KL Rahul: ಸೋಲಿನ ನೋವಲ್ಲೂ ಕ್ರೀಡಾ ಸ್ಫೂರ್ತಿ ಮೆರೆದು ಅಭಿಮಾನಿಗಳ ಮನಗೆದ್ದ ಕನ್ನಡಿಗ ಕೆಎಲ್‌ ರಾಹುಲ್

IPL 2026 KL Rahul: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶುಕ್ರವಾರ (ಮೇ 9) ನಡೆದ ಐಪಿಎಲ್ ಹಣಾಹಣಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಕೆಕೆಆರ್ ಆರಂಭಿಕ ಆಟಗಾರ ಫಿನ್ ಅಲೆನ್ ಅವರ ಸ್ಫೋಟಕ ಶತಕದ ನೆರವಿನಿಂದ ಡಿಸಿ ನೀಡಿದ್ದ ಸಾಧಾರಣ ಗುರಿಯನ್ನು ಸುಲಭವಾಗಿ ಬೆನ್ನಟ್ಟಿತು. ಇದೆಲ್ಲದರ ನಡುವೆ ಗಮನ ಸೆಳೆದಿದ್ದು ಕನ್ನಡಿಗ ಕೆಎಲ್‌ ರಾಹುಲ್‌ ಅವರ ಕ್ರೀಡಾ ಸ್ಫೂರ್ತಿ.

ಟಾಸ್ ಗೆದ್ದ ಕೊಲ್ಕತ್ತಾ ನೈಟ್‌ ರೈಡರ್ಸ್‌ ತಂಡದ ನಾಯಕ ಅಜಿಂಕ್ಯ ರಹಾನೆ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 142 ರನ್ ಪೇರಿಸಿತು. 143 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಕೆಕೆಆರ್ ಫಿನ್ ಅಲೆನ್ ಅವರ ಭರ್ಜರಿ ಶತಕದ ನೆರವಿನಿಂದ ಕೇವಲ 14.2 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತು.

DC vs KKR IPL 2026 Finn Allen s Century Powers KKR Win KL Rahul s Sportsmanship Wins Hearts

ದುಬಾರಿಯಾದ ಡೆಲ್ಲಿ ಬೌಲರ್ಸ್‌

ಫಿನ್ ಅಲೆನ್ ಕೇವಲ 47 ಎಸೆತಗಳಲ್ಲಿ 5 ಬೌಂಡರಿ ಹಾಗೂ 10 ಸಿಕ್ಸರ್‌ಗಳ ನೆರವಿನಿಂದ ಅಜೇಯ ಶತಕ (100) ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇವರಿಗೆ ಕ್ಯಾಮರಾನ್ ಗ್ರೀನ್ 27 ಎಸೆತಗಳಲ್ಲಿ 2 ಸಿಕ್ಸರ್‌ಗಳ ಸಹಿತ ಅಜೇಯ 33 ರನ್‌ ಕಲೆಹಾಕಿ ಉತ್ತಮ ಸಾಥ್ ನೀಡಿದರು. ಡೆಲ್ಲಿ ಪರ ಬೌಲಿಂಗ್ ಮಾಡಿದ ಕುಲದೀಪ್ ಯಾದವ್ ಮತ್ತು ಮಿಚೆಲ್ ಸ್ಟಾರ್ಕ್ ಅಲೆನ್ ಹೊಡೆತಕ್ಕೆ ಸಿಲುಕಿ ಹೆಚ್ಚಿನ ರನ್ ಬಿಟ್ಟುಕೊಟ್ಟು ದುಬಾರಿಯಾದರು.

ಡೆಲ್ಲಿ ಪರ ಬೌಲಿಂಗ್ ಮಾಡಿದ ಕುಲದೀಪ್‌ ಯಾದವ್ 3 ಓವರ್‌ ಬೌಲಿಂಗ್ ಎಸೆದು 41 ರನ್‌ ನೀಡಿದರೆ, ವಿಪ್ರಜ್ ನಿಗಮ್ 2 ಓವರ್‌ಗೆ 34, ಮಿಚೆಲ್ ಸ್ಟಾರ್ಕ್‌ 3 ಓವರ್‌ಗೆ 31 ರನ್‌ಗಳನ್ನು ನೀಡಿ ದುಬಾರಿ ಎನಿಸಿಕೊಂಡರು. ಉಳಿದಂತೆ ಲುಂಗಿ ಎನ್‌ಗ್ಡಿ 2 ಓವರ್‌ ಎಸೆದು ಕೇವಲ 7 ರನ್‌ಗಳನ್ನು ಮಾತ್ರ ಬಿಟ್ಟುಕೊಟ್ಟರೆ, ನಾಯಕ ಅಕ್ಷರ್ ಪಟೇಲ್ 4 ಓವರ್ ಎಸೆದು 27 ರನ್‌ ನೀಡಿ ಒಂದು ವಿಕೆಟ್‌ ಕಬಳಿಸಿದರು.

ಮಿಂಚಿದ ಪತುಮ್ ನಿಸ್ಸಾಂಕ

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಡೆಲ್ಲಿ ಪರ ಪತುಮ್ ನಿಸ್ಸಾಂಕ ಅವರು ಕೇವಲ 29 ಎಸೆತಗಳಲ್ಲಿ 5 ಬೌಂಡರಿ 3 ಸಿಕ್ಸರ್‌ಗಳ ಸಹಿತ ಅರ್ಧಶತಕ (50) ಬಾರಿಸಿದರು. ಕೆ.ಎಲ್. ರಾಹುಲ್ (23 ರನ್) ಮತ್ತು ಪತುಮ್ ನಿಸ್ಸಾಂಕ ಮೊದಲ ವಿಕೆಟ್‌ಗೆ 49 ರನ್ ಸೇರಿಸಿದರು. ಆದರೆ ನಿಸ್ಸಾಂಕ 50 ರನ್‌ ಗಳಿಸಿದ ವಿಕೆಟ್‌ ಒಪ್ಪಿಸಿದ ಬಳಿಕ ಡೆಲ್ಲಿ ಬ್ಯಾಟರ್‌ಗಳು ರನ್‌ ವೇಗ ಹೆಚ್ಚಿಸಲು ಪರದಾಡಿದರು. ಅಂತಿಮವಾಗಿ ಅಶುತೋಷ್ ಶರ್ಮಾ 39 ರನ್‌ಗಳ ನೆರವಿನಿಂದ ತಂಡ 142 ರನ್ ತಲುಪಿತು.

ಕ್ರೀಡಾ ಸ್ಫೂರ್ತಿ ಮೆರೆದ ಕನ್ನಡಿಗ ಕೆ.ಎಲ್. ರಾಹುಲ್

ತಮ್ಮ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಸೋತಿದ್ದರೂ ಸಹ ಫಿನ್ ಅಲೆನ್ ಅವರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಕನ್ನಡಿಗ ಕೆ.ಎಲ್. ರಾಹುಲ್ ಮೆಚ್ಚುಗೆ ವ್ಯಕ್ತಪಡಿಸಿದರು. 'ನೀವು ಆಡಿದ ರೀತಿ ಅದ್ಭುತವಾಗಿತ್ತು. ತುಂಬಾ ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದೀರಿ," ಎಂದು ಹೇಳಿ ಬೆನ್ನು ತಟ್ಟಿ ಗಮನ ಸೆಳೆದರು. ಹೀಗೆ ಮೈದಾನದಲ್ಲಿ ಎದುರಾಳಿ ಆಟಗಾರನ ಆಕ್ರಮಣಕಾರಿ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ರಾಹುಲ್ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+