Angelo Mathews: ಐಸಿಸಿ ಕ್ರಿಕೆಟ್ ಇತಿಹಾಸದಲ್ಲೇ ಯಾರೂ ಮಾಡಿರದ ದಾಖಲೆ ನಿರ್ಮಿಸಿದ ಶ್ರೀಲಂಕಾದ ಈ ಆಟಗಾರ!
ಶ್ರೀಲಂಕಾ ಕ್ರಿಕೆಟ್ ತಂಡ, ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023ರಲ್ಲಿ ಹೀನಾಯ ಪ್ರದರ್ಶನ ಮುಂದುವರಿಸಿದೆ. ಅದರಲ್ಲೂ ಶ್ರೀಲಂಕಾದ ಸ್ಟಾರ್ ಬ್ಯಾಟ್ಸ್‌ಮನ್ ಏಂಜೆಲೊ ಮ್ಯಾಥ್ಯೂಸ್, ಇಡೀ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ ಯಾರೂ ನಿರ್ಮಿಸದ ದಾಖಲೆಯನ್ನು ನಿರ್ಮಾಣ ಮಾಡಿದ್ದಾರೆ. ಬಾಂಗ್ಲಾದೇಶ ವಿರುದ್ಧ ಕೂಡ ರನ್ ಗಳಿಸಲು ಪರದಾಡುತ್ತಿರುವ ಲಂಕನ್ನರ ಪಡೆಗೆ, ಏಂಜೆಲೊ ಮ್ಯಾಥ್ಯೂಸ್ ವಿಚಿತ್ರವಾಗಿ ಔಟ್ ಆಗಿದ್ದು ದೊಡ್ಡ ಶಾಕ್ ಕೊಟ್ಟಿದೆ.
ಹೌದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಆಟದ ಮೇಲುಸ್ತುವಾರಿ ಹೊತ್ತಿರುವ ಐಸಿಸಿ ಈಗ ತನ್ನ ನಿಯಮಗಳನ್ನು ಬಿಗಿ ಮಾಡಿದೆ. ಅದ್ರಲ್ಲೂ ಐಸಿಸಿ ರೂಲ್ಸ್ ಮೀರಿದ ಯಾವುದೇ ತಂಡದ, ಯಾವುದೇ ಆಟಗಾರನಿಗೆ ತಕ್ಕ ಶಾಸ್ತಿ ಗ್ಯಾರಂಟಿ. ಇದೇ ರೀತಿ ಇದೀಗ ಶ್ರೀಲಂಕಾದ ಏಂಜೆಲೊ ಮ್ಯಾಥ್ಯೂಸ್ ಕೂಡ ಐಸಿಸಿ ನಿಯಮ ಮೀರಿ ಶಿಕ್ಷೆ ಅನುಭವಿಸಿದ್ದಾರೆ. ಹಾಗಾದ್ರೆ ಮ್ಯಾಥ್ಯೂಸ್ ಮಾಡಿದ ಎಡವಟ್ಟು ಏನು ಗೊತ್ತಾ? ಹಾಗೇ, ಏಂಜೆಲೊ ಮ್ಯಾಥ್ಯೂಸ್‌ಗೆ ಈಗ ಐಸಿಸಿ ನೀಡಿರುವ ಶಿಕ್ಷೆ ಏನು?

ಒಂದೂ ಬಾಲ್ ಆಡದೆ ಮ್ಯಾಥ್ಯೂಸ್ ಔಟ್!
ಅಂದಹಾಗೆ ಮೊದಲೇ ಹೀನಾಯವಾಗಿ ಸೋತು.. ಸೋತು.. ಸುಸ್ತಾಗಿರುವ ಶ್ರೀಲಂಕಾಗೆ ಇಂದು ಮತ್ತೊಂದು ಆಘಾತ ಸಿಕ್ಕಿತ್ತು. ಶ್ರೀಲಂಕಾ ತಂಡದ ಏಂಜೆಲೊ ಮ್ಯಾಥ್ಯೂಸ್ ತಮ್ಮ ಸಣ್ಣ ತಪ್ಪಿಗೆ, ಇದುವರೆಗೂ ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಕಟ್ಟದ ಬೆಲೆ ಕಟ್ಟಬೇಕಾಗಿ ಬಂತು. ಐಸಿಸಿ ನಿಯಮದ ಪ್ರಕಾರ ನಡೆದುಕೊಳ್ಳದ, ಲಂಕಾ ಆಟಗಾರನಿಗೆ ತಕ್ಕ ಶಾಸ್ತಿಯು ಆಯ್ತು. ಒಂದೂ ಬಾಲ್ ಆಡದೆ ಏಂಜೆಲೊ ಮ್ಯಾಥ್ಯೂಸ್ ಔಟಾಗಿ ಪವಿಲಿಯನ್ ಗೂಡು ಸೇರಿದರು. ಅರೆರೆ ಅದು ಹೇಗೆ ಸಾಧ್ಯ? ಬನ್ನಿ ತಿಳಿಯೋಣ.
ಫೀಲ್ಡ್‌ಗೆ ಬರುವುದು ತಡವಾಗಿದ್ದಕ್ಕೆ ಔಟ್!
ಅಂದಹಾಗೆ ಐಸಿಸಿ ನಿಯಮ ಹೇಳುವಂತೆ ಯಾವುದೇ ಒಬ್ಬ ಬ್ಯಾಟ್ಸ್‌ಮನ್ ಔಟಾದ ತಕ್ಷಣ, ಅಂದರೆ ಒಬ್ಬ ಆಟಗಾರ ಔಟ್ ಆಗಿ ಪೆವಿಲಿಯನ್‌ಗೆ ತೆರಳಿದ ತಕ್ಷಣ ಇನ್ನೊಬ್ಬ ಆಟಗಾರನು ಸ್ಕ್ರೀಸ್‌ಗೆ ಬರಬೇಕು. ಇದಕ್ಕೆ ಕೇವಲ 2 ನಿಮಿಷ ಸಮಯ ಇರುತ್ತದೆ, ಅಕಸ್ಮಾತ್ 2 ನಿಮಿಷ ಕಳೆದರೂ ಇನ್ನೊಬ್ಬ ಆಟಗಾರ ಸ್ಕ್ರೀಸ್‌ಗೆ ಬರದೇ ಇದ್ದರೆ ಆತನನ್ನ ಔಟ್ ಎಂದು ಐಸಿಸಿಯ ನಿಯಮದ ಪ್ರಕಾರ ಘೋಷಣೆ ಮಾಡಲಾಗುತ್ತದೆ. ಈ ನಿರ್ಧಾರವನ್ನು ಅಂಪೈರ್ ಘೋಷಣೆ ಮಾಡುತ್ತಾರೆ, ಆದ್ರೆ ಈ ಹಿಂದೆ ಎಂದೂ ಈ ರೀತಿಯ ಔಟ್ ಘೋಷಣೆ ಮಾಡಿರಲಿಲ್ಲ. ಈ ಪಂದ್ಯದಲ್ಲಿ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ವಿಚಿತ್ರವಾಗಿ ಔಟ್ ಆಗಿದ್ದಾರೆ ಲಂಕಾ ತಂಡದ ಏಂಜೆಲೊ ಮ್ಯಾಥ್ಯೂಸ್.
ಏನಂತಾರೆ ಈ ನಿಯಮಕ್ಕೆ?
ಮೊದಲೇ ಹೇಳಿದಂತೆ ಔಟ್ ಆಗಿ ತೆರಳುವ ಯಾವುದೆ ಆಟಗಾರ ಅಥವಾ ನಿವೃತ್ತಿ ಹೊಂದಿ ಹೊರಗೆ ಹೋಗುವ ಯಾವುದೇ ಆಟಗಾರನ ಬದಲಾಗಿ ಇನ್ನೊಬ್ಬ ಆಟಗಾರ 2 ನಿಮಿಷದಲ್ಲಿ ಸ್ಕ್ರೀಸ್‌ಗೆ ಬರಬೇಕು. ಹೀಗೆ ಬರದೇ ಇದ್ದರೆ ಅದನ್ನು ಐಸಿಸಿ ನಿಯಮದ ಪ್ರಕಾರ, 'ಟೈಮ್ಡ್ ಔಟ್' ಎಂದು ಪರಿಗಣಿಸಿ ನಂತರ ಬರುವ ಬ್ಯಾಟ್ಸ್‌ಮನ್‌ನ ಔಟ್ ಎಂದು ನಿರ್ಧರಿಸುತ್ತಾರೆ. ಹೀಗಾಗಿ ಆಟಗಾರರು ಔಟ್ ಆದ ತಕ್ಷಣ ಇನ್ನೊಬ್ಬ ಬ್ಯಾಟ್ಸ್‌ಮನ್ ತಕ್ಷಣ ಬರುತ್ತಾನೆ. ಇಲ್ಲಿ ಏಂಜೆಲೊ ಮ್ಯಾಥ್ಯೂಸ್ ಎಡವಟ್ಟು ಮಾಡಿಕೊಂಡು ಸ್ಕ್ರೀಸ್‌ಗೆ ಬರುವುದು ತಡ ಮಾಡಿದ್ರು. ಈ ಕಾರಣಕ್ಕೆ ಈಗ ಏಂಜೆಲೊ ಮ್ಯಾಥ್ಯೂಸ್ ಐಸಿಸಿ ನಿಯಮದಂತೆ ಶಿಕ್ಷೆಗೆ ಗುರಿಯಾಗಿದ್ದಾರೆ.












Click it and Unblock the Notifications