Get Updates
Get notified of breaking news, exclusive insights, and must-see stories!

ಗಂಧದಗುಡಿ: ಕುಂಬ್ಳೆ, ಶ್ರೀನಾಥ್‌ ಸೇರಿ ಕ್ರಿಕೆಟ್‌ ದಿಗ್ಗಜರಿಂದ ಶುಭ ಹಾರೈಕೆ

ಬೆಂಗಳೂರು, ಅಕ್ಟೋಬರ್ 27: ಕೋಟ್ಯಂತರ ಅಭಿಮಾನಿಗಳ ಮನಸ್ಸನ್ನು ಗೆದ್ದಿರುವ ದಿವಂಗತ ನಟ ಪುನೀತ್ ರಾಜ್‌ ಕುಮಾರ್ ಕನಸಿನ ಕೂಸಾಗಿರುವ ಗಂಧದ ಗುಡಿ ಸಿನಿಮಾ ಶುಕ್ರವಾರ ದೇಶಾದ್ಯಂತ ಬಿಡುಗಡೆಯಾಗಲಿದೆ. ಈ ಸಿನಿಮಾಗೆ ರಾಜ್ಯ, ಭಾಷೆ ಗಡಿ ದಾಟಿ ಹಲವು ಸೆಲೆಬ್ರೆಟಿಗಳು ಶುಭ ಹಾರೈಸಿದ್ದಾರೆ.

ಅಪ್ಪುವನ್ನು ಕೊನೆಯ ಬಾರಿ ಥಿಯೇಟರ್‌ನಲ್ಲಿ ಕಣ್ತುಂಬಿಕೊಳ್ಳುವ ಸಿಕ್ಕಿರುವ ಕೊನೆಯ ಅವಕಾಶಕ್ಕಾಗಿ ಲಕ್ಷಾಂತರ ಅಭಿಮಾನಿಗಳು ಹಾತೊರೆಯುತ್ತಿದ್ದಾರೆ. ಈ ಸಿನಿಮಾಗೆ ಕೇವಲ ಸಿನಿಮಾ ನಟ-ನಟಿಯರಲ್ಲದೆ ಕ್ರಿಕೆಟ್‌ ದಿಗ್ಗಜರೂ ಕೂಡ ಬೆಂಬಲ ಸೂಚಿಸಿದ್ದು, ಅಭಿಮಾನಿಗಳೆಲ್ಲರೂ ಥಿಯೇಟರ್‌ಗೆ ಆಗಮಿಸಿ ವೀಕ್ಷಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಭಾರತ ತಂಡದ ಮಾಜಿ ಸ್ಪಿನ್ನರ್, ಕನ್ನಡಿಗ ಅನಿಲ್‌ ಕುಂಬ್ಳೆ ಈ ಕುರಿತು ಟ್ವೀಟ್ ಮಾಡಿದ್ದು, "ಗಂಧದ ಗುಡಿ ಸಿನಿಮಾವನ್ನು ನೋಡುವುದಕ್ಕೆ ಎದುರು ನೋಡುತ್ತಿದ್ದೇನೆ, ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಹಾಗೂ ಇಡೀ ತಂಡಕ್ಕೆ ಶುಭವಾಗಲಿ" ಎಂದು ಟ್ವೀಟ್ ಮಾಡಿದ್ದಾರೆ.

Cricketers Including Anil Kumble wishes to Puneeth Rajkumar Last film Gandhada gudi

ಭಾರತ ತಂಡದ ಮಾಜಿ ವೇಗಿ ಜಾವಗಲ್ ಶ್ರೀನಾಥ್ ಗಂಧದ ಗುಡಿ ತಂಡಕ್ಕೆ ಒಳ್ಳೆಯದಾಗಲಿ ಎಂದು ಟ್ವೀಟ್ ಮೂಲಕ ಶುಭಾಶಯ ತಿಳಿಸಿದ್ದಾರೆ.

ಪುನೀತ್ ಭಾಯ್ ಪ್ರತಿಯೊಬ್ಬ ಅಭಿಮಾನಿಯ ಹೃದಯದಲ್ಲಿ ನೆಲೆಸಿದ್ದಾರೆ. ಅವರು ನನ್ನ ಸಹೋದರ, ಅತ್ಯುತ್ತಮ ಗೆಳೆಯ ಹಾಗೂ ಪ್ರತಿಯೊಂದು ವಿಷಯದಲ್ಲಿ ಬೆಂಬಲಿಸುವ ವ್ಯಕ್ತಿ. ದಯವಿಟ್ಟು ಅಕ್ಟೋಬರ್ 28ರಿಂದ ಬಿಡುಗಡೆಯಾಗಿರುವ ಗಂಧದಗುಡಿ ಸಿನಿಮಾವನ್ನು ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ನೋಡಿ. ಈ ಮೂಲಕ ಅವರ ಪರಂಪರೆಯನ್ನು ಮುಂದುವರಿಯಲಿ. ಅಶ್ವಿನಿ ಪುನೀತ್ ರಾಜ್‌ ಕುಮಾರ್‌ಗೆ ಶುಭಾಶಯ ಎಂದು ಮಾಜಿ ಸ್ಪಿನ್ನರ್ ಅಮಿತ್ ಮಿಶ್ರಾ ಪುನೀತ್ ದಂಪತಿಯೊಂದಿಗಿನ ಫೋಟೋವನ್ನು ಶೇರ್‌ ಮಾಡಿಕೊಂಡು ಶುಭಾಶಯ ಕೋರಿದ್ದಾರೆ.

ಭಾರತದ ಹಾಕಿ ತಂಡದ ಆಟಗಾರ ಎಸ್‌ವಿ ಸುನೀಲ್ "ನಾವು ಅಗಾಧವಾಗಿ ಪ್ರೀತಿಸುವ ವ್ಯಕ್ತಿಯ ಗಂಧದಗುಡಿ ಚಿತ್ರ ಪ್ರಪಂಚದಾದ್ಯಂತ ಅಕ್ಟೋಬರ್ 28 ರಂದು ಬಿಡುಗಡೆಯಾಗುತ್ತಿದೆ. ನಮ್ಮ ಪ್ರೀತಿಯ ಅಪ್ಪು ನಟಿಸಿದ ಕೊನೆಯ ಚಿತ್ರ ಕರ್ನಾಟಕದಲ್ಲಿ ಹಬ್ಬದಂತೆ ಆಚರಿಸೋಣ, ಇದು ವನ್ಯಜೀವಿ ಮತ್ತು ಪರಂಪರೆಯ ಚಿತ್ರವಾಗಿದೆ. ಶುಭವಾಗಲಿ," ಎಂದು ಬರೆದುಕೊಂಡಿದ್ದಾರೆ.

ಭಾರತ ತಂಡದ ಮತ್ತೊಬ್ಬ ಲೆಜೆಂಡರಿ ಕ್ರಿಕೆಟರ್ ವಿವಿಎಸ್‌ ಲಕ್ಷ್ಮಣ್ ಕೂಡ ಶುಭಾರೈಸಿದ್ದು, "ನಿಶ್ವಾರ್ಥ ಪ್ರೀತಿ ಮತ್ತು ಧೋಷರಹಿತ ನಗುವನ್ನು ಕೊಡುತ್ತಿದ್ದ ನಮ್ಮ ಪ್ರೀತಿಯ ಪುನೀತ್ ರಾಜ್ ಕುಮಾರ್‌ ಅವರನ್ನು ನಾವೆಲ್ಲಾ ಅಪ್ಪಿಕೊಳ್ಳುವ ಸಮಯವಿದು, ಕರ್ನಾಟಕದ ಶ್ರೀಮಂತ ವನ್ಯಜೀವಿ ಮತ್ತು ಪರಂಪರಗೆ ಗೌರವ ಸೂಚಿಸುವ ಗಂಧದ ಗುಡಿ ಚಿತ್ರ ಅಕ್ಟೋಬರ್ 28ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ತಂಡಕ್ಕೆ ಒಳ್ಳೆಯದಾಗಲಿ" ಎಂದು ಶುಭಾ ಕೋರಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+