67,00,000 ರೂಪಾಯಿ ಚೆಕ್ ಬಿಸಾಡಿದ ತಿರ್ಬೋಕಿ ಪಾಕಿಸ್ತಾನ ತಂಡದ ಕ್ಯಾಪ್ಟನ್... India And Pakistan

ಭಾರತ & ಪಾಕಿಸ್ತಾನ ಮ್ಯಾಚ್ ಅಂದ್ರೆ ಮಹಾಯುದ್ಧ ಇದ್ದಂತೆ, ಅದರಲ್ಲೂ ಭಾರತೀಯರು ಪಂದ್ಯ ಗೆದ್ದು ಪಾಪಿ ಪಾಕಿಸ್ತಾನಕ್ಕೆ ತಕ್ಕ ತಿರುಗೇಟು ನೀಡಬೇಕು ಅಂತಾ ಕಾಯುತ್ತಾರೆ. ಭಾರತ & ಪಾಕಿಸ್ತಾನ ನಡುವೆ ಮ್ಯಾಚ್ ನಡೆಯುತ್ತಿದ್ದರೆ ಜಗಳ ಕೂಡ ಅದೇ ರೀತಿ ಇರುತ್ತೆ. ಈಗಲೂ ಅದೇ ರೀತಿ ಏಷ್ಯಾಕಪ್ ಫೈನಲ್ ಮ್ಯಾಚ್ ಸಮಯದಲ್ಲಿ ಭಾರತದ ಆಟಗಾರರನ್ನು ಕೆಣಕಲು ಬಂದು ಪಾಪಿ ಪಾಕಿಸ್ತಾನ ತಂಡದ ಆಟಗಾರರು ಸರಿಯಾಗಿ ಏಟು ತಿಂದು ಹೋಗಿದ್ದಾರೆ. ಹೀಗಿದ್ದಾಗಲೇ, 67,00,000 ರೂಪಾಯಿ ಚೆಕ್ ಬಿಸಾಡಿದ ತಿರ್ಬೋಕಿ ಪಾಕಿಸ್ತಾನ ತಂಡದ ಕ್ಯಾಪ್ಟನ್...

ಒಂದಲ್ಲ.. ಎರಡಲ್ಲ... ಸತತ 3 ಬಾರಿ ಪಾಕಿಸ್ತಾನಕ್ಕೆ ಸರಿಯಾಗೇ ಏಟು ಕೊಟ್ಟಿದೆ ಭಾರತ ತಂಡ. ಭಾರತ ಕ್ರಿಕೆಟ್ ತಂಡದ ಎದುರು ಹೀನಾಯ ಸೋಲು ಕಂಡು ಕಂಡು ಕೊರಗುತ್ತಿರುವ ಪಾಕಿಸ್ತಾನ ಈಗ ಮತ್ತೊಮ್ಮೆ ಭಾರತದ ಎದುರು ಸೋತು ಸುಣ್ಣವಾಗಿದೆ. ಏಷ್ಯಾಕಪ್-2025 ಅಖಾಡದಲ್ಲಿ ಸತತವಾಗಿ 3 ಬಾರಿ ಹೀನಾಯ ಸೋಲು ಕಂಡಿರುವ ಪಾಕಿಸ್ತಾನ ತಂಡದ ಸೊಕ್ಕು ಮಾತ್ರ ಕಡಿಮೆ ಅಗಿಲ್ಲ. ಅದನ್ನ ಈಗ ಮತ್ತೊಮ್ಮೆ ಪಾಕಿಸ್ತಾನ ತಂಡದ ನಾಯಕ ತೋರಿಸಿದ್ದು, ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತವಾಗುತ್ತಿದೆ. ಹಾಗಾದ್ರೆ 67,00,000 ರೂಪಾಯಿ ಚೆಕ್ ಬಿಸಾಡಿದ್ದು ಯಾಕೆ ತಿರ್ಬೋಕಿ ಪಾಕಿಸ್ತಾನ ತಂಡದ ಕ್ಯಾಪ್ಟನ್?

Asia Cup Final Match And This Incident Is On Trend On Social Media Now

67,00,000 ರೂಪಾಯಿ ಚೆಕ್ ಬಿಸಾಡಿದ...

ಭಾರತ ತಂಡವನ್ನು ಸೋಲಿಸುತ್ತೇವೆ ಅಂತಾ ಬಂದಿದ್ದ ಪಾಪಿ ಪಾಕಿಸ್ತಾನ ತಂಡ ಹೀನಾಯ ಸೋಲನ್ನು ಕಂಡಿದೆ. 147 ರನ್ ಗುರಿ ಬೆನ್ನುಹತ್ತಿ ಆಟ ಆರಂಭಿಸಿದ್ದ ಭಾರತ ತಂಡಕ್ಕೆ ತಿಲಕ್ ವರ್ಮಾ 53 ಬಾಲ್ ಆಡಿ 4 ಸಿಕ್ಸರ್ ಸಹಿತ 3 ಬೌಂಡರಿ ಬಾರಿಸಿ ಭರ್ಜರಿ 69 ರನ್‌ಗಳ ಕೊಡುಗೆ ನೀಡಿದರು. ಹಾಗೇ ಸಂಜು ಸ್ಯಾಮ್ಸನ್ ಕೂಡ 21 ಬಾಲ್ ಆಡಿ 24 ರನ್ & ಶಿವಂ ದುಬೆ 22 ಬಾಲ್ ಆಡಿ 33 ರನ್ ಬಾರಿಸಿದರು. ಈ ಮೂಲಕ ಭಾರತ ತಂಡ 19.4 ಓವರ್ ಆಟವಾಡಿ 5 ವಿಕೆಟ್ ನಷ್ಟಕ್ಕೆ 150 ರನ್ ಬಾರಿಸಿತು.

ಆದರೆ ಈ ಸೋಲಿನ ನಂತರ ದಿಢೀರ್ ಹುಚ್ಚು ಹಿಡಿದವರಂತೆ ಆಗಿ ಹೋಗಿದ್ದರು ತಿರ್ಬೋಕಿ ಪಾಕಿಸ್ತಾನ ತಂಡದ ಆಟಗಾರರು, ತಮಗೆ ಪಂದ್ಯ ಮುಗಿದ ನಂತರ ಕೊಟ್ಟಿದ್ದ ಚೆಕ್ ಎಸೆದು ಹೋಗಿದ್ದಾರೆ. ಈ ವಿಡಿಯೋ ಬಗ್ಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+