T20 World Cup: ಕ್ಯಾನ್ಸರ್ ಗೆದ್ದ ಧೀರ: ಓಮನ್ ನಾಯಕನ ಹಿಂದಿದೆ ಹೃದಯ ಕಲಕುವ ಕಥೆ
ಕ್ಯಾನ್ಸರ್.. ಈ ಖಾಯಿಲೆಯ ಹೆಸರು ಕೆಳಿದ್ರೆ ಭಯ ಬರುತ್ತದೆ. ಜೀವ ಉಳಿಯುವುದು ಡೌಟ್ ಎಂಬ ಭಾವನೆ ಮನದಲ್ಲಿ ಮೂಡುತ್ತದೆ. ಉಳಿದರೂ ಮುಂದೆನಪ್ಪಾ ಎಂಬ ಆತಂಕ ಪದೆ ಪದೇ ಕಾಡುತ್ತಲೇ ಇರುತ್ತದೆ. ಮನುಷ್ಯನಿಗೆ ಚಿತ್ರ ಹಿಂಸೆ ನೀಡಿ ಕೊಲ್ಲುವ ಖಾಯಿಲೆಗಳಲ್ಲಿ ಮೋಸ್ಟ್ ಲಿ ಈ ಖಾಯಿಲಿಗೆ ಅಗ್ರ ಸ್ಥಾನ.
ಈ ಕಾಯಿಲೆ ಬಂತು ಎಂದರೆ ಯಾವುದೇ ವರ್ಗದ ಜನರಾದರೂ, ನರಳೋದು ಫಿಕ್ಸ್.. ಮನುಷ್ಯನ ಜೀವನದ ಮೇಲೆ ಈ ಖಾಯಿಲೆ ಗಾಢವಾದ ಪರಿಣಾಮ ಬೀರಿದೆ. ಈ ರೋಗ ಬಂದ ರೋಗಿಯ ನರಳಾಟ ನಿಜಕ್ಕೂ ಕಣ್ಣಿರು ತರಿಸುತ್ತದೆ. ಈ ಮಹಾ ಖಾಯಿಲೆಯನ್ನು ಗೆದ್ದು ಬೆರಳೆಣಿಕೆ ಜನ ಮಾತ್ರ ಅದೃಷ್ಟ ವಶಾತ್ ಪುಟಿದೇದಿದ್ದಾರೆ.

ಕ್ಯಾನ್ಸರ್ ಗೆದ್ದ ಧೀರ ಯುವಿ
ಈ ಕ್ಯಾನ್ಸರ್ ಖಾಯಿಲೆಯನ್ನು ಮೆಟ್ಟಿ ನಿಂತು ಎದ್ದು ಬಂದವರಲ್ಲಿ ಎದ್ದು ಬಾಣುವ ಕ್ರಿಕೆಟ್ ಆಟಗಾರ ಎಂದರೆ ಯುವರಾಜ್ ಸಿಂಗ್.. ಯವಿ ಕ್ಯಾನ್ಸರ್ ಖಾಯಿಲೆಯನ್ನು ಗೆದ್ದು ಕ್ರಿಕೆಟ್ ಅಂಗಳದಲ್ಲಿ ಅಬ್ಬರಿಸಿದ ಆಟಗಾರ. ಇವರನ್ನೇ ಹೋಲುವ ಇನ್ನೋಬ್ಬ ಪ್ಲೇಯರ್ ಕ್ರಿಕೆಟ್ ಅಂಗಳದಲ್ಲಿ ಪ್ರತ್ಯಕ್ಷ ನಾಗಿದ್ದಾನೆ. ಇತನೇ ಓಮನ್ ತಂಡದ ನಾಯಕ ಅಕಿಬ್ ಇಲ್ಯಾಸ್..
ಯಾರ ಆ ಓಮನ್ ಪ್ಲೇಯರ್?
31 ವರ್ಷದ ಯುವಕ ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಆದರೆ ಕೆಲ ವರ್ಷಗಳ ಹಿಂದೆ ಈ ಕ್ರಿಕೆಟ್ ಆಟಗಾರನ ಬದುಕು ಅಕ್ಷರಶಃ ನರಕವಾಗಿತ್ತು. ಹಾಸಿಗೆಯ ಮೇಲೆ ಮಲಗಿಕೊಂಡು ದಿನವೂ ಕ್ರಿಕೆಟ್ ಅಂಗಳದ ಕನಸು ಕಾಣುತ್ತಿದ್ದ. ತಾನು ಇನ್ನು ಎಂದೂ ಕ್ರಿಕೆಟ್ ಮೈದಾನಕ್ಕೆ ಇಳಿಯುವದೇ ಇಲ್ಲ ಎಂದು ಆಗ ಅನಿಸುತ್ತಿತ್ತು. ಇದಕ್ಕೆ ಕಾರಣ ಆತನಿಗೆ ಕ್ಯಾನ್ಸರ್ ಕಾಣಿಸಿಕೊಂಡಿತ್ತು.
ಆತನಿಗೆ ಏನ್ ಆಗಿತ್ತು?
ಈ ಬಗ್ಗೆ ತನ್ನ ಅನುಭವದ ಮಾತುಗಳನ್ನು ಅಕಿಬ್ ಇಲ್ಯಾಸ್ ಇಂಡಿಯನ್ ಎಕ್ಸ್‌ಪ್ರೇಸ್ ಜೊತೆಗೆ ಹಂಚಿಕೊಂಡಿದ್ದಾರೆ. 2021 ಟಿ20 ವಿಶ್ವಕಪ್‌ಗೂ ಮುನ್ನದ ಕಥೆ ಇದು. ನನ್ನ ಸ್ನೇಹಿತನ ಎಡಗಾಲಿಗೆ ಕ್ಯಾನ್ಸರ್ ಗಡ್ಡೆ ಆಗಿತ್ತು. ಆಗ ಆತ ಪ್ರಾಣವನ್ನೇ ಕಳೆದುಕೊಂಡಿದ್ದು. ನನಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೂ ಸಹ ನನಗೂ ಅಂತಹದ್ದೇ ಖಾಯಿಲೆ ಆಗಿದೆ ಎಂದು ಸೂಚಿಸಿದರು. ಆಗ ಆಕಾಶವೇ ನನ್ನ ಮೇಲೆ ಬಿದ್ದ ಹಾಗೆ ಭಾಸವಾಯಿತು ಎಂದು ಅವರು ತಿಳಿಸಿದ್ದಾರೆ.

ವೈದ್ಯರು ಹೇಳಿದ್ದೇನು?
ವೈದ್ಯರು ಹೀಗೆ ಹೇಳುತ್ತಲೆ ನಾನು ನಡೆದಾಡುವುದು, ಕ್ರಿಕೆಟ್ ಆಡುವುದು ಎಲ್ಲವೂ ಕನಸಿನಂತೆ ಕಾಣತೊಡಗಿತು. ನಿಮ್ಮ ಕಾಲಿಗೆ ಬಂದಿರುವ ಬಾವನ್ನು ನೋಡಿದರೆ ಇದು ಗಂಭೀರ ಸ್ವರೂಪದ್ದಾಗಿದೆ ಎಂದು ವೈದ್ಯರು ತಿಳಿಸಿದ್ದರು. ನನ್ನ ಸಹೋದರ ನನಗೆ ಏನಾಗಿದೆ ಎಂದು ಕೇಳಿದಾಗ ನಾನು ಆತನನ್ನು ತಬ್ಬಿ ಅಳಲು ಆರಂಭಿಸಿದೆ ಎಂದು ಅಕಿಬ್ ಇಲ್ಯಾಸ್ ಅವರು ತಮ್ಮ ಅಳಲನ್ನು ತೋಡಿಕೊಂಡರು.
ಆಗ ಓಮನ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರು ನನಗೆ ಕರೆ ಮಾಡಿ, ನಿಮ್ಮ ಆರೋಗ್ಯದ ಸಂಪೂರ್ಣ ಜವಾಬ್ದಾರಿಯನ್ನು ನಾವು ನೋಡಿಕೊಳ್ಳುತ್ತೇವೆ ನೀವು ನಿಶ್ಚಿಂತೆಯಿಂದ ಇರಿ ಎಂದು ಹೇಳಿದರು. ಆಗ ಅವರು ಲಂಡನ್‌ಗೆ ಹೋಗಿ ಚಿಕಿತ್ಸೆ ಪಡೆಯುತ್ತಿಯಾ ಎಂದು ಕೇಳಿದಾಗ ನಾನು ಪಾಕಿಸ್ತಾನದಲ್ಲಿ ಆದರೆ ಚೆನ್ನಾಗಿತ್ತು ಎಂದು ತಿಳಿಸಿದ್ದೆ. ನನನೆ ಲಾಹೋರ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಲಂಡನ್‌ನಿಂದ ಬಂದ ನುರಿತ ತಜ್ಞರು ನನಗೆ ಲಾಹೋರ್‌ನಲ್ಲೇ ಚಿಕಿತ್ಸೆ ನೀಡಿದರು ಎಂದು ತಿಳಿಸಿದರು.
18 ವರ್ಷದ ಬಳಿಕ ಅಂಗಳ ಪ್ರವೇಶ
ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದೆ ಎಂಬ ಭಾವ ಅಕಿಬ್ ಇಲ್ಯಾಸ್ ಅವರಲ್ಲಿ ಮೂಡಲು ಆರಂಭಿಸಿತು. ಆದರೆ ಇದರ ಮಧ್ಯೆ ತನಗೆ ನಡೆಯಲು ತೊಂದರೆ ಆಗುತ್ತಿರುವುದು ಅವರಿಗೆ ತಿಳಿಯಿತು. ಈ ಸಮಸ್ಯೆಯಿಂದ ಗುಣವಾಗಲು ಅವರಿಗೆ 8 ತಿಂಗಳು ಬರಬೇಕಾಯಿತು. ಬಳಿಕ 18 ತಿಂಗಳ ಬಳಿಕ ಕ್ರಿಕೆಟ್ ಅಂಗಳಕ್ಕೆ ಪ್ರವೇಶಿಸುವ ಅವರ ಕನಸು ನನಸಾಯಿತು.
ನಾನು ಚೇತರಿಸಿಕೊಂಡು ಮೈದಾನಕ್ಕೆ ಇಳಿದಿದ್ದು ತುಂಬ ಖುಷಿಯ ವಿಚಾರ. ನಾನು ಬೇಗ ಗುಣಮುಖನಾಗುತ್ತೇನೆ ಎಂಬ ಭಾವನೆ ನನ್ನಲಿತ್ತು. ಆದರೆ ಕ್ಯಾನ್ಸರ್ ನನ್ನ ಮೇಲೆ ಪ್ರಭಾವ ಬೀರಿದ್ದರಿಂದ ಸಮಯ ಹಿಡಿಯಿತು. ಕ್ರಮೇಣ ನನ್ನ ಕಾಲುಗಳ ಕಾರ್ಯ ಚೇತರಿಕೆ ಕಂಡಿತು. ಕೊನೆಗೆ ವೈದ್ಯರು ನಾನು ಕ್ರಿಕೆಟ್ ಆಡಬಹುದು ಎಂದು ಗ್ರೀನ್ ಸಿಗ್ನಲ್ ನೀಡಿದರು. ಈಗ ನಾನು ಓಮನ್ ದೇಶವನ್ನು ಪ್ರತಿ ನಿಧಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ನಿಜಕ್ಕೂ ಇವರ ಕರುಣಾ ಜನಕ ಕಥೆಯನ್ನು ಕೇಳಿ ಕಣ್ಣಂಚಲ್ಲಿ ನೀರು ಬರುವುದಂತೂ ಗ್ಯಾರಂಟಿ.












Click it and Unblock the Notifications