Get Updates
Get notified of breaking news, exclusive insights, and must-see stories!

ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ 2023; ಬಲಿಷ್ಠ ಭಾರತ ತಂಡ ಪ್ರಕಟ; ನವೀನ್-ಪವನ್ ಜುಗಲ್‍ಬಂದಿ

ದಕ್ಷಿಣ ಕೊರಿಯಾದ ಬೂಸಾನ್‌ನಲ್ಲಿ ಜೂನ್ 27ರಿಂದ ಜೂನ್ 30 ರವರೆಗೆ ನಡೆಯಲಿರುವ 2023ರ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಟೂರ್ನಿಗೆ ಭಾರತೀಯ ಅಮೆಚೂರ್ ಕಬಡ್ಡಿ ಫೆಡರೇಶನ್ (ಎಕೆಎಫ್‌ಐ) 12 ಸದಸ್ಯರ ಬಲಿಷ್ಠ ತಂಡವನ್ನು ಬುಧವಾರ (ಮೇ 24) ಪ್ರಕಟಿಟಿದೆ.

ಬಿಹಾರದ ಪಾಟ್ನಾದಲ್ಲಿ ನಡೆದ ತರಬೇತಿ ಶಿಬಿರದ ಬಳಿಕ ಭಾರತೀಯ ತಂಡದ ಆಯ್ಕೆ ನಡೆದಿದೆ. ಸ್ಟಾರ್‌ ರೈಡರ್‌ಗಳಾದ ನವೀನ್ ಕುಮಾರ್ ಮತ್ತು ಪವನ್ ಶೆರಾವತ್ ಭಾರತ ಕಬಡ್ಡಿ ತಂಡದ ನೇತೃತ್ವ ವಹಿಸಲಿದ್ದಾರೆ.

 Asian Kabaddi Championship 2023; Pawan Sherawat-led Strongest Indian Team Announced

6 ವರ್ಷಗಳ ನಂತರ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಆಯೋಜನೆಗೊಂಡಿದ್ದು, ಈ ಬಾರಿ ಭಾರತ ತಂಡ ಅನುಭವಿ ಹಾಗೂ ಯುವ ಆಟಗಾರರಿಂದ ಕೂಡಿದ್ದು, ಚಾಂಪಿಯನ್ ಪಟ್ಟಕ್ಕೇರುವ ಗುರಿ ಹೊಂದಿದೆ.

ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ರೈಡಿಂಗ್ ಅಂಕಗಳನ್ನು ಗಳಿಸಿರುವ ಅನುಭವಿ ಆಟಗಾರ ಪ್ರದೀಪ್ ನರ್ವಾಲ್ ಅವರು ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಭಾರತ ತಂಡದ ಮಾಜಿ ನಾಯಕ ಹಾಗೂ ಅನುಭವಿ ಆಲ್‌ರೌಂಡರ್ ದೀಪಕ್ ಹೂಡಾ ಅವರು ಕೂಡ ಭಾರತ ತಂಡದಲ್ಲಿ ಸ್ಥಾನ ಪಡೆದಿಲ್ಲ.

ಹಿರಿಯ ಆಟಗಾರರಾದ ಸುರೇಂದರ್ ಗಿಲ್, ಸುರೇಂದರ್ ನಾಡಾ, ಗಿರೀಶ್ ಮಾರುತಿ ಎರ್ನಾಕ್, ಸಿದ್ದಾರ್ಥ್ ದೇಸಾಯಿ, ಮಣೀಂದರ್ ಸಿಂಗ್, ರವೀಂದರ್ ಪೆಹಲ್ ಹಾಗೂ ಮಹೇಂದರ್ ಸಿಂಗ್ ಅವರು ಕೂಡ ಭಾರತ ತಂಡದಿಂದ ಹೊರ ಬಿದ್ದಿದ್ದಾರೆ.

 Asian Kabaddi Championship 2023; Pawan Sherawat-led Strongest Indian Team Announced

9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಅತ್ಯುತ್ತಮ ರೈಡಿಂಗ್ ಪ್ರದರ್ಶನ ನೀಡಿದ್ದ ಅರ್ಜುನ್ ದಢಸ್ವಾಲ್ ಅವರು ಏಷ್ಯನ್ ಕಬಡ್ಡಿ ಟೂರ್ನಿಗಾಗಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಡೆಲ್ಲಿ ಎಕ್ಸ್‌ಪ್ರೆಸ್ ನವೀನ್ ಕುಮಾರ್ ಹಾಗೂ ಪವನ್ ಶೆರಾವತ್ ಒಟ್ಟುಗೂಡಿದ್ದು, ಭಾರತ ತಂಡ ಚಾಂಪಿಯನ್ ಆಗುವ ಕನಸನ್ನು ಇಮ್ಮಡಿಗೊಳಿಸಿದೆ.

ಈವರೆಗಿನ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಭಾರತ ತಂಡ ಅತ್ಯಂತ ಯಶಸ್ವಿ ತಂಡವಾಗಿದೆ. 8 ಏಷ್ನ್ ಕಬಡ್ಡಿ ಚಾಂಪಿಯನ್‌ಶಿಪ್ ಟೂರ್ನಿಗಳು ನಡೆದಿದ್ದು, ಭಾರತ ತಂಡ 7 ಬಾರಿಗೆ ಚಿನ್ನದ ಪದಕಗಳನ್ನು ಗೆದ್ದುಕೊಂಡಿದೆ.

2017ರಲ್ಲಿ ಕೊನೆಯ ಬಾರಿಗೆ ಇರಾನ್‌ನ ಗೋರ್ಗೊನ್‌ನಲ್ಲಿ ಏಷ್ಯನ್ ಕಬಡ್ಡಿ ಚಂಆಪಿಯನ್‌ಶಿಪ್ ನಡೆದಾಗ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಮಣಿಸಿ ಭಾರತ ತಂಡ 7 ಬಾರಿಗೆ ಚಾಂಪಿಯನ್ ಆಗಿತ್ತು.

ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್‌ಗೆ ಭಾರತ ತಂಡ
ಪವನ್ ಶೆರಾವತ್, ನವೀನ್ ಕುಮಾರ್, ಸಚಿನ್, ಅರ್ಜುನ್ ದೇಸ್ವಾಲ್, ಮೋಹಿತ್ ಗೋಯತ್, ಅಸ್ಲಾಂ ಇನಾಂದಾರ್, ಸುನಿಲ್ ಕುಮಾರ್, ನಿತಿನ್ ರಾವಲ್, ಪರ್ವೇಶ್ ಬೈನ್ಸ್‌ವಾಲ್, ವಿಶಾಲ್ ಭಾರದ್ವಾಜ್, ನಿತೀಶ್ ಕುಮಾರ್, ಸುರ್ಜೀತ್ ಸಿಂಗ್.

ಸ್ಟ್ಯಾಂಡ್‌ಬೈ ಆಟಗಾರರು: ವಿಜಯ್ ಮಲಿಕ್, ಶುಭಂ ಶಿಂಧೆ

ಪ್ರೊ ಕಬಡ್ಡಿ ಲೀಗ್: ದಬಾಂಗ್ ಡೆಲ್ಲಿ ತಂಡಕ್ಕೆ ಅಜಯ್ ಕುಮಾರ್ ಠಾಕೂರ್ ಕೋಚ್
10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ಗೆ ಕೆಲವೇ ದಿನಗಳಲ್ಲಿ ಚಾಲನೆ ಸಿಗಲಿದ್ದು, ಮಾಜಿ ಚಾಂಪಿಯನ್ ದಬಾಂಗ್ ಡೆಲ್ಲಿ ತಂಡಕ್ಕೆ ನೂತನ ಸಹಾಯಕ ಕೋಚ್ ಆಗಿ ಭಾರತ ಕಬಡ್ಡಿ ತಂಡದ ಮಾಜಿ ನಾಯಕ ಅಜಯ್ ಕುಮಾರ್ ಠಾಕೂರ್ ನೇಮಕಗೊಂಡಿದ್ದಾರೆ.

ಅಜಯ್ ಕುಮಾರ್ ಠಾಕೂರ್ ಅವರು ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಬುಲ್ಸ್, ಪುಣೆ ಪಲ್ಟಾನ್, ತಮಿಳ್ ತಲೈವಾಸ್, ದಬಂಗ್ ಡೆಲ್ಲಿ ತಂಡಗಳ ಪರ ಆಡಿದ್ದಾರೆ. 2016ರಲ್ಲಿ ವಿಶ್ವಕಪ್ ಕಬಡ್ಡಿ ವಿಜೇತ ಭಾರತ ತಂಡದ ಸದಸ್ಯರಾಗಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+