India vs New Zealand: ನ್ಯೂಜಿಲೆಂಡ್‌ಗೆ ಭಾರಿ ಆಘಾತ; ಕೈಕೊಟ್ಟ ಪ್ರಮುಖ ಆಟಗಾರ
ಚಾಂಪಿಯನ್ಸ್ ಟ್ರೋಫಿ 2025ರ ಫೈನಲ್‌ನಲ್ಲಿ ಭಾರತ ನ್ಯೂಜಿಲೆಂಡ್ ಮುಖಾಮುಖಿಯಾಗಿವೆ. ಸತತ ಮೂರನೇ ಬಾರಿ ಫೈನಲ್‌ಗೆ ಪ್ರವೇಶ ಪಡೆದಿರುವ ಭಾರತ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿದೆ. ನ್ಯೂಜಿಲೆಂಡ್ ಕೂಡ ಬಲಿಷ್ಠವಾಗಿದ್ದು ಎರಡನೇ ಬಾರಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ಯೋಜನೆ ಮಾಡಿದೆ. ಆದರೆ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್‌ಗೆ ದೊಡ್ಡ ಆಘಾತ ಎದುರಾಗಿದೆ.
ಲೀಗ್ ಹಂತದ ಭಾರತದ ವಿರುದ್ಧದ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಪರವಾಗಿ ವೇಗದ ಬೌಲರ್ ಮ್ಯಾಟ್ ಹೆನ್ರಿ 5 ವಿಕೆಟ್ ಪಡೆದು ಮಿಂಚಿದ್ದರು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಸೆಮಿಫೈನಲ್ ಪಂದ್ಯದ ವೇಳೆ ಹೆನ್ರಿಚ್ ಕ್ಲಾಸೆನ್ ಅವರ ಕ್ಯಾಚ್ ಹಿಡಿಯುವ ಸಂದರ್ಭದಲ್ಲಿ ಭುಜದ ಗಾಯಕ್ಕೆ ತುತ್ತಾಗಿದ್ದರು. ಕೊನೆಯವರೆಗೂ ಮ್ಯಾಟ್ ಹೆನ್ರಿ ಅವರನ್ನು ಆಡಿಸುವ ವಿಶ್ವಾಸದಲ್ಲಿದ್ದ ನ್ಯೂಜಿಲೆಂಡ್ ಕೊನೆ ಕ್ಷಣದಲ್ಲಿ ಅವರನ್ನು ಫೈನಲ್ ಪಂದ್ಯದಲ್ಲಿ ತಂಡದಿಂದ ಹೊರಗಿಟ್ಟಿದೆ.

ಮ್ಯಾಟ್ ಹೆನ್ರಿ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ಫೈನಲ್ ಪಂದ್ಯದಲ್ಲಿ ಪ್ಲೇಯಿಂಗ್ ಇಲೆವೆನ್‌ನಿಂದ ಹೊರಗುಳಿದರು. ಅವರ ಬದಲಾಗಿ ನ್ಯೂಜಿಲೆಂಡ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ನಾಥನ್ ಸ್ಮಿತ್ ಅವಕಾಶ ಪಡೆದುಕೊಂಡಿದ್ದಾರೆ. ಮ್ಯಾಟ್ ಹೆನ್ರಿ ಅಲಭ್ಯತೆ ತಂಡದ ಬೌಲಿಂಗ್ ಮೇಲೆ ದೊಡ್ಡ ಪರಿಣಾಮ ಬೀರಲಿದ್ದು, ಭಾರತ ತಂಡಕ್ಕೆ ಅನುಕೂಲವಾಗಿದೆ.
ನ್ಯೂಜಿಲೆಂಡ್‌ಗೆ ಆಘಾತ ಕೊಟ್ಟ ಇಂಡಿಯಾ
ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಸ್ಫೋಟಕ ಆರಂಭ ಮಾಡಿತು. 7.5 ಓವರ್ ಗಳಲ್ಲೇ 57 ರನ್ ಗಳಿಸಿತ್ತು, ಆದರೆ ವರುಣ್ ಚಕ್ರವರ್ತಿ ವಿಲ್ ಯಂಗ್ ಅವರನ್ನು ಎಲ್‌ಬಿಡಬ್ಲ್ಯೂ ಔಟ್ ಮಾಡುವ ಮೂಲಕ ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. 29 ಎಸೆತಗಳಲ್ಲಿ 37 ರನ್ ಗಳಿಸಿ ಅಪಾಯಕಾರಿಯಾಗಿದ್ದ ರಚಿನ್ ರವೀಂದ್ರ ಅವರನ್ನು ಕುಲದೀಪ್ ಯಾದವ್‌ರನ್ನು ಔಟ್ ಮಾಡುವ ಮೂಲಕ ಭಾರತಕ್ಕೆ ಮತ್ತೊಂದು ಯಶಸ್ಸು ತಂದುಕೊಟ್ಟರು.
ಬಳಿಕ ಬಂದ ಅನುಭವಿ ಬ್ಯಾಟರ್ ಕೇನ್ ವಿಲಿಯಮ್ಸನ್ 11 ರನ್ ಗಳಿಸಿ ಔಟಾದರು. ಬಳಿಕ ರವೀಂದ್ರ ಜಡೇಜಾ ಟಾಮ್ ಲಾಥಮ್‌ರನ್ನು ಔಟ್ ಮಾಡುವ ಮೂಲಕ ನ್ಯೂಜಿಲೆಂಡ್‌ಗೆ ಮತ್ತೊಂದು ಆಘಾತ ಕೊಟ್ಟಿದ್ದಾರೆ. 23.2 ಓವರ್ ಗಳಲ್ಲಿ ನ್ಯೂಜಿಲೆಂಡ್ 108 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಭಾರತದ ಸ್ಪಿನ್ನರ್ ಗಳು ನ್ಯೂಜಿಲೆಂಡ್ ತಂಡವನ್ನು ಕಾಡುತ್ತಿದ್ದಾರೆ.












Click it and Unblock the Notifications