Breaking; ರಸ್ತೆ ಅಪಘಾತ, ಮಾಜಿ ಕ್ರಿಕೆಟಿಗ ಆಂಡ್ಯ್ರೂ ಸೈಮಂಡ್ಸ್ ಸಾವು

ಸಿಡ್ನಿ, ಮೇ 15; ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಂಡ್ಯ್ರೂ ಸೈಮಂಡ್ಸ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಹಲವಾರು ಗಣ್ಯರು ಸೈಮಂಡ್ಸ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಟೌನ್ಸ್‌ವಿಲ್ಲೆಯಿಂದ ಸುಮಾರು 50 ಕಿ. ಮೀ. ವ್ಯಾಪ್ತಿಯ ಹಾರ್ವೇ ರೇಂಜ್ ಎಂಬಲ್ಲಿ ಅಪಘಾತ ಸಂಭವಿಸಿದೆ. ಕಾರನ್ನು ಸೈಮಂಡ್ಸ್‌ ಅವರೇ ಓಡಿಸುತ್ತಿದ್ದರು.

ಕಾರಿನಲ್ಲಿ ಆಂಡ್ಯ್ರೂ ಸೈಮಂಡ್ಸ್ (46) ಒಬ್ಬರೇ ಇದ್ದು, ವೇಗವಾಗಿ ಸಾಗುತ್ತಿದ್ದ ಕಾರು ನಿಯಂತ್ರಣ ತಪ್ಪಿ ಸೇತುವೆಯೊಂದರ ಸಮೀಪ ರಸ್ತೆಯಿಂದ ಹೊರಗೆ ಹೋಗಿ ಪಲ್ಟಿಯಾಗಿದೆ.

ಅಪಘಾತ ನಡೆದ ಸ್ಥಳಕ್ಕೆ ಪೊಲೀಸರು, ತುರ್ತು ವೈದ್ಯಕೀಯ ತಂಡ ತಕ್ಷಣ ಧಾವಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಆಂಡ್ಯ್ರೂ ಸೈಮಂಡ್ಸ್ ಉಳಿಸಿಕೊಳ್ಳಲು ಮಾಡಿದ ಪ್ರಯತ್ನ ವಿಫಲವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Andrew Symonds

ಆಂಡ್ಯ್ರೂ ಸೈಮಂಡ್ಸ್ ಆಸ್ಟ್ರೇಲಿಯಾದ ಕ್ರಿಕೆಟ್ ತಂಡದ ಮಾಜಿ ಅಲ್ ರೌಂಡರ್. 26 ಟೆಸ್ಟ್ ಮ್ಯಾಚ್‌ಗಳನ್ನು ಆಡಿದ್ದ ಅವರು 2 ಶತಕಗಳನ್ನು ಸಹ ಬಾರಿಸಿದ್ದರು. ಸೀಮಿತ ಓವರ್‌ಗಳ ಕ್ರಿಕೆಟ್ ಪಂದ್ಯಗಳ ಸ್ಪೆಷಲಿಸ್ಟ್ ಎಂದೇ ಖ್ಯಾತಿ ಪಡೆದಿದ್ದರು.

198 ಏಕದಿನ ಪಂದ್ಯಗಳನ್ನು ಆಡಿದ್ದ ಆಂಡ್ಯ್ರೂ ಸೈಮಂಡ್ಸ್ ತಂಡ ಎರಡು ಬಾರಿ ವಿಶ್ವಕಪ್ ಗೆದ್ದಾಗ ತಂಡದ ಸದಸ್ಯರಾಗಿದ್ದರು. ನಿವೃತ್ತಿಯ ಬಳಿಕ ಅವರು ಜನಪ್ರಿಯ ವೀಕ್ಷಕ ವಿವರಣೆಗಾರರಾಗಿದ್ದರು.

ಸಂತಾಪ ಸೂಚಿಸಿದ ಗಿಲ್‌ ಕ್ರಿಸ್ಟ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+