ಚೆನ್ನೈ ತಂಡಕ್ಕೆ ಸೋಲು, ಗುಜರಾತ್ ಗೆದ್ದ ನಂತರ ಬಿರುಗಾಳಿ!
ಗುಜರಾತ್ ಟೈಟಾನ್ಸ್ ತಂಡಕ್ಕೆ ಮತ್ತೊಮ್ಮೆ ಜೀವ ಬಂದಿದ್ದು, ಚೆನ್ನೈ ತಂಡದ ವಿರುದ್ಧದ ಪಂದ್ಯದಲ್ಲಿ ಇಂದು ಭರ್ಜರಿ ಗೆಲುವು ಸಾಧಿಸಿದೆ ಗಿಲ್ ಪಡೆ. ಈ ಮೂಲಕ ಶುಭ್‌ಮನ್ ಗಿಲ್ ಪಡೆಗೆ ಇನ್ನೊಂದು ಅವಕಾಶ ಸಿಕ್ಕಂತಾಗಿದೆ. ಸಾಲು ಸಾಲು ಸೋಲುಗಳಿಂದ ಬೆಚ್ಚಿಬಿದ್ದಿತ್ತು ಗುಜರಾತ್ ತಂಡ, ಆದರೆ ಇಂದು ಮತ್ತೆ ಭರ್ಜರಿ ಕಂಬ್ಯಾಕ್ ಮಾಡಿದೆ.
ಚೆನ್ನೈ ತಂಡ ಈವರೆಗೆ ಒಟ್ಟು 12 ಪಂದ್ಯ ಆಡಿದ್ದು 6 ಪಂದ್ಯ ಗೆದ್ದಿದ್ದರೆ ಇನ್ನು 6 ಮ್ಯಾಚ್ ಸೋತಿದೆ. ಈ ಮೂಲಕ 12 ಅಂಕ ಪಡೆದು 4ನೇ ಸ್ಥಾನ ಗಿಟ್ಟಿಸಿದೆ ಚೆನ್ನೈ ತಂಡ. ಹೀಗಾಗಿ ಇಂದು ಗುಜರಾತ್ ವಿರುದ್ಧ ನಡೆದ ಪಂದ್ಯ ಏನಾಗುತ್ತೆ? ಚೆನ್ನೈ ಗೆಲ್ಲುತ್ತಾ? ಎಂಬ ಕುತೂಹಲ ಕೆರಳಿತ್ತು. ಆದರೆ ಚೆನ್ನೈ ತಂಡ ಇಂದು ಸೋತು ಹೋಗಿದೆ. ಈ ಮೂಲಕ ಗುಜರಾತ್ ಈಗ ಮತ್ತೆ ಹುಮ್ಮಸ್ಸು ಪಡೆದಿದ್ದು, ಭಾರಿ ಕುತೂಹಲ ಕೆರಳಿದೆ. ಯಾಕಂದ್ರೆ, ಚೆನ್ನೈ ಮುಂದಿನ ಹಂತಕ್ಕೆ ಹೋಗುತ್ತಾ? ಅನ್ನೋ ಅನುಮಾನ ಮೂಡಿದೆ. ಆದರೆ ಈ ಪಂದ್ಯದ ನಂತರ ಈಗ ಗುಜರಾತ್ ತಂಡಕ್ಕೆ ಹೊಸ ಹುಮ್ಮಸ್ಸು ಬಂದಿದೆ.

ಅಬ್ಬರಿಸಿದ ಗಿಲ್ & ಸುದರ್ಶನ್!
ಗುಜರಾತ್ ಟೈಟಾನ್ಸ್ ಟೀಂಗೆ ಇಂದು ನೆರವಾಗಿದ್ದು ಶುಭ್‌ಮನ್ ಗಿಲ್ & ಸುದರ್ಶನ್ ಅವರು. ಈ ಇಬ್ಬರೂ ಭರ್ಜರಿ ಆಟ ಆಡಿ, ಗುಜರಾತ್ ತಂಡಕ್ಕೆ ಭರ್ಜರಿ ಬುನಾದಿ ಹಾಕಿ ಕೊಟ್ಟಿದ್ದರು. ಆದ್ರೆ ಈ ಗುರಿ ಬೆನ್ನುಹತ್ತಿದ್ದ ಚೆನ್ನೈ ತಂಡ ಸೋತು ಹೋಗಿದೆ. 20 ಓವರ್‌ಗೆ 231 ರನ್‌ಗಳ ಚಚ್ಚಿ ಬಿಸಾಡಿದ್ದ ಗುಜರಾತ್ ಟೈಟಾನ್ಸ್ ತಂಡ, ಚೆನ್ನೈ ತಂಡಕ್ಕೆ 232 ರನ್‌ಗಳ ಗುರಿಯನ್ನ ನೀಡಿತ್ತು. ಆದರೆ ಆಗಿದ್ದೇ ಬೇರೆ...
ಹೀಗೆ ಗುಜರಾತ್ ಟೈಟಾನ್ಸ್ ನೀಡಿದ್ದ 232 ರನ್‌ಗಳ ಗುರಿಯನ್ನು ಬೆನ್ನು ಹತ್ತಿದ್ದ ಚೆನ್ನೈಗೆ, ಆಘಾತ ಎದುರಾಗಿತ್ತು. 196 ರನ್‌ಗೆ 8 ವಿಕೆಟ್ ಕಳೆದುಕೊಂಡು ಸೋಲು ಒಪ್ಪಿಕೊಂಡಿತ್ತು. ಆದರೆ ಇದೇ ಸಮಯದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಭರ್ಜರಿ ಆಟ ಎಲ್ಲರಿಗೆ ಕೂಡ ಇಷ್ಟವಾಗಿತ್ತು. ಕೇವಲ 11 ಬಾಲ್‌ಗೆ 26 ರನ್ ಸಿಡಿಸಿದ ಮಹೇಂದ್ರ ಸಿಂಗ್ ಧೋನಿ 236.36 ಸ್ಟ್ರೈಕ್ ರೇಟ್ ಮೂಲಕ 3 ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿದರು. ಆದರೂ ಚೆನ್ನೈ ಈ ಪಂದ್ಯದಲ್ಲಿ ಸೋಲು ಕಂಡಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ.












Click it and Unblock the Notifications