RCB: ಭುವನೇಶ್ವರ್ ಕುಮಾರ್ ಹ್ಯಾಟ್ರಿಕ್‌; ಆರ್‌ಸಿಬಿ ವೇಗಿಯ ಅಬ್ಬರ ನೋಡಿ ಅಭಿಮಾನಿಗಳ ಸಂಭ್ರಮ

ಐಪಿಎಲ್ ಮೆಗಾ ಹರಾಜಿನಲ್ಲಿ ಆರ್ ಸಿಬಿ ಬೌಲಿಂಗ್ ವಿಭಾಗದ ಬಲವನ್ನು ಹೆಚ್ಚಿಸಿಕೊಳ್ಳಲು ಹೆಚ್ಚಿನ ಒತ್ತು ನೀಡಿತ್ತು. ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್, ನುವಾನ್ ತುಷಾರ, ರಸಿಕ್‌ದಾರ್, ಲುಂಗಿ ಎಂಗಿಡಿ, ರೊಮಾರಿಯೋ ಶೆಫರ್ಡ್‌ರನ್ನು ಖರೀದಿ ಮಾಡಿದ್ದು ಬೌಲಿಂಗ್ ವಿಭಾಗಕ್ಕೆ ಬಲ ಸಿಕ್ಕಿದೆ. ಭುವನೇಶ್ವರ್ ಕುಮಾರ್ 10 ವರ್ಷಗಳ ಕಾಲ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಆಡಿದ್ದರು, ತಮ್ಮ ಮಾಜಿ ಫ್ರಾಂಚೈಸ್ ಆರ್ ಸಿಬಿಗೆ ಮರಳಿದ್ದಾರೆ. ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ಹ್ಯಾಟ್ರಿಕ್ ಪಡೆದು ಮಿಂಚಿದ್ದಾರೆ.

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ಭುವನೇಶ್ವರ್ ಕುಮಾರ್ ಉತ್ತರ ಪ್ರದೇಶ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಜಾರ್ಖಂಡ್ ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭುವನೇಶ್ವರ್ ಕುಮಾರ್ ತಮ್ಮ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 17ನೇ ಓವರ್ ನಲ್ಲಿ ರಾಬಿನ್ ಮಿಂಜ್, ಬಾಲಕೃಷ್ಣ, ವಿವೇಕಾನಂದ ತಿವಾರಿಯನ್ನು ಔಟ್ ಮಾಡುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಲ್ಲದೆ ಪಂದ್ಯದಲ್ಲಿ ತಿರುವು ತಂದರು.

bhuvneshwar kumar hat trick 2024 rcb ipl 2025

ಅವರ ಉತ್ತಮ ಬೌಲಿಂಗ್ ಪ್ರದರ್ಶನದ ನೆರವಿನಿಂದ ಉತ್ತರ ಪ್ರದೇಶ ಜಾರ್ಖಂಡ್ ವಿರುದ್ಧ 10 ರನ್‌ಗಳ ರೋಚಕ ಗೆಲುವು ಸಾಧಿಸಿತು. ಭುವನೇಶ್ವರ್ ಕುಮಾರ್ 4 ಓವರ್ ಗಳಲ್ಲಿ 1 ಮೇಡನ್ ಓವರ್ ಮಾಡಿದ್ದಲ್ಲದೆ ಕೇವಲ 6 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದು ಮಿಂಚಿದರು. ಅವರ ಅತ್ಯುತ್ತಮ ಬೌಲಿಂಗ್‌ಗಾಗಿ ಪಂದ್ಯ ಶ್ರೇಷ್ಠ ಪ್ರದರ್ಶನ ಕೂಡ ಪಡೆದರು.

ಭುವನೇಶ್ವರ್ ಕುಮಾರ್ ಅಬ್ಬರಿಸಿದರೆ..

ಭುವನೇಶ್ವರ್ ಕುಮಾರ್ ಟಿ20 ಮಾದರಿಗೆ ಹೇಳಿ ಮಾಡಿಸಿ ಬೌಲರ್, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅವರ ಬೌಲಿಂಗ್‌ ಆರ್ ಸಿಬಿಗೆ ಭಾರಿ ಉಪಯೋಗವಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಅಪಾರ ಅನುಭವ ಹೊಂದಿರುವ ಭುವನೇಶ್ವರ್ ಕುಮಾರ್ ಆರಂಭಿಕ ಓವರ್ ಗಳಲ್ಲಿ ಮತ್ತು ಡೆತ್ ಓವರ್ ಗಳಲ್ಲಿ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕಾಗಿ ಹಲವು ಪಂದ್ಯಗಳನ್ನು ತಮ್ಮ ಬಿಗಿ ಬೌಲಿಂಗ್‌ನಿಂದ ಗೆಲ್ಲಿಸಿಕೊಟ್ಟಿದ್ದಾರೆ. ಐಪಿಎಲ್ ಮೆಗಾ ಹರಾಜಿನಲ್ಲಿ ಆರ್ ಸಿಬಿ 10.75 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದೆ. ಯಶ್ ದಯಾಳ್‌, ಜೋಶ್ ಹೇಜಲ್‌ವುಡ್, ನುವಾನ್ ತುಷಾರ ಮತ್ತು ಭುವನೇಶ್ವರ್ ಕುಮಾರ್‍‌ ಮಿಂಚಿದರೆ ಆರ್ ಸಿಬಿ ಗೆಲುವು ಸುಲಭವಾಗಲಿದೆ.

ಬರೋಡಾ ತಂಡದ ನಾಯಕ ಕೃನಾಲ್ ಪಾಂಡ್ಯ ಕೂಡ ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದು ತಂಡದ ಬೌಲಿಂಗ್ ಮತ್ತು ಬ್ಯಾಟಿಂಗ್‌ಗೆ ಬಲ ತುಂಬಲಿದ್ದಾರೆ. ರಜತ್ ಪಟಿದಾರ್, ಜಿತೇಶ್ ಶರ್ಮಾ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದು, ಆರ್ ಸಿಬಿ ಅಭಿಮಾನಿಗಳು ಸಖತ್ ಖುಷಿಯಲ್ಲಿದ್ದಾರೆ. ಐಪಿಎಲ್‌ನಲ್ಲಿ ಕೂಡ ಈ ಆಟಗಾರರು ಇದೇ ಫಾರ್ಮ್‌ ಮುಂದುವರೆಸಿದರೆ ಆರ್ ಸಿಬಿ ಸುಲಭವಾಗಿ ಪ್ಲೇ ಆಫ್‌ ತಲುಪಬಹುದು ಎನ್ನುವ ಲೆಕ್ಕಾಚಾರ ಫ್ಯಾನ್ಸ್‌ಗಳದ್ದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+