed In Australia

ಹೇಳೋರಿಲ್ಲ.. ಕೇಳೋರಿಲ್ಲ..!

ವಿಶ್ವಕಪ್ 2023 ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ಟೀಂ ಗೆದ್ದು ಬೀಗಿತ್ತು. ಇದೀಗ ತಂಡದ ಕೆಲವರು ಅವರವರ ತಾಯ್ನಾಡಿಗೆ ವಾಪಸ್ಸಾಗುತ್ತಿದ್ದಾರೆ. ಇದೇ ರೀತಿ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಕೂಡ ಸಿಡ್ನಿ ಏರ್‌ಪೋರ್ಟ್‌ಗೆ ಬಂದಿಳಿದಿದ್ದು, ಅಲ್ಲಿ ಕಮ್ಮಿನ್ಸ್‌ಗೆ ಸಿಕ್ಕ ಗೌರವ ಎಂಥದ್ದು ಅಂತ ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ. ಕ್ರಿಕೆಟ್ ವಿಶ್ವಕಪ್ ಟ್ರೋಫಿ ಗೆದ್ದು ಬೀಗಿದ್ದರೂ ಪ್ಯಾಟ್ ಕಮ್ಮಿನ್ಸ್ ಅವರನ್ನ ಹೇಳೋರು, ಕೇಳೋರೆ ಇಲ್ಲವೆಂಬ ಸ್ಥಿತಿ ಅಲ್ಲಿ ನಿರ್ಮಾಣವಾಗಿತ್ತು.

ಆಸ್ಟ್ರೇಲಿಯಾ ನೋಡಿ ಕಲಿಯಬೇಕಂತೆ!

ಈ ಬಗ್ಗೆ ಸೋಷಿಯಲ್ ಮೀಡಿಯಾ ಬಳಕೆದಾರರೊಬ್ಬರು ಬರೆದುಕೊಂಡಿದ್ದು, ವಿಡಿಯೋ ಶೇರ್ ಮಾಡಿ 'ಆಸ್ಟ್ರೇಲಿಯಾ ರೀತಿಯ ದೇಶಗಳಿಂದ ನಾವು ಕಲಿಯುವುದು ತುಂಬಾ ಇದೆ. ಸಾಕಷ್ಟು ಜನರು ಆಟವನ್ನೇ ನೋಡುವುದಿಲ್ಲ. ಆಟಗಾರರನ್ನು ಹೀರೋ ರೀತಿ ನೋಡುವ ಮತ್ತು ಆರಾಧಿಸುವ ಕೆಲಸ ಬಿಟ್ಟು ಅವರಿಗೆಲ್ಲಾ ಅವರದ್ದೇ ಕೆಲಸ ಇರುತ್ತದೆ. ಬಹುಶಃ ಈ ಕಾರಣಕ್ಕೆ ಅವರು ಗೆಲ್ಲುತ್ತಾರೆ ಅಂತಾ ಕಾಣುತ್ತದೆ, ಯಾಕಂದ್ರೆ ಅವರಿಗೆ ತುಂಬಾ ಕಡಿಮೆ ಒತ್ತಡ ಇರುತ್ತದೆ. ಭಾರತ ವಿಶ್ವಕಪ್ ಗೆದ್ದಿದ್ದರೆ ಪೊಲೀಸ್ ಭದ್ರತೆ ಬೇಕಾಗಿತ್ತು' ಎಂದಿದ್ದಾರೆ ಶೃತಿ ಚಥುರ್ವೇದಿ ಎಂಬ ಟ್ವಿಟ್ಟರ್ ಬಳಕೆದಾರರು.

ನಮ್ಮ ದೇಶದಲ್ಲಿ ಕಾಲಿಗೆ ಬೀಳುತ್ತಿದ್ದರು!

ಹಾಗೇ ಮತ್ತೊಬ್ಬ ಟ್ವಿಟ್ಟರ್ ಬಳಕೆದಾರ ವಿಡಿಯೋ ಬಗ್ಗೆ ಬರೆದುಕೊಂಡಿದ್ದು, ವಿಡಿಯೋ ಶೇರ್ ಮಾಡಿ 'ಪ್ಯಾಟ್ ಕಮ್ಮಿನ್ಸ್ ವಿಶ್ವಕಪ್ ಗೆದ್ದು ಆಸ್ಟ್ರೇಲಿಯಾದಲ್ಲಿ ಲ್ಯಾಂಡ್ ಆಗಿದ್ದರೂ ಯಾರೂ ಅವರಿಗೆ ಶುಭಾಶಯ ಕೋರಲು ಬಂದಿಲ್ಲ. ಅಕಸ್ಮಾತ್ ನಾವು ಗೆದ್ದಿದ್ದರೆ ನಮ್ಮ ಜನ ತಮ್ಮ ವಿಮಾನವನ್ನೇ ಬಿಟ್ಟು ಆಟಗಾರರ ಕಾಲಿಗೆ ಬಿದ್ದು ಡಾನ್ಸ್ ಮಾಡ್ತಿದ್ರು' ಎಂದು ಹೇಳಿದ್ದಾರೆ ಸುಶಾಂತ್ ಮೆಹ್ತಾ ಎಂಬ ಟ್ಟಿಟ್ಟರ್ ಬಳಕೆದಾರರು. ಹೀಗೆ ಪ್ಯಾಟ್ ಕಮ್ಮಿನ್ಸ್ ಆಸ್ಟ್ರೇಲಿಯಾಗೆ ಬಂದು ತಲುಪಿದ್ರೂ ಅವರಿಗೆ ಸಿಕ್ಕ ಗೌರವದ ಬಗ್ಗೆ ಚರ್ಚೆ ಶುರುವಾಗಿದೆ.

ಭಾರತ ಕ್ರಿಕೆಟ್ ಟೀಂ ಈ ಬಾರಿ ಟೂರ್ನಿಯಲ್ಲಿ ಶಕ್ತಿಶಾಲಿಯಾಗಿ ಮುನ್ನುಗ್ಗಿತ್ತು. ಟೂರ್ನಿಯಲ್ಲಿ ಒಂದೇ ಒಂದು ಪಂದ್ಯ ಸೋಲದೆ ಅಬ್ಬರಿಸಿತ್ತು. ವಿಶ್ವಕಪ್ ಆರಂಭದಲ್ಲಿ ಮೊದಲ ಮ್ಯಾಚ್‌ನ ಆಸ್ಟ್ರೇಲಿಯಾ ವಿರುದ್ಧ ಆಡಿದ್ದ ಟೀಂ ಇಂಡಿಯಾ ಆಸಿಸ್ ಪಡೆಗೆ ಹೀನಾಯ ಸೋಲು ಕರುಣಿಸಿ ಗಮನ ಸೆಳೆದಿತ್ತು. ಆದರೆ ಕಳೆದ ಭಾನುವಾರ ನಡೆದಿದ್ದ ಫೈನಲ್ ಪಂದ್ಯದಲ್ಲಿ ಆ ಸೋಲಿಗೆ ಸೇಡು ತೀರಿಸಿಕೊಂಡಿತ್ತು ಆಸ್ಟ್ರೇಲಿಯಾ. ಈ ಮೂಲಕ ಟೀಂ ಇಂಡಿಯಾ, 2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೋತು ರನ್ನರ್ ಪಟ್ಟ ಪಡೆದಿತ್ತು. ಅಂದಿನಿಂದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರರು ಸಖತ್ ಸುದ್ದಿಯಲ್ಲಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+