ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಎದುರು ಸೋತ ಪಾಕಿಸ್ತಾನದ ಬಾಕ್ಸರ್ ಮತ್ತು ಬ್ಯಾಡ್ಮಿಂಟನ್ ಟೀಮ್

|
Google Oneindia Kannada News

ಬರ್ಮಿಂಗ್‌ಹ್ಯಾಂ, ಜುಲೈ 29: ಇಲ್ಲಿ ಶುಕ್ರವಾರ ಆರಂಭಗೊಂಡ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಮಿಶ್ರ ಫಲ ಅನುಭವಿಸಿದೆ. ಬಾಕ್ಸಿಂಗ್, ಟೇಬಲ್ ಟೆನಿಸ್, ಬ್ಯಾಡ್ಮಿಂಟನ್, ಹಾಕಿ ಸ್ಪರ್ಧೆಯಲ್ಲಿ ಭಾರತೀಯರು ಸುಲಭ ಗೆಲುವು ಪಡೆದಿದ್ದಾರೆ.

ಬಾಕ್ಸಿಂಗ್‌ನಲ್ಲಿ ಪಾಕಿಸ್ತಾನೀ ಆಟಗಾರನ ಎದುರು ಭಾರತದ ಶಿವ ಥಾಪ ಸುಲಭ ಜಯ ಸಂಪಾದಿಸಿದರು. ಬ್ಯಾಡ್ಮಿಂಟನ್‌ನಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಕ್ಲೀನ್ ಸ್ವೀಪ್ ಮಾಡಿತು. ಟೇಬಲ್ ಟೆನಿಸ್‌ನಲ್ಲಿ ಭಾರತ ಮಹಿಳಾ ತಂಡ ಸತತ ಎರಡು ಗೆಲುವು ಪಡೆಯಿತು. ಹಾಕಿಯಲ್ಲಿ ಭಾರತದ ವನಿತೆಯರು ಘಾನಾವನ್ನು ಬಗ್ಗುಬಡಿದರು.

ಕಾಮನ್‌ವೆಲ್ತ್ ಗೇಮ್ಸ್ 2022 : ಭಾರತದ ಧ್ವಜಧಾರಿಗಳಾಗಿ ಪಿ.ವಿ.ಸಿಂಧು, ಮನ್‌ಪ್ರೀತ್ ಸಿಂಗ್ ಆಯ್ಕೆಕಾಮನ್‌ವೆಲ್ತ್ ಗೇಮ್ಸ್ 2022 : ಭಾರತದ ಧ್ವಜಧಾರಿಗಳಾಗಿ ಪಿ.ವಿ.ಸಿಂಧು, ಮನ್‌ಪ್ರೀತ್ ಸಿಂಗ್ ಆಯ್ಕೆ

ಈಜು ಸ್ಪರ್ಧೆಯಲ್ಲಿ ಶ್ರೀಹರಿ ನಟರಾಜ್ ಸೆಮಿಫೈನಲ್ ಪ್ರವೇಶಿಸಿದ್ದು, ಶನಿವಾರ ಫೈನಲ್ ತಲುಪುವ ಪ್ರಯತ್ನ ಮಾಡಲಿದ್ದಾರೆ. ಇದು ಬಿಟ್ಟರೆ ಕ್ರಿಕೆಟ್‌ನಲ್ಲಿ ಭಾರತದ ಮಹಿಳಾ ತಂಡಕ್ಕೆ ಸೋಲಿನ ಆರಂಭ ಸಿಕ್ಕಿತು. ಸೈಕ್ಲಿಂಗ್, ಟ್ರಯಾಥ್ಲಾನ್ ಮತ್ತು ಲಾನ್ ಬಾಲ್ ಸ್ಪರ್ಧೆಗಳಲ್ಲಿ ಭಾರತ ಪ್ರಬಲ ಪೈಪೋಟಿ ನೀಡದೆಯೇ ನಿರ್ಗಮಿಸಿತು.

Commonwealth Games 2022: Indians Results on First Day

ಬಾಕ್ಸಿಂಗ್:
ಭಾರತದ ಶಿವ್ ಥಾಪ ಪಾಕಿಸ್ತಾನದ ಸುಲೇಮಾನ್ ಬಲೂಚ್ ಅವರನ್ನು 5-0 ಅಂತರದಿಂದ ಸುಲಭವಾಗಿ ಮಣಿಸಿದರು. ಪುರುಷರ 63 ಕಿಲೋ ವಿಭಾಗದಲ್ಲಿ ಈ ಹಣಾಹಣಿ ನಡೆದಿತ್ತು. ಥಾಪ ಅವರ ವೇಗದ ಆಟಕ್ಕೆ ಬಲೂಚ್ ಸಾಟಿಯಾಗಲಿಲ್ಲ.

ಟೇಬಲ್ ಟೆನಿಸ್
ಭಾರತ ತಂಡ ಎರಡು ಗೆಲುವು ಸಾಧಿಸಿದೆ. ಫಿಜಿ ಮತ್ತು ಸೌತ್ ಆಫ್ರಿಕಾ ವಿರುದ್ಧ ಭಾರತದ ಮಹಿಳೆಯರು ಭರ್ಜರಿ ಗೆಲುವು ಪಡೆದರು. ಮಾನಿಕಾ ಬಾತ್ರಾ, ಶ್ರೀಜಾ ಅಕುಲಾ ಮತ್ತು ರೀತ್ ಟೆನಿಸನ್ ಭಾರತ ತಂಡದ ಪರ ಆಡಿದರು. ಭಾರತ ಮಹಿಳಾ ತಂಡ ಕಳೆದ ಬಾರಿಯ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಇದೇ ವಿಭಾಗದಲ್ಲಿ ಚಿನ್ನ ಗೆದ್ದಿತ್ತು.

ಬ್ಯಾಡ್ಮಿಂಟನ್
ಮಿಶ್ರ ತಂಡ ಸ್ಪರ್ಧೆಯಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ 5-0ಯಿಂದ ಗೆಲುವು ಸಾಧಿಸಿತು. ಭಾರತದ ಪರ ಬಿ ಸುಮೀತ್ ರೆಡ್ಡಿ, ಅಶ್ವಿನಿ ಪೊನ್ನಪ್ಪ, ಎಸ್ ಕಿಡಂಬಿ, ಪಿ.ವಿ. ಸಿಂಧು, ತ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಆಡಿದರು.

Commonwealth Games 2022: Indians Results on First Day

ಹಾಕಿ
ಭಾರತ ಮಹಿಳಾ ಹಾಕಿ ತಂಡ ಘಾನಾ ವಿರುದ್ಧ 5-0ಯಿಂದ ಭರ್ಜರಿ ಜಯ ಸಾಧಿಸಿತು.

ಕ್ರಿಕೆಟ್
ಭಾರತ ಮಹಿಳಾ ಕ್ರಿಕೆಟ್ ತಂಡ ಬಲಿಷ್ಠ ಆಸ್ಟ್ರೇಲಿಯನ್ನರ ಎದುರು 3 ವಿಕೆಟ್‌ಗಳಿಂದ ಸೋಲನುಭವಿಸಿದರು. 20 ಓವರ್‌ಗಳ ಪಂದ್ಯದಲ್ಲಿ ಗೆಲ್ಲಲು ಭಾರತ ಒಡ್ಡಿದ 155 ರನ್ ಗುರಿಯನ್ನು ಒಂದು ಓವರ್ ಇರುವಂತೆ ಕಾಂಗರೂಗಳ ಪಡೆ ಯಶಸ್ವಿಯಾಗಿ ಬೆನ್ನಟ್ಟಿತು. ಆದರೆ, ಗೆಲುವು ನಿರೀಕ್ಷಿಸಿದಷ್ಟು ಸುಲಭವಾಗಿರಲಿಲ್ಲ. ಭಾರತದ ಮಹಿಳೆಯರೂ ಕೂಡ ಗೆಲುವಿನ ಅವಕಾಶವನ್ನು ಕೈಚೆಲ್ಲಿ ನಿರಾಸೆಗೊಳಿಸಿದರು. ಮುಂದಿನ ಪಂದ್ಯದಲ್ಲಿ ಭಾರತಕ್ಕೆ ಪಾಕಿಸ್ತಾನದ ಸುಲಭ ಸವಾಲು ಇದೆ.

ಈಜು:
ಪುರುಷರ 100 ಮೀಟರ್ ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ಶ್ರೀಹರಿ ನಟರಾಜ್ ಸೆಮಿಫೈನಲ್ ಪ್ರವೇಶಿಸಿದರು. ತಮ್ಮ ಹೀಟ್‌ನಲ್ಲಿ ಅವರು 54.68 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಮೂರನೇ ಸ್ಥಾನ ಪಡೆದಿದ್ದರು.

400 ಮೀಟರ್ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ 22 ವರ್ಷದ ಕುಶಾಗ್ರ ರಾವತ್ 8ನೇ ಸ್ಥಾನ ಪಡೆದು ನಿರಾಶೆಗೊಳಿಸಿದರು.

ಸೈಕ್ಲಿಂಗ್:
ಪುರುಷ ತಂಡದ 4000 ಮೀಟರ್ ಪರ್ಸ್ಯೂಟ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಅರ್ಹತಾ ಸುತ್ತಿನಲ್ಲಿ ಭಾರತದ ರೋಜಿತ್ ಯಾಂಗ್ಲೆಮ್, ರೊನಾಲ್ಡೊ ಲಾಯಿಟೊನ್ಜಾಮ್, ಡೇವಿಡ್ ಎಲ್ಕಟೊಚೂಂಗೊ ಮತ್ತು ಎಸೋ ಆಲ್ಬೆನ್ ಕೊನೆಯ ಸ್ಥಾನ ಪಡೆದರು.

ಟ್ರಯಾಥ್ಲಾನ್
ಭಾರತದ ಟ್ರಯಾತ್ಲಾನ್ ಪಟುಗಳಾದ ಆದರ್ಶ್ ಮುರಳೀಧರನ್ ನಾಯರ್ ಮತ್ತು ವಿಶ್ವನಾಥ್ ಯಾದವ್ ಅವರು ಕ್ರಮವಾಗಿ ೩೦ ಮತ್ತು ೩೩ನೇ ಸ್ಥಾನ ಪಡೆದು ನಿರಾಶೆಗೊಳಿಸಿದರು.

ಲಾನ್ ಬಾಲ್
ಲಾನ್ ಬಾಲ್ ಕ್ರೀಡೆಯಲ್ಲಿ ಇವತ್ತು ನಡೆದ ಎಲ್ಲಾ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದ ಎಲ್ಲಾ ಭಾರತೀಯರು ಸೋಲನುಭವಿಸಿದರು. ಮಹಿಳಾ ಸಿಂಗಲ್ಸ್‌ನಲ್ಲಿ ಭಾರತದ ಭರವಸೆಯ ಆಟಗಾರ್ತಿ ತಾನಿಯಾ ಚೌಧರಿ ಎರಡೂ ಪಂದ್ಯಗಳಲ್ಲಿ ಸೋತರು. ಎರಡನೇ ಪಂದ್ಯದಲ್ಲಿ ವೀರೋಚಿತ ಸೋಲನಭವಿಸಿದ್ದು ಮಾತ್ರ ಸಮಾಧಾನ ತಂದಿತು. ಪುರುಷರ ತಂಡದ ಟ್ರಿಪಲ್ಸ್ ಸ್ಪರ್ಧೆಯಲ್ಲಿ ನ್ಯೂಜಿಲೆಂಡ್ ಎದುರು ಭಾರತ 23-6 ಅಂತರದಿಂದ ಹೀನಾಯ ಸೋಲನುಭವಿಸಿತು.

(ಒನ್ಇಂಡಿಯಾ ಸುದ್ದಿ)

English summary
Indian women hockey, Table Tennis and Badminton teams register easy wins on first day Commonwealth games 2022 at Birmingham, UK. Indian boxer Shiv Thapa and Swimmer Srihari Nataraj too moves up.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X