ಏಷ್ಯನ್ ಗೇಮ್ಸ್ 2026: 5 ಭಾರತೀಯ ಟೆನ್ನಿಸ್ ಆಟಗಾರರಿಗೆ ಶಾಕ್, ತಂಡದಿಂದ ಕೈಬಿಟ್ಟಿದ್ದೇಕೆ?

ನವದೆಹಲಿ: ಭಾರತೀಯ ಐವರು ಟೆನ್ನಿಸ್ ಆಟಗಾರರನ್ನು ಪ್ರಸ್ತುತ ಏಷ್ಯನ್ ಗೇಮ್ಸ್ 2026 ನಿಂದ ಕೈ ಬಿಡಲು ನಿರ್ಧರಿಸಲಾಗಿದೆ. ಸದ್ಯ ಕ್ರೀಡಾ ಸಚಿವಾಲಯದ ಆಯ್ಕೆ ಮಾನದಂಡಗಳ ಕುರಿತು ಎಲ್ಲೆಡೆ ಚರ್ಚೆ ಆಗುತ್ತಿದೆ. ಈ ಸಂಬಂಧ ಕ್ರೀಡಾ ಸಚಿವಾಲಯವು ಆಟಗಾರರನ್ನು ಹೊರಗಿಟ್ಟ ಕುರಿತು ಸ್ಪಷ್ಟನೆ ನೀಡಿದೆ.

ಆಟಗಾರರು ನೈಜ ಸ್ಪರ್ಧಾತ್ಮಕತೆಯನ್ನು ಹೊಂದಿರಬೇಕಾಗುತ್ತದೆ. ಸಿಂಗಲ್ಸ್ ವಿಭಾಗದಲ್ಲಿ ಆಟಗಾರರು ಏಷ್ಯಾದ ಟಾಪ್ 6 ಶ್ರೇಯಾಂಕದ ಒಳಗೇ ಇರಬೇಕು. ಡಬಲ್ಸ್ ಆಟಗಾರರು ಏಷ್ಯಾದ ಟಾಪ್ 8 ಶ್ರೇಯಾಂಕದ ಒಳಗಿರಬೇಕು. ಈ ಶ್ರೇಯಾಂಕವನ್ನು 12 ತಿಂಗಳ ಅವಧಿಯ ಪ್ರದರ್ಶನದ ಆಧಾರದ ಮೇಲೆ ಅಳೆಯಲಾಗುತ್ತದೆ. ಈ ಮೌಲ್ಯಮಾಪನ ಆಧರಿಸಿ ಕೇಂದ್ರ ಸಚಿವಾಲಯವು ಐದವರು ಭಾರತೀಯ ಆಟಗಾರರನ್ನು ಹೊರಗಿಟ್ಟಿದೆ. ಆಯ್ಕೆಗೆ ಬೇಕಾದ ಮಾನದಂಡವನ್ನು ಅವರು ಪೂರೈಸಲಾಗಿಲ್ಲ ಎಂದು ಸಚಿವಾಲಯದ ಮೂಲಗಳು ತಿಳಿಸಿದೆ.

Asian Games 2026

ಪಟ್ಟಿಯಲ್ಲಿ 12ರ ಪೈಕಿ ಇದಿದ್ದೇ 7 ಮಂದಿ ಹೆಸರು!

ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ (IOA) ವತಿಯಿಂದ ಆಯ್ಕೆ ಆಗಿದ್ದ ಐವರು ಆಟಗಾರರಾದ 'ಮಾನಸ್ ಧಮ್ನೆ, ಸಹಜಾ ಯಮಲಪಲ್ಲಿ, ವೈಷ್ಣವಿ ಅಡ್ಕರ್, ಪ್ರಾರ್ಥನಾ ಥೋಂಬರೆ ಮತ್ತು ವೈದೇಹಿ ಚೌಧರಿ' ಅವರ ಹೆಸರುಗಳು ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ನೀಡಿರಲಿಲ್ಲ ಎಂದು ಹೇಳಲಾಗಿದೆ. ಕ್ರೀಡಾ ಸಚಿವಾಲಯವೇ ಎಐಟಿಎ (AITA) ಆಯ್ಕೆಗಳನ್ನು ತಿರಸ್ಕರಿಸಿದೆ ಎಂಬ ಆರೋಪವು ಕೇಳಿಬಂದಿದೆ. ಎಐಟಿಎ ಕ್ರೀಡಾ ಸಚಿವಾಲಯಕ್ಕೆ ಸಲ್ಲಿಸಿದ್ದ 12 ಸದಸ್ಯರ ಪ್ರಸ್ತಾವನೆಯಲ್ಲಿ ಎಲ್ಲರ ಹೆಸರು ಇರದೇ ಅಂತಿಮ ಪಟ್ಟಿಯಲ್ಲಿ ಕೇವಲ 7 ಮಂದಿಯ ಹೆಸರುಗಳಿದ್ದವು. ಈ ಮೇಲಿನ ಐವರ ಹೆಸರು ಇರಲಿಲ್ಲ. ಅಂತಿಮವಾಗಿ ನೀಡದೆ ಅನುಮೋದನೆಯಲ್ಲಿ 35 ಕ್ರೀಡಾ ವಿಭಾಗಗಳ 492 ಅಥ್ಲೀಟ್‌ಗಳಿಗೆ ರಹದಾರಿ ನೀಡಲಾಗಿದೆ.

ಮುಖ್ಯವಾಗಿ ಭಾರತೀಯ ಆಟಗಾರರ ಶ್ರೇಯಾಂಕ ಹಾಗೂ ಏಷ್ಯಾದ ಅಗ್ರ ಆಟಗಾರರ ಸ್ಪರ್ಧಾತ್ಮಕ ಮಟ್ಟದ ನಡುವೆ ವ್ಯತ್ಯಾಸ ಇದೆ. ಇದು ಮಾನದಂಡಗಳಿಗೆ ಹೊಂದಿಕೆ ಆಗಿಲ್ಲದ ಕಾರಣ ಅವರನ್ನು ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ಸಚಿವಾಲಯ ಸಮರ್ಥನೆ ಕೊಟ್ಟಿದೆ.

ವಿವರವಾಗಿ ನೋಡುವುದಾದರೆ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಏಷ್ಯಾದ 6ನೇ ಅತ್ಯುತ್ತಮ ಆಟಗಾರ ವಿಶ್ವ ಶ್ರೇಯಾಂಕದಲ್ಲಿ 120ನೇ ಸ್ಥಾನದಲ್ಲಿದ್ದಾರೆ. ಅದೇ ರೀತಿ ಮಹಿಳೆಯರ ಸಿಂಗಲ್ಸ್‌ನಲ್ಲಿ ಏಷ್ಯಾದ 6ನೇ ಅತ್ಯುತ್ತಮ ಆಟಗಾರ್ತಿ ವಿಶ್ವ ಶ್ರೇಯಾಂಕದಲ್ಲಿ 72ನೇ ಸ್ಥಾನದಲ್ಲಿ ಇದ್ದಾರೆ. ಕೈಬಿಡಲಾದ ಐವರ ಪೈಕಿ ಮೂವರ ಆಟಗಾರ್ತಿಯರು ಜತ್ತಿನ ಟಾಪ್ 300 ಶ್ರೇಯಾಂಕಕ್ಕಿಂತ ಹೊರಗಿದ್ದಾರೆ ಎಂದು ಸಚಿವಾಲಯ ಹೇಳಿದೆ.

ಭಾರತೀಯ ಆಟಗಾರರ ವಿಶ್ವಮಟ್ಟದ ಸ್ಥಾನ

ಭಾರತದ ನಂ.1 ಮಹಿಳಾ ಸಿಂಗಲ್ಸ್ ಆಟಗಾರ್ತಿ ಸಹಜಾ ವಿಶ್ವ ಶ್ರೇಯಾಂಕ 344ನೇ ಸ್ಥಾನ, ವೈಷ್ಣವಿ ಅವರು 390ನೇ ಸ್ಥಾನದಲ್ಲಿದ್ದರೆ ವೈದೇಹಿ ಅವರು 437ನೇ ಸ್ಥಾನದಲ್ಲಿದ್ದಾರೆ. ಇದೇ ಕಾರಣಕ್ಕೆ ಸಚಿವಾಲಯ ಇವರತ್ತ ಬೆಟ್ಟು ಮಾಡಿ, ಪಟ್ಟಿಯಿಂದ ಹೊರಗೆ ಇಟ್ಟಿವೆ. ದೇಶದ ಅತ್ಯುನ್ನತ ಶ್ರೇಯಾಂಕದವರ ಜೊತೆಗೆ ಅತ್ಯಧಿಕ ವ್ಯತ್ಯಾಸವಿರುವ ಆಟಗಾರರು ಏಷ್ಯನ್ ಗೇಮ್ಸ್ 2026 ಗೆ ಹೋಗಲು ಆಗುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಏಷ್ಯಾದ 16ನೇ ಅತ್ಯುತ್ತಮ ಪುರುಷ ಸಿಂಗಲ್ಸ್ ಆಟಗಾರ ವಿಶ್ವ ಶ್ರೇಯಾಂಕದಲ್ಲಿ ಮಾನಸ್ ಧಮ್ನೆ ಅವರಿ 227ನೇ ಸ್ಥಾನದಲ್ಲಿದ್ದಾರೆ. ಭಾರತ ನಮ್ಮ ಆಟಾಗಾರರನ್ನು ಅತ್ಯುತ್ತಮ ವಿಭಾಗದಲ್ಲಿ ಇಟ್ಟಿದ್ದಾರೆ, ಆಯ್ಕೆ ಮಾಡಿದ್ದಾರೆ ಎಂಬುದಕ್ಕಿಂತ ಬದಲಾಗಿ ವಿಶ್ವಮಟ್ಟದಲ್ಲಿ ಟಾಪ್ ಆಟಗಾರರ ಜೊತೆಗೆ ಪ್ರಬಲವಾಗಿ ಸ್ಪರ್ಧಿಸಲಿದ್ದಾರೆಯೇ, ಅದಕ್ಕೆ ಸಂಬಂಧಿಸಿದ ಮಾನದಂಡಗಳ ಅಡಿ ಬರುತ್ತಾರೆ ಎಂದು ಮಾತ್ರವೇ ನೋಡಲಾಗುತ್ತದೆ. ಅದು ಅಗದಿದ್ದ ಪಕ್ಷದಲ್ಲಿ ಆಟಗಾರರು ಸ್ಪರ್ಧಿಸುವ ನೈಜ ಅವಕಾಶ ಕಳೆದುಕೊಳ್ಳುತ್ತಾರೆ ಎಂಬುದು ಸಚಿವಾಲಯದ ವಾದವಾಗಿದೆ.

ಕೇಂದ್ರದ ಈ ನಿರ್ಧಾರದಿಂದ ಆಟಗಾರರ ಈ ಏಷ್ಯನ್ ಗೇಮ್ಸ್‌ನಲ್ಲಿ ಆಟವಾಡುವುದಿಲ್ಲ. ಹಾಗೆಂದ ಮಾತ್ರಕ್ಕೆ ಅವರ ಮೇಲಿನ ಬೆಂಬಲ ಯಾರೂ ಹಿಂಪಡೆಯಬಾರದು. ಭಾರತದ ಪ್ರಮುಖ ಅಂತರರಾಷ್ಟ್ರೀಯ ಟೆನ್ನಿಸ್ ಆಟಗಾರರಾಗಲು ಸಾಧ್ಯವಿಲ್ಲ ಎಂದು ವ್ಯಾಖ್ಯಾನಿಸುವುದನ್ನು ಸರಿಯಲ್ಲ ಎಂದು ಸಚಿವಾಲಯ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+