ಕೋಲ್ಕತ್ತಾ ನೈಟ್ ರೈಡರ್ಸ್ ನೂತನ ಮುಖ್ಯ ಕೋಚ್ ಆಗಿ ಚಂದ್ರಕಾಂತ್ ಪಂಡಿತ್ ನೇಮಕ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿ ಕೋಲ್ಕತ್ತಾ ನೈಟ್ ರೈಡರ್ಸ್ ಬುಧವಾರ ಭಾರತೀಯ ದೇಶೀಯ ಕ್ರಿಕೆಟ್ ದಂತಕಥೆ ಚಂದ್ರಕಾಂತ್ ಪಂಡಿತ್ ಅವರನ್ನು ತನ್ನ ಹೊಸ ಮುಖ್ಯ ಕೋಚ್ ಆಗಿ ನೇಮಿಸಿದೆ. ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕಲಮ್ ಇಂಗ್ಲೆಂಡ್‌ ಟೆಸ್ಟ್ ತಂಡದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ನಂತರ ಅವರ ಸ್ಥಾನವನ್ನು ತುಂಬಲು ಕೆಕೆಆರ್ ಚಂದ್ರಕಾಂತ್ ಪಂಡಿತ್ ಅವರನ್ನು ನೇಮಿಸಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ಎರಡು ಬಾರಿ ಐಪಿಎಲ್ ಚಾಂಪಿಯನ್ ಆಗಿದೆ ಮತ್ತು 2021 ರಲ್ಲಿ ರನ್ನರ್-ಅಪ್ ಆಗಿತ್ತು. 2014ರಲ್ಲಿ ಕೆಕೆಆರ್ ಕೊನೆಯ ಬಾರಿಗೆ ಕಪ್ ಜಯಿಸಿತ್ತು.

ಇತ್ತೀಚೆಗೆ ಚೊಚ್ಚಲ ರಣಜಿ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದ ಮಧ್ಯಪ್ರದೇಶ ತಂಡಕ್ಕೆ ಚಂದ್ರಕಾಂತ್ ಪಂಡಿತ್ ತರಬೇತುದಾರರಾಗಿದ್ದರು. 2018 ಮತ್ತು 2019 ರಲ್ಲಿ ರಣಜಿ ಟ್ರೋಫಿ ಪ್ರಶಸ್ತಿ ಗೆದ್ದ ವಿದರ್ಭ ತಂಡದ ತರಬೇತುದಾರರಾಗಿದ್ದರು. ಅವರು ಭಾರತೀಯ ದೇಶೀಯ ಕ್ರಿಕೆಟ್‌ನ ಮುಂಬೈ ತಂಡಕ್ಕೆ ಸಹ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.

Chandrakant Pandit As New Head Coach For Kolkata Knight Riders

ತಮ್ಮ ಆಟದ ದಿನಗಳಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿದ್ದ ಪಂಡಿತ್ ಅವರು ಭಾರತದ 5 ಟೆಸ್ಟ್ ಮತ್ತು 36 ಏಕದಿನ ಪಂದ್ಯಗಳನ್ನಾಡಿದ್ದಾರೆ. ಚಂದ್ರಕಾಂತ್ ಪಂಡಿತ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 48 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 8000 ಕ್ಕೂ ಹೆಚ್ಚು ರನ್ ಗಳಿಸಿದರು.

Chandrakant Pandit As New Head Coach For Kolkata Knight Riders

ಕೆಕೆಆರ್‌ನ ಸಿಇಒ ವೆಂಕಿ ಮೈಸೂರು ಮಾಹಿತಿ

ಕೆಕೆಆರ್‌ನ ಸಿಇಒ ವೆಂಕಿ ಮೈಸೂರು ಚಂದ್ರಕಾಂತ್ ಪಂಡಿತ್ ನೇಮಕ ಕುರಿತಂತೆ ಪ್ರಕಟಣೆ ಹೊರಡಿಸಿದ್ದಾರೆ, "ನಮ್ಮ ಪ್ರಯಾಣದ ಮುಂದಿನ ಹಂತಕ್ಕೆ ನಮ್ಮನ್ನು ಮುನ್ನಡೆಸಲು ಚಂದು ನೈಟ್ ರೈಡರ್ಸ್ ಕುಟುಂಬವನ್ನು ಸೇರುತ್ತಿರುವುದು ನಮಗೆ ತುಂಬಾ ಉತ್ಸಾಹ ತಂದಿದೆ. ಅವರು ಏನು ಮಾಡುತ್ತಾರೆ ಎಂಬುದಕ್ಕೆ ಅವರ ಬದ್ಧತೆ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ಅವರ ಯಶಸ್ಸಿನ ದಾಖಲೆಯು ಎಲ್ಲರಿಗೂ ಕಾಣುತ್ತಿದೆ. ನಮ್ಮ ನಾಯಕ ಶ್ರೇಯಸ್ ಅಯ್ಯರ್ ಜೊತೆಗಿನ ಅವರ ಪಾಲುದಾರಿಕೆಯನ್ನು ನಾವು ಎದುರು ನೋಡುತ್ತಿದ್ದೇವೆ," ಎಂದು ತಿಳಿಸಿದ್ದಾರೆ.

Chandrakant Pandit As New Head Coach For Kolkata Knight Riders

ಇದು ನನಗೆ ದೊಡ್ಡ ಗೌರವ ಎಂದ ಪಂಡಿತ್

ಹೊಸ ಸವಾಲನ್ನು ಸ್ವೀಕರಿಸಿರುವ ಚಂದ್ರಕಾಂತ್ ಪಂಡಿತ್ ಮಾತನಾಡಿ, "ಈ ಜವಾಬ್ದಾರಿಯನ್ನು ನೀಡಿರುವುದು ದೊಡ್ಡ ಉತ್ಸುಕನಾಗಿದ್ದೇನೆ ಮತ್ತು ಈ ಅವಕಾಶಕ್ಕಾಗಿ ನಾನು ಎಲ್ಲಾ ನಮ್ರತೆ ಮತ್ತು ಸಕಾರಾತ್ಮಕ ನಿರೀಕ್ಷೆಗಳೊಂದಿಗೆ ಎದುರು ನೋಡುತ್ತಿದ್ದೇನೆ." ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+