ODI World Cup: ತಪ್ಪಿದ ಅವಕಾಶ: ಅಸಮಾಧಾನ ವ್ಯಕ್ತಪಡಿಸಿದ ಅಕ್ಷರ್ ಪಟೇಲ್
ಏಕದಿನ ವಿಶ್ವಕಪ್ 2023ರ ಪಂದ್ಯಾವಳಿಗಾಗಿ ಭಾರತ ತಂಡದಲ್ಲಿ ಕೊನೆಯ ಕ್ಷಣದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಗಾಯಗೊಂಡಿರುವ ಅಕ್ಷರ್ ಪಟೇಲ್ ಬದಲಿಗೆ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸ್ಥಾನ ಪಡೆದುಕೊಂಡಿದ್ದಾರೆ. ಅಶ್ವಿನ್ ಆಯ್ಕೆ ಮಾಡಿರುವುದಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ ಇನ್ನೂ ಕೆಲವರು ಅಕ್ಷರ್ ಪಟೇಲ್ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.
ಅಕ್ಷರ್ ಪಟೇಲ್ ಕೂಡ ತಮ್ಮನ್ನು ತಂಡದಿಂದ ಕೈಬಿಟ್ಟಿದ್ದಕ್ಕೆ ಅಸಮಾಧಾನಗೊಂಡರಾ ಎನ್ನುವ ಪ್ರಶ್ನೆ ಕಾಡುತ್ತಿದೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಅವರು, ನಂತರ ಅದನ್ನು ಅಳಿಸಿದ್ದಾರೆ. ಇದು ಕುತೂಹಲಕ್ಕೆ ಕಾರಣವಾಗಿದೆ.

ಕಳೆದ 12 ತಿಂಗಳುಗಳಿಂದ ವಿಶ್ವಕಪ್ ಯೋಜನೆಯ ಭಾಗವಾಗಿದ್ದರೂ, ಭಾರತ ಕ್ರಿಕೆಟ್ ತಂಡವು ಅಶ್ವಿನ್ ಅವರನ್ನು ಕೊನೆಯ ಕ್ಷಣದಲ್ಲಿ ಬದಲಿಯಾಗಿ ಕರೆತಂದಿದ್ದು, ಅಕ್ಷರ್ ಗಾಯಗೊಂಡಿದ್ದಾರೆ. ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಅಕ್ಷರ್ ಪಟೇಲ್ ಗಾಯಗೊಂಡ ಬಳಿಕ ಅನುಭವಿ ಅಶ್ವಿನ್ ಜೊತೆ ಹೋಗಲು ನಿರ್ಧರಿಸಿದರು.
ಅಕ್ಷರ್ ಪಟೇಲ್ ಅಸಮಾಧಾನ?
ವಿಶ್ವಕಪ್ ಪಂದ್ಯಾವಳಿತಯಿಂದ ಹೊರಬಿದ್ದ ಬಳಿಕ ಅಕ್ಷರ್ ಪಟೇಲ್ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು, ಕೆಲವೇ ಸಮಯದ ಬಳಿಕ ಅದನ್ನು ಅಳಿಸಿಹಾಕಿದ್ದಾರೆ. ತಾವು ಮಾಡಿರುವ ಪೋಸ್ಟ್‌ನಲ್ಲಿ, "ಕಾಮರ್ಸ್ ಬದಲಾಗಿ ವಿಜ್ಞಾನವನ್ನು ತೆಗೆದುಕೊಂಡು ಉತ್ತಮ ಪಿಆರ್ ಅನ್ನು ನೇಮಿಸಬೇಕಿತ್ತು" ಎಂದು ಮುರಿದ ಹೃದಯದ ಎಮೋಜಿ ಮತ್ತು ಅಸ್ತಿಪಂಜರವೊಂದು ಕತ್ತರಿಯಿಂದ ಹೃದಯವನ್ನು ಕತ್ತರಿಸುವ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಇದು ಖಚಿತವಾಗಿ ಅಕ್ಷರ್ ಪಟೇಲ್ ಅವರು ತಮ್ಮನ್ನು ತಂಡದಿಂದ ಕೈಬಿಟ್ಟಿದ್ದಕ್ಕೆ ನಿರಾಶಾರಾಗಿರುವುದನ್ನು ತೋರಿಸುತ್ತದೆ. ಇದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಉದ್ದೇಶಪೂರ್ವಕವಾಗಿಯೇ ಅವರನ್ನು ಕೈಬಿಡಲಾಗಿದೆಯಾ ಎನ್ನುವ ಅನುಮಾನವನ್ನು ಕೂಡ ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ.
ಏಷ್ಯಾಕಪ್‌ನಲ್ಲಿ ಗಾಯಗೊಂಡಿದ್ದ ಅಕ್ಷರ್ ಪಟೇಲ್
ಬಾಂಗ್ಲಾದೇಶ ವಿರುದ್ಧದ ಏಷ್ಯಾಕಪ್ ಸೂಪರ್ ಫೋರ್ ಪಂದ್ಯದಕ್ಕಿ ಎಡ ಕ್ವಾಡ್ರೈಸ್ಪ್ಸ್ ಸ್ಟ್ರೈನ್ ಅನ್ನು ಅನುಭವಿಸಿದ ನಂತರ ಅಕ್ಷರ್ ಪಟೇಲ್ ವಿಶ್ವಕಪ್ ಸಮಯದಲ್ಲಿ ಚೇತರಿಸಿಕೊಳ್ಳಲು ವಿಫಲರಾಗಿದ್ದಾರೆ. ಇದರ ಪರಿಣಾಮವಾಗಿ ಅಕ್ಷರ್ ಪಟೇಲ್ ಏಷ್ಯಾಕಪ್‌ನ ಫೈನಲ್ ಪಂದ್ಯದಿಂದ ಹೊರಬಿದ್ದಿದ್ದರು.
ಅವರು ಇನ್ನೂ ಸುಧಾರಿಸಿಕೊಳ್ಳಲು ವಿಫಲರಾದ ನಂತರ ಸೆಪ್ಟೆಂಬರ್ 28ರಂದು ಅಶ್ವಿನ್ ಅವರನ್ನು ಭಾರತ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿತು. ಭಾರತ ತಂಡದಲ್ಲಿ ಆಫ್ ಸ್ಪಿನ್ನರ್ ಇರಬೇಕಿತ್ತು ಎನ್ನುವ ವಾದ ಏಷ್ಯಾಕಪ್‌ನಿಂದ ಕೇಳಿಬಂದಿತ್ತು, ಯಾರಾದರೂ ಗಾಯಗೊಂಡರೆ ಅಶ್ವಿನ್ ತಂಡದಲ್ಲಿ ಸೇರ್ಪಡೆಯಾಗುತ್ತಾರೆ ಎಂದು ಹೇಳಲಾಗಿತ್ತು, ಈಗ ಅದರಂತೆ ಆಫ್ ಸ್ಪಿನ್ನರ್ ಅಶ್ವಿನ್ ತಂಡವನ್ನು ಸೇರಿಕೊಂಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಆಡಿದ್ದ ಅಶ್ವಿನ್ 4 ವಿಕೆಟ್ ಪಡೆದು ಮಿಂಚಿದ್ದರು. ಬ್ಯಾಟಿಂಗ್‌ನಲ್ಲೂ ಮಿಂಚಬಲ್ಲ ಸಾಮರ್ಥ್ಯ ಹೊಂದಿದ್ದು, ಭಾರತದ ಪಿಚ್‌ಗಳಲ್ಲಿ ಮಾರಕವಾಗುವ ಸಾಧ್ಯತೆ ಇದೆ.












Click it and Unblock the Notifications