Ind VS Pak: ಭಾರತಕ್ಕೆ ಭರ್ಜರಿ ಗೆಲುವು, ಪಾಕಿಸ್ತಾನ ತಂಡವನ್ನು ಹೊಸಕಿ ಹಾಕಿದ ಟೀಂ ಇಂಡಿಯಾ!
ಭಾರತ & ಪಾಕಿಸ್ತಾನ ನಡುವೆ ಕ್ರಿಕೆಟ್ ಮ್ಯಾಚ್ ನಡೆಯುತ್ತಿದೆ ಅಂದ್ರೆ ಇಡೀ ಜಗತ್ತು ಕಾದು ಕುಳಿತು ಆ ಪಂದ್ಯ ವೀಕ್ಷಣೆ ಮಾಡುತ್ತದೆ. ಅದರಲ್ಲೂ ಏಷ್ಯಾಕಪ್ ಅಖಾಡದಲ್ಲೇ ಪದೇ ಪದೇ ಪಾಪಿ ಪಾಕ್ ತಂಡಕ್ಕೆ ಭಾರತದ ಹುಲಿಗಳು ಸೋಲಿನ ರುಚಿ ತೋರಿಸಿದ್ದಾರೆ. ಹೀಗಾಗಿ ಪಾಕಿಸ್ತಾನ ಕೂಡ ಬೆಚ್ಚಿದ್ದು ಭಾರತದ ಎದುರು ಫೈನಲ್ ಮ್ಯಾಚ್ ಆಡಲು ಹಿಂದೆ & ಮುಂದೆ ಯೋಚಿಸುವಂತೆ ಆಗಿತ್ತು. ಆದರೆ ಹಂಗೋ ಹಿಂಗೋ ಮಾಡಿ 146 ರನ್ ಬಾರಿಸಿದ ಪಾಕಿಸ್ತಾನಕ್ಕೆ ಸೋಲಿನ ರುಚಿ ಗ್ಯಾರಂಟಿ ಅಂತಿದ್ದಾರೆ ಫ್ಯಾನ್ಸ್.
ಹೌದು, ಭಾರತ ತಂಡ ಟಾಸ್ ಗೆದ್ದರೂ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಇದೇ ಕಾರಣಕ್ಕೆ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಆರಂಭದಲ್ಲಿ ಅತ್ಯುತ್ತಮವಾಗಿ ಆಟ ಆಡಿದರೂ, ಆ ನಂತರ ದಿಢೀರ್ ಪತನ ಕಂಡಿತ್ತು. ಹೀಗೆ ನೋಡ ನೋಡುತ್ತಲೇ ಪಾಕಿಸ್ತಾನ ತಂಡ ಹೀನಾಯವಾಗಿ ಕೇವಲ 146 ರನ್‌ಗಳಿಗೆ ಆಲೌಟ್ ಆಗಿ ಭಾರತ ತಂಡಕ್ಕೆ 147 ರನ್‌ಗಳ ಗುರಿ ನೀಡಿದೆ. ಭಾರತ ತಂಡ ಈ 147 ರನ್ ಗುರಿ ಬೆನ್ನುಹತ್ತಿ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೂ ಟೀಂ ಇಂಡಿಯಾ ಅಭಿಮಾನಿಗಳು ಮಾತ್ರ ಭಾರತದ ಬೆನ್ನಿಗೆ ನಿಂತಿದ್ದರು.

ಪಾಪಿ ಪಾಕಿಸ್ತಾನ ಕೊಟ್ಟ ಟಾರ್ಗೆಟ್...
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ ತಂಡಕ್ಕೆ ಆರಂಭದಲ್ಲೇ ಫರ್ಹಾನ್ ಭರ್ಜರಿ ಬೆನ್ನೆಲುಬಾಗಿ ನಿಂತಿದ್ದರು. 38 ಬಾಲ್ ಆಡಿದ್ದ ಸಾಹಿಬ್‌ಜಾದಾ ಫರ್ಹಾನ್, 3 ಸಿಕ್ಸರ್ & 5 ಬೌಂಡರಿ ಸಹಿತ 57 ರನ್ ಬಾರಿಸಿದ್ದರು. ಹಾಗೇ ಫಕ್‌ಹರ್ ಝಮನ್ ಕೂಡ ಚನ್ನಾಗಿ ಆಡಿ, 35 ಬಾಲ್‌ಗಳಲ್ಲೇ 46 ರನ್ ಗಳಿಸಿದ್ದರು. ಆದರೆ ಆ ನಂತರ ಬಂದ ಯಾವುದೇ ಆಟಗಾರ ಕೂಡ ಪಾಕಿಸ್ತಾನ ತಂಡಕ್ಕಾಗಿ ಬಲ ನೀಡಲೇ ಇಲ್ಲ. ಈ ಮೂಲಕ 19.1 ಓವರ್ ಆಟವಾಡಿದ ಪಾಕಿಸ್ತಾನ ತಂಡ, ಅಂತಿಮವಾಗಿ ಕೇವಲ 146 ರನ್ ಗಳಿಸಿತು. ಆದರೆ ಈ ಗುರಿ ಬೆನ್ನುಹತ್ತಿದ ನಮ್ಮ ಭಾರತ ತಂಡಕ್ಕೆ ಆರಂಭದಲ್ಲಿಯೇ ಆಘಾತ ಎದುರಾಗಿತ್ತು...
19.4 ಓವರ್ ಒಳಗೆ ಗುರಿ ತಲುಪಿದರು!
ಹೌದು, 147 ರನ್ ಗುರಿ ಬೆನ್ನುಹತ್ತಿ ಆಟ ಆರಂಭಿಸಿದ್ದ ಭಾರತ ತಂಡ ಕೇವಲ 20 ರನ್ ತಲುಪುವುದರ ಒಳಗೆ 3 ವಿಕೆಟ್ ಕಳೆದುಕೊಂಡು ಪರದಾಡಿ ಹೋಗಿತ್ತು. ಅದರಲ್ಲೂ 3 ಜನ ಆರಂಭಿಕ ಆಟಗಾರರು ಅಂದ್ರೆ ಅಭಿಷೇಕ್ ಶರ್ಮಾ, ಶುಭ್‌ಮನ್ ಗಿಲ್, ಸೂರ್ಯಕುಮಾರ್ ಯಾದವ್ ಬಹುಬೇಗ ಔಟ್ ಆಗಿ ಪೆವಿಲಿಯನ್ ಸೇರಿಬಿಟ್ಟರು. ಆದರೆ ನಂತರ ಬಂದ ತಿಲಕ್ ವರ್ಮಾ 53 ಬಾಲ್ ಆಡಿ 4 ಸಿಕ್ಸರ್ ಸಹಿತ 3 ಬೌಂಡರಿ ಬಾರಿಸಿ ಭರ್ಜರಿ 69 ರನ್‌ಗಳ ಕೊಡುಗೆ ನೀಡಿದರು. ಹಾಗೇ ಸಂಜು ಸ್ಯಾಮ್ಸನ್ ಕೂಡ 21 ಬಾಲ್ ಆಡಿ 24 ರನ್ & ಶಿವಂ ದುಬೆ 22 ಬಾಲ್ ಆಡಿ 33 ರನ್ ಬಾರಿಸಿದರು. ಈ ಮೂಲಕ ಭಾರತ ತಂಡ 19.4 ಓವರ್ ಆಟವಾಡಿ 5 ವಿಕೆಟ್ ನಷ್ಟಕ್ಕೆ 150 ರನ್ ಬಾರಿಸಿತು












Click it and Unblock the Notifications