ಹಿಡಿ.. ಹೊಡಿ.. ಬಡಿ.. ಪಾಕಿಸ್ತಾನಕ್ಕೆ ಮೊದಲ ಏಟು ಕೊಟ್ಟ ಭಾರತ! Ind VS Pak
ಭಾರತ ಕ್ರಿಕೆಟ್ ತಂಡದ ಎದುರು ಹೀನಾಯ ಸೋಲು ಕಂಡು ಕಂಡು ಕೊರಗುತ್ತಿರುವ ಪಾಕಿಸ್ತಾನ ಈಗ ಮತ್ತೊಮ್ಮೆ ಭಾರತದ ಎದುರು ಸೋತು ಸುಣ್ಣವಾಗಲು ಎಂಟ್ರಿ ಕೊಟ್ಟಿದೆ. ಏಷ್ಯಾಕಪ್-2025 ಅಖಾಡ ಪ್ರವೇಶ ಮಾಡಿ ಹೀನಾಯ ಸೋಲುಗಳನ್ನು ಕಂಡಿರುವ ಪಾಕಿಸ್ತಾನ ತಂಡ ಇದೀಗ ಫೈನಲ್ ಮ್ಯಾಚ್ ಆಡುತ್ತಿದೆ. ಹೀಗಿದ್ದಾಗ ಆರಂಭದಲ್ಲೇ ಪಾಕಿಸ್ತಾನ ತಂಡಕ್ಕೆ ಭಾರಿ ದೊಡ್ಡ ಆಘಾತ ಎದುರಾಗಿದ್ದು, ಟೀಂ ಇಂಡಿಯಾ ಎದುರು ಟಾಸ್ ಸೋತು ಥಂಡಾ ಹೊಡೆದಿದೆ...
ಅಂದಹಾಗೆ ಭಾರತ & ಪಾಕಿಸ್ತಾನ ತಂಡಗಳು ಬದ್ಧ ವೈರಿಗಳು. ಕೆಲವು ತಿಂಗಳ ಹಿಂದಷ್ಟೇ ಭಾರತ & ಪಾಕಿಸ್ತಾನ ನಡುವೆ ಘೋರ ಯುದ್ಧ ನಡೆದಿತ್ತು. ಮತ್ತೊಂದು ಪರಮಾಣು ಯುದ್ಧದ ಟೆನ್ಷನ್ ಪ್ರಪಂಚದ ಮೂಲೆ ಮೂಲೆಗೂ ಆವರಿಸಿತ್ತು. ಇದೆಲ್ಲಾ ಮುಗಿದು ಹೋದ ನಂತರ ಇದೀಗ ಭಾರಿ ದೊಡ್ಡ ಕ್ರಿಕೆಟ್ ಯುದ್ಧ ಶುರುವಾಗಿದೆ, ಭಾರತ & ಪಾಕಿಸ್ತಾನ ತಂಡಗಳ ನಡುವೆ ಇದೀಗ ಘೋರ ಕ್ರಿಕೆಟ್ ಕದನ ಶುರು ಆಗಿದ್ದು ಪಾಕಿಸ್ತಾನ ತಂಡ ಭಾರತದ ಎದುರು ಸತತ 3ನೇ ಸೋಲು ಕಾಣುವುದು ಗ್ಯಾರಂಟಿ ಆಗಿದೆ!

ಪಾಪಿ ಪಾಕಿಸ್ತಾನ ತಂಡಕ್ಕೆ ನಡುಕ!
ಭಾರತದ ಬೌಲಿಂಗ್ ಪಡೆಯನ್ನು ನೋಡಿದರೆ ಯಾವುದೇ ತಂಡವಾದರೂ ನಡುಗಿ ಹೋಗಬೇಕು. ಆ ರೀತಿ ಭಾರತದ ಬೌಲಿಂಗ್ ಪಡೆ ಇದ್ದು, ಭಾರತದ ಬೌಲಿಂಗ್ ಅಬ್ಬರಕ್ಕೆ ಜಗತ್ತಿನ ಶಕ್ತಿಶಾಲಿ ತಂಡಗಳ ಪೈಕಿ ಒಂದಾಗಿರುವ ಆಸ್ಟ್ರೇಲಿಯಾ ಕೂಡ ನಡುಗಿ ಹೋಗುತ್ತದೆ. ಹೀಗಿದ್ದಾಗ ಪಾಕಿಸ್ತಾನ ಯಾವ ಲೆಕ್ಕ? ಅಂತಾರೆ ಭಾರತದ ಕ್ರಿಕೆಟ್ ಅಭಿಮಾನಿಗಳು. ಇದಕ್ಕೆ ತಕ್ಕಂತೆ ಆಟವಾಡಿದ ಭಾರತ ತಂಡದ ಬೌಲರ್ಸ್, ಏಷ್ಯಾಕಪ್ ಅಖಾಡದಲ್ಲಿ ಮತ್ತೊಮ್ಮೆ ಮಿಂಚಿದ್ದಾರೆ. ಈ ಮೂಲಕ ಭಾರತ ತಂಡ ಪಾಕಿಸ್ತಾನಕ್ಕೆ ಭಾರಿ ಆಘಾತ ನೀಡಿತ್ತು...
146 ರನ್ ಗಳಿಸಿ ಆಲೌಟ್!
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ ತಂಡಕ್ಕೆ ಆರಂಭದಲ್ಲೇ ಫರ್ಹಾನ್ ಭರ್ಜರಿ ಬೆನ್ನೆಲುಬಾಗಿ ನಿಂತಿದ್ದರು. 38 ಬಾಲ್ ಆಡಿದ್ದ ಸಾಹಿಬ್‌ಜಾದಾ ಫರ್ಹಾನ್, 3 ಸಿಕ್ಸರ್ & 5 ಬೌಂಡರಿ ಸಹಿತ 57 ರನ್ ಬಾರಿಸಿದ್ದರು. ಹಾಗೇ ಫಕ್‌ಹರ್ ಝಮನ್ ಕೂಡ ಚನ್ನಾಗಿ ಆಡಿ, 35 ಬಾಲ್‌ಗಳಲ್ಲೇ 46 ರನ್ ಗಳಿಸಿದ್ದರು. ಆದರೆ ಆ ನಂತರ ಬಂದ ಯಾವುದೇ ಆಟಗಾರ ಕೂಡ ಪಾಕಿಸ್ತಾನ ತಂಡಕ್ಕಾಗಿ ಬಲ ನೀಡಲೇ ಇಲ್ಲ. ಈ ಮೂಲಕ 19.1 ಓವರ್ ಆಟವಾಡಿದ ಪಾಕಿಸ್ತಾನ ತಂಡ, ಅಂತಿಮವಾಗಿ ಕೇವಲ 146 ರನ್ ಗಳಿಸಿತು. ಆದರೆ ಈ ಗುರಿ ಬೆನ್ನುಹತ್ತಿದ ನಮ್ಮ ಭಾರತ ತಂಡಕ್ಕೆ ಆರಂಭದಲ್ಲಿಯೇ ಆಘಾತ ಎದುರಾಗಿತ್ತು...












Click it and Unblock the Notifications