Babar Azam: ಪಾಕಿಸ್ತಾನ ತಂಡದ ನಾಯಕ ಸ್ಥಾನ ತ್ಯಜಿಸಿದ ಬಾಬರ್ ಅಜಮ್

ಏಕದಿನ ವಿಶ್ವಕಪ್ 2023ರಲ್ಲಿ ಕಳಪೆ ಪ್ರದರ್ಶನ ನೀಡುವ ಮೂಲಕ ಟೀಕೆಗೆ ಒಳಗಾಗಿದ್ದ ಪಾಕಿಸ್ತಾನ ತಂಡದಲ್ಲಿ ಬದಲಾವಣೆ ಆರಂಭವಾಗಿದೆ. ಪಾಕಿಸ್ತಾನ ತಂಡದ ನಾಯಕತ್ವ ಸ್ಥಾನಕ್ಕೆ ಬಾಬರ್ ಅಜಂ ರಾಜೀನಾಮೆ ನೀಡಿದ್ದಾರೆ.

ತಕ್ಷಣದಿಂದಲೇ ಅವರು ನಾಯಕ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ಎಲ್ಲಾ ಮೂರು ಮಾದರಿ ಕ್ರಿಕೆಟ್‌ಗೆ ಅವರು ನಾಯಕರಾಗಿದ್ದರು, ಈಗ ಮೂರು ಮಾದರಿ ಕ್ರಿಕೆಟ್ ತಂಡದ ನಾಯಕ ಸ್ಥಾನ ತೊರೆದಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ ಬಾಬರ್ ನಾಯಕತ್ವದ ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸಲು ವಿಫಲವಾಗಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು.

Babar Azam Resigns as Pakistan Captain Following World Cup Disappointment

ಬಾಬರ್ ಅಜಮ್ ಅವರ ನಾಯಕತ್ವದಲ್ಲಿ, ಪಾಕಿಸ್ತಾನವು ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ 4 ಗೆಲುವು ಮತ್ತು 5 ಸೋಲುಗಳೊಂದಿಗೆ 5 ನೇ ಸ್ಥಾನವನ್ನು ಗಳಿಸಿತು. ಅಹಮದಾಬಾದ್‌ನಲ್ಲಿ ಭಾರತದ ವಿರುದ್ಧ ಹೀನಾಯ ಸೋಲು ಕಂಡ ಬಳಿಕ, ಚೆನ್ನೈನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಸೋತು ಮುಖಭಂಗ ಅನುಭವಿಸಿತ್ತು.

ಡಿಸೆಂಬರ್ ನಲ್ಲಿ ಪಾಕಿಸ್ತಾನ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ವಿರುದ್ಧ ಸರಣಿಗಳನ್ನು ಆಡಲಿದ್ದು, ಮುಂಬರುವ ದಿನಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಹೊಸ ನಾಯಕನನ್ನು ನೇಮಿಸಲಿದೆ.

ಬಾಬರ್ ಅಜಮ್ ಹೇಳಿದ್ದೇನು?

"2019 ರಲ್ಲಿ ಪಾಕಿಸ್ತಾನವನ್ನು ಮುನ್ನಡೆಸುವಂತೆ ಪಿಸಿಬಿಯಿಂದ ಕರೆಯನ್ನು ಸ್ವೀಕರಿಸಿದ ಕ್ಷಣವನ್ನು ನಾನು ಸ್ಪಷ್ಟವಾಗಿ ನೆನಪಿದೆ. ಕಳೆದ ನಾಲ್ಕು ವರ್ಷಗಳಲ್ಲಿ, ಮೈದಾನದಲ್ಲಿ ಮತ್ತು ಹೊರಗೆ ಅನೇಕ ಏಳು ಬೀಳುಗಳನ್ನು ಅನುಭವಿಸಿದ್ದೇನೆ, ಆದರೆ ನಾನು ಪೂರ್ಣ ಹೃದಯದಿಂದ ಮತ್ತು ಉತ್ಕಟಭಾವದಿಂದ ಪಾಕಿಸ್ತಾನದ ಹೆಮ್ಮೆಯನ್ನು ಉಳಿಸಿಕೊಳ್ಳುವ ಗುರಿಯನ್ನು ಹೊಂದಿದ್ದೇನೆ ಮತ್ತು ಕ್ರಿಕೆಟ್ ಜಗತ್ತಿನಲ್ಲಿ ಗೌರವ, ಆಟಗಾರರು, ತರಬೇತುದಾರರು ಮತ್ತು ನಿರ್ವಹಣೆಯ ಸಾಮೂಹಿಕ ಪ್ರಯತ್ನದ ಫಲವಾಗಿ ವೈಟ್-ಬಾಲ್ ಮಾದರಿಯಲ್ಲಿ ನಂಬರ್ 1 ಸ್ಥಾನವನ್ನು ತಲುಪಿದೆ ಆದರೆ ಈ ಸಮಯದಲ್ಲಿ ಅವರ ಅಚಲ ಬೆಂಬಲಕ್ಕಾಗಿ ಭಾವೋದ್ರಿಕ್ತ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ. ಇಂದು, ನಾನು ಎಲ್ಲಾ ಸ್ವರೂಪಗಳಲ್ಲಿ ಪಾಕಿಸ್ತಾನದ ನಾಯಕನ ಸ್ಥಾನದಿಂದ ಕೆಳಗಿಳಿಯುತ್ತಿದ್ದೇನೆ. ಇದು ಕಠಿಣ ನಿರ್ಧಾರವಾಗಿದೆ ಆದರೆ ಈ ಕರೆಗೆ ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ" ಎಂದು ಎಕ್ಸ್ (ಟ್ವಿಟರ್) ಖಾತೆಯಲ್ಲಿ ನಾಯಕತ್ವ ಸ್ಥಾನದಿಂದ ಕೆಳಗಿಳಿದ ಬಗ್ಗೆ ಮಾಹಿತಿ ನೀಡಿದ್ದಾರೆ.

ಟೆಸ್ಟ್, ಏಕದಿನ ಮಾದರಿಗೆ ಬೇರೆ ನಾಯಕತ್ವ

ಮೂರು ಮಾದರಿಗೆ ಬಾಬರ್ ಅಜಮ್ ನಾಯಕರಾಗಿದ್ದರು, ಈಗ ಮೂರು ಮಾದರಿ ಕ್ರಿಕೆಟ್‌ ನಾಯಕ ಸ್ಥಾನದಿಂದ ರಾಜೀನಾಮೆ ಕೊಟ್ಟಿದ್ದು, ಟೆಸ್ಟ್ ಮತ್ತು ಏಕದಿನ ಹಾಗೂ ಟಿ20 ಮಾದರಿಗೆ ವಿಭಿನ್ನ ನಾಯಕರನ್ನು ನೇಮಕ ಮಾಡುವ ಸಾಧ್ಯತೆ ಇದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ, ಸರ್ಫರಾಜ್ ಅಹ್ಮದ್ ಅಥವಾ ಯುವ ಆಟಗಾರ ಶಾನ್ ಮಸೂದ್ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆ ಇದ್ದು, ವೈಟ್-ಬಾಲ್ ಕ್ರಿಕೆಟ್‌ನಲ್ಲಿ, ಮೊಹಮ್ಮದ್ ರಿಜ್ವಾನ್ ಅಥವಾ ಶಾಹೀನ್ ಅಫ್ರಿದಿ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+