ಬಿಸಿಸಿಐಗೆ ಭಾರೀ ಹಿನ್ನಡೆ: ಐಪಿಎಲ್ ಫ್ರಾಂಚೈಸಿಗೆ 538 ಕೋಟಿ ರೂ... ಕಾರಣವೇನು?
18ನೇ ಆವೃತ್ತಿಯ ಐಪಿಎಲ್ ಮುಗಿದಿದೆ. ಈ ಲೀಗ್‌ನಲ್ಲಿ ಆರ್‌ಸಿಬಿ ಪಂಜಾಬ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಸಹ ಅಲಂಕರಿಸಿದೆ. ಅಲ್ಲದೆ ಫ್ರಾಂಚೀಸಿಗಳಿಗೆ ನೀಡಬೇಕಿದ್ದ ಹಣವನ್ನು ಸಹ ಬಿಸಿಸಿಐ ನೀಡಿದೆ. ಆದರೆ ಈಗ ಬರುತ್ತಿರುವ ಸುದ್ದಿ ನಿಜಕ್ಕೂ ಬಿಸಿಸಿಐ ನಿದ್ದೆ ಗೆಡಿಸಿದೆ. ಕೊಚ್ಚಿ ಬಿಸಿಸಿಐಗೆ ಕಚ್ಚಿ ಗಾಯ ಮಾಡಿದೆ. ಹಾಗಿದ್ದರೆ ಆಗಿದ್ದು ಏನು? ಎಂಬ ಬಗ್ಗೆ ವರದಿ ಇಲ್ಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೊಚ್ಚಿ ಟಸ್ಕರ್ಸ್ ಎಂಬ ತಂಡವೊಂದು ಇತ್ತು. ಈ ತಂಡದ ವಿರುದ್ಧ ಬಿಸಿಸಿಐ ಬಾಂಬೆ ಹೈ ಕೋರ್ಟ್‌ನಲ್ಲಿ ಮೇಲ್ನನವಿ ಅರ್ಜಿಯನ್ನು ಸಲ್ಲಿಸಿತ್ತು. ಈ ಪ್ರಕರಣದ ವಿಚಾರಣೆಯ ತೀರ್ಪು ಬುಧವಾರ ಬಂದಿದೆ. ನ್ಯಾಯಾಲಯ ನೀಡಿದ ತೀರ್ಪು ನಿರ್ಶಿತವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಗ್ ಶಾಕ್ ತಂದಿದೆ. ಇದರಿಂದ ಬಿಸಿಸಿಐ ಸಲ್ಲಿಸಿದ್ದ ಮೇಲ್ನನವಿ ಅರ್ಜಿ ವಜಾ ಆಗಿದೆ.

ಬಾಂಬೆ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಆರ್.ಐ. ಚಾಗ್ಲಾ ಪೀಠ ಬಿಸಿಸಿಐನ ಮೇಲ್ಮನವಿಯನ್ನು ವಜಾಗೊಳಿಸಿದೆ. ಬಿಸಿಸಿಐ ಕೊಚ್ಚಿ ಫ್ರಾಂಚೈಸಿಯನ್ನು ಕೈ ಬಿಟ್ಟಿದ್ದು ಒಪ್ಪಂದದ ಗಂಭೀರ ಉಲ್ಲಂಘನೆಯಾಗಿದೆ. ಈ ನಿರ್ಧಾರದಲ್ಲಿ ವಜಾಗೊಳಿಸಲು ಯಾವುದೇ ಆಧಾರವಿಲ್ಲ ಎಂದು ಕೋರ್ಟ್ ತಿಳಿಸಿದೆ. ಈ ಪ್ರಕರಣ 2011ರಿಂದ ಕೋರ್ಟ್‌ನಲ್ಲಿ ನಡೆಯುತ್ತಿದೆ. ಅಲ್ಲದೆ ಮಧ್ಯಸ್ಥಿಕೆ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.
ಆಗಿದ್ದೇನು?
ಐಪಿಎಲ್ 2011ರಲ್ಲಿ ಕೊಚ್ಚಿ ಟಸ್ಕರ್ಸ್ ತಂಡ ನೂತನ ಫ್ರಾಂಚೈಸಿಯಾಗಿ ಸೇರಿಸಲಾಯಿತು. ಈ ತಂಡವನ್ನು ರೆಂಡೆಜ್ವಸ್ ಸ್ಪೋರ್ಟ್ಸ್ ವರ್ಲ್ಡ್ (RSW) ಮತ್ತು ಕೊಚ್ಚಿ ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್ (KSPL) ಒಕ್ಕೂಟವು ನಿರ್ವಹಿಸುತ್ತಿತ್ತು. ಈ ತಂಡ ಫ್ರಾಂಚೈಸಿ ಒಪ್ಪಂದಗಳ ಉಲ್ಲಂಘನೆಯನ್ನು ಮಾಡಿದೆ ಎಂದು ಉಲ್ಲೇಖಿಸಿ ಬಿಸಿಸಿಐ ಈ ತಂಡವನ್ನು ವಜಾಗೊಳಿಸಿತ್ತು. ತಂಡವನ್ನು ಐಪಿಎಲ್‌ನಿಂದ ಹೊರ ಹಾಕಲು ಕಾರಣವಾಗಿದ್ದ ಅಂಶ ಎಂದರೆ, ಟಸ್ಕರ್ಸ್ ಶೆಕಡಾ 10 ರಷ್ಟು ಬ್ಯಾಂಕ್ ಗ್ಯಾರಂಟಿ ನೀಡಿಲ್ಲ ಎಂದು ಬಿಸಿಸಿಐ ದೂಷಿಸಿತ್ತು.
ಬಿಸಿಸಿಐ ತೆಗೆದುಕೊಂಡ ನಿರ್ಧಾರಕ್ಕೆ ಪ್ರತಿಯಾಗಿ ಕೆಸಿಪಿಎಲ್ ಮತ್ತು ಆರ್‌ಎಸ್‌ಡಬ್ಲ್ಯೂ 2012 ಹೋರಾಟ ಆರಂಭಿಸಿತು. 2015ರಲ್ಲಿ ಈ ತೀರ್ಪು ಕೊಚ್ಚಿ ಟಸ್ಕರ್ಸ್ ಪರವಾಗಿ ಬಂದಿತ್ತು. ಆಗ ನ್ಯಾಯಾಲಯ ಬಿಸಿಸಿಐ 384 ಕೋಟಿಗಳನ್ನು ಕೊಚ್ಚಿ ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್‌ಗೆ ಹಾಗೂ 153 ಕೋಟಿ ರೂ.ಗಳನ್ನು ರೆಂಡೆಜ್ವಸ್ ಸ್ಪೋರ್ಟ್ಸ್ ವರ್ಲ್ಡ್ ಗೆ ನೀಡುವಂತೆ ಆದೇಶಿಸಿತ್ತು. ಇಷ್ಟೇ ಅಲ್ಲದೆ ವಾರ್ಷಿಕ ಶೇಕಡಾ 18 ರಷ್ಟು ಬಡ್ಡಿಯನ್ನು ಸಹ ನೀಡುವಂತೆ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಬಿಸಿಸಿಐ ಮೇಲ್ನವಿ ಸಲ್ಲಿಸಿತ್ತು.












Click it and Unblock the Notifications