Arjun Tendulkar: ಕ್ರಿಕೆಟ್ ದೇವರ ಮಗ ಅರ್ಜುನ್ ತೆಂಡೂಲ್ಕರ್ ತಂಡದಿಂದ ಔಟ್..

Arjun Tendulkar: ಕ್ರಿಕೆಟ್‌ ದೇವರು ಅಂತಲೇ ಪ್ರಸಿದ್ಧಿಯಾಗಿರುವ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ತಂಡವೊಂದರಿಂದ ಹೊರಬಿದ್ದಿದ್ದಾರೆ. ಹಾಗಾದ್ರೆ ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಸಚಿನ್ ತೆಂಡೂಲ್ಕರ್ ಅವರು ಮನಸ್ಸು ಮಾಡಿದ್ದರೆ ಅವರ ಪುತ್ರ ಅರ್ಜುನ್‌ ಇಷ್ಟೊತ್ತಿಗಾಗಲೇ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುತ್ತಿದ್ದರು. ಆದರೆ ಅವರು ಹಾಗೆ ಮಾಡಲಿಲ್ಲ, ಬದಲಿಗೆ ಎಲ್ಲಾ ಆಟಗಾರರಂತೆಯೇ ಕಷ್ಟಪಟ್ಟು ಮೇಲೆ ಬರಲಿ ಎನ್ನುವುದೇ ಅವರ ಉದ್ದೇಶವಾಗಿತ್ತು. ಅದರಂತೆಯೇ ಅರ್ಜುನ್ ಶ್ರಮಿಸುತ್ತಿದ್ದು, ಈ ನಡುವೆಯೇ ಅವರು ಗೋವಾ ತಂಡದಿಂದ ಹೊರಬಿದ್ದಿದ್ದಾರೆ. ಇದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

Arjun Tendulkar Son of Sachin Tendulkar Dropped from Goa Ranji Trophy Squad Check Full Team List

ತಂಡದಿಂದ ಹೊರಬಿದ್ದ ಅರ್ಜುನ್ ತೆಂಡೂಲ್ಕರ್

ಮುಂಬರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಗಾಗಿ ಗೋವಾ ಕ್ರಿಕೆಟ್ ಸಂಸ್ಥೆಯು ತನ್ನ 16 ಸದಸ್ಯರ ಅಂತಿಮ ತಂಡವನ್ನು ಅಧಿಕೃತವಾಗಿ ಪ್ರಕಟಿಸಿದೆ. ಆದರೆ, ಸಚಿನ್ ತೆಂಡೂಲ್ಕರ್ ಅವರ ಪುತ್ರ ಹಾಗೂ ಆಲ್ರೌಂಡರ್ ಆಗಿರುವ ಅರ್ಜುನ್ ತೆಂಡೂಲ್ಕರ್ ಅವರಿಗೆ ಈ ಬಾರಿ ತಂಡದಲ್ಲಿ ಸ್ಥಾನ ಸಿಗದಿರುವುದು ಕ್ರೀಡಾಲೋಕದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

2022-23ರ ಋತುವಿನಿಂದಲೂ ಗೋವಾ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದ ಅರ್ಜುನ್ ತೆಂಡೂಲ್ಕರ್, ಇತ್ತೀಚೆಗಷ್ಟೇ ಗೋವಾ ಪರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 50 ವಿಕೆಟ್‌ಗಳ ಪ್ರಮುಖ ಮೈಲಿಗಲ್ಲನ್ನು ತಲುಪಿದ್ದರು. ಅಲ್ಲದೆ, ಇತ್ತೀಚೆಗೆ ನಡೆದ ಈ ತಂಡದ ಒಮನ್ ಪ್ರವಾಸದಲ್ಲೂ ಅವರು ಭಾಗವಹಿಸಿರಲಿಲ್ಲ.

ವಿಜಯ್ ಹಜಾರೆ ಟ್ರೋಫಿಯಲ್ಲಿ ಕಣಕ್ಕಿಳಿದಿದ್ದ ಅರ್ಜುನ್

27 ವರ್ಷದ ಅರ್ಜುನ್ ಮುಂಬರುವ ಋತುವಿನಲ್ಲೂ ಗೋವಾ ಪರವೇ ಮುಂದುವರೆಯಲಿದ್ದಾರೆ ಎಂದು ಈ ಹಿಂದೆ ವರದಿಗಳಾಗಿದ್ದವು. ಆದರೂ ಅಂತಿಮವಾಗಿ ಆಯ್ಕೆ ಮಂಡಳಿಯು ಪ್ರಕಟಿಸಿದ ತಂಡದ ಪಟ್ಟಿಯಲ್ಲಿ ಅವರ ಹೆಸರು ಇರಲಿಲ್ಲ. ಅರ್ಜುನ್ ಕೊನೆಯದಾಗಿ ಪೋರ್ವೊರಿಮ್‌ನಲ್ಲಿ ಕೇರಳ ವಿರುದ್ಧ ನಡೆದ ಪಂದ್ಯದಲ್ಲಿ ಹಾಗೂ ವಿಜಯ್ ಹಜಾರೆ ಟ್ರೋಫಿಯಲ್ಲಿ ಗೋವಾ ಪರ ಕಣಕ್ಕಿಳಿದಿದ್ದರು.

ಗೋವಾ ಕ್ರಿಕೆಟ್ ಸಂಸ್ಥೆಯು ಮುಂಬರುವ ರಣಜಿ ಟ್ರೋಫಿ ಸರಣಿಗಾಗಿ ತನ್ನ ತಂಡವನ್ನು ಪ್ರಕಟಿಸಿದ್ದು, 16 ಸದಸ್ಯರ ಈ ತಂಡಕ್ಕೆ ಅಭಿನವ್ ತೇಜರಾಣಾ ಅವರನ್ನು ನಾಯಕರನ್ನಾಗಿ ನೇಮಿಸಲಾಗಿದೆ. ಅಭಿನವ್ ತೇಜರಾಣಾ (ನಾಯಕ), ಸುಯಾಶ್ ಪ್ರಭುದೇಸಾಯಿ, ಮಂಥನ್ ಖುಟ್ಕರ್, ಲಲಿತ್ ಯಾದವ್, ಸ್ನೇಹಲ್ ಕೌಠಂಕರ್, ಶಿವೇಂದ್ರ ಭುಜಬಲ್, ಕೌಶಿಕ್ ವಿ, ಶುಭಂ ತಾರಿ, ಋತ್ವಿಕ್ ನಾಯಕ್, ದರ್ಶನ್ ಮಿಸಾಳ್, ಯಶ್ ಕಾಸವಂಕರ್, ಅಮೂಲ್ಯ ಪಾಂಡ್ರೇಕರ್, ದೀಪರಾಜ್ ಗಾಂವ್ಕರ್, ರಾಜಶೇಖರ್ ಹರಿಕಾಂತ್, ಮೋಹಿತ್ ರೆಡ್ಕರ್ ಮತ್ತು ಫೆಲಿಕ್ಸ್ ಅಲೆಮಾವೋ ಇದ್ದಾರೆ.

ಯಾರಿಗೆ ಯಾವ ಜವಾಬ್ದಾರಿ?

'ಈ ತಂಡಕ್ಕೆ ದಿನೇಶ್ ಮೊಂಗಿಯಾ ಮುಖ್ಯ ತರಬೇತುದಾರರಾಗಿ ಮಾರ್ಗದರ್ಶನ ನೀಡಲಿದ್ದು, ಕೃಷ್ಣ ರಾವ್ ಬೌಲಿಂಗ್ ತರಬೇತುದಾರರಾಗಿ, ಪ್ರಕಾಶ್ ಮೇಯೇಕರ್ ಹಿರಿಯರ ಪುರುಷರ ತಂಡದ ಕೋಚಿಂಗ್ ಮತ್ತು ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕರಾಗಿ ಹಾಗೂ ಅನಿಲ್ ಜೋಗ್ಳೇಕರ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ,' ಎಂದು ಗೋವಾ ಕ್ರಿಕೆಟ್ ಸಂಸ್ಥೆ ತಿಳಿಸಿದೆ.

ಗೋವಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಮಹೇಶ್ ದೇಸಾಯಿ, ಕಾರ್ಯದರ್ಶಿ ತುಳಸೀದಾಸ್ ಶೇತ್ಯೆ ಮತ್ತು ಸಂಪೂರ್ಣ ಆಡಳಿತ ಮಂಡಳಿಯು ಮುಂಬರುವ ರಣಜಿ ಟ್ರೋಫಿ ಟೂರ್ನಿಗಾಗಿ ತಂಡಕ್ಕೆ ಶುಭಾಶಯ ಕೋರಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಗೋವಾವನ್ನು ಪ್ರತಿನಿಧಿಸಲು ಸಜ್ಜಾಗುತ್ತಿರುವ ತಂಡಕ್ಕೆ ಅವರು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿ, ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ.

ರಣಜಿ ಟ್ರೋಫಿಗೆ ಗೋವಾ ಕ್ರಿಕೆಟ್ ತಂಡ

ಅಭಿನವ್ ತೇಜರಾಣಾ (ನಾಯಕ), ಸುಯಾಶ್ ಪ್ರಭುದೇಸಾಯಿ, ಮಂಥನ್ ಖುಟ್ಕರ್, ಲಲಿತ್ ಯಾದವ್, ಸ್ನೇಹಲ್ ಕೌಠಂಕರ್, ಶಿವೇಂದ್ರ ಭುಜಬಲ್, ಕೌಶಿಕ್ ವಿ, ಶುಭಂ ತಾರಿ, ಋತ್ವಿಕ್ ನಾಯಕ್, ದರ್ಶನ್ ಮಿಸಾಳ್, ಯಶ್ ಕಾಸವಂಕರ್, ಅಮೂಲ್ಯ ಪಾಂಡ್ರೇಕರ್, ದೀಪರಾಜ್ ಗಾಂವ್ಕರ್, ರಾಜಶೇಖರ್ ಹರಿಕಾಂತ್, ಮೋಹಿತ್ ರೆಡ್ಕರ್ ಹಾಗೂ ಫೆಲಿಕ್ಸ್ ಅಲೆಮಾವೋ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+