Actor ShivaRajkumar: ಆರ್‌ಸಿಬಿ ಬಗ್ಗೆ ನಟ ಶಿವರಾಜ್‌ಕುಮಾರ್ ಹೇಳಿಕೆ ಭಾರೀ ವೈರಲ್
Actor ShivaRajkumar: ವಿಶ್ವದಲ್ಲೇ ಅತ್ಯಂತ ದೊಡ್ಡ ಲೀಗ್ ಐಪಿಎಲ್ ಆಗಿದೆ. ಹಾಗೆಯೇ ಐಪಿಎಲ್‌ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಎಂದರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು. ಎಲ್ಲೇ ಆರ್‌ಸಿಬಿ ಪಂದ್ಯ ನಡೆಯಲಿ ಅಲ್ಲಿ ಕ್ರೇಜ್ ಸ್ವಲ್ಪ ಜಾಸ್ತಿನೇ ಇರುತ್ತದೆ. ಹೀಗೆ ಈ ಟೀಂನಿಂದಲೇ ಐಪಿಎಲ್‌ಗೆ ಕಳೆ ಅಂದರೆ ತಪ್ಪಾಗಲಾರದು.
ನಟ ಶಿವಣ್ಣ ಹೇಳಿದ್ದೇನು?: ಆರ್‌ಸಿಬಿ ತಂಡದ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಗುಣಗಾನ ಮಾಡಿದ್ದಾರೆ. ಈ ವಿಡಿಯೋವನ್ನು ಆರ್‌ಸಿಬಿ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದರಲ್ಲಿ ಶಿವಣ್ಣ ಆರ್‌ಸಿಬಿ ಕಂಡರೆ ಅದೇನೋ ಜೋಶ್, ಒಂದು ಉತ್ಸಾಹ ಎಂದು ಹೇಳಿದ್ದು, ಇದು ಇದೀಗ ಭಾರೀ ವೈರಲ್ ಆಗುತ್ತಿದೆ.

ಐಪಿಎಲ್ ಪ್ರಾರಂಭವಾಗಿ ಇದೀಗ 18 ವರ್ಷಗಳಾಗಿವೆ. ಈ 18 ವರ್ಷಗಳಲ್ಲಿ ಆರ್‌ಸಿಬಿ ಗೆಲ್ಲಲ್ಲಿ, ಸೋಲಲಿ ನಾವು ಬೆಂಬಲಿಸಿದ್ದೇವೆ. ಆರ್‌ಸಿಬಿ ಕಂಡರೆ ಅದೇನೋ ಜೋಶ್, ಒಂದು ಉತ್ಸಾಹ ಬರುತ್ತದೆ. ಅದೇನೋ ಗೊತ್ತಿಲ್ಲ ಆರ್‌ಸಿಬಿ ಎಂದರೆ ನಮಗೆ ಜೀವ, ನಮ್ಮ ಪ್ರಾಣ ಎಂದು ಹೇಳುವ ಮೂಲಕ ಗಮನ ಸೆಳೆದಿದ್ದಾರೆ.
ಬೆಂಗಳೂರನ್ನು, ನಮ್ಮ ಭಾಷೆ, ನಮ್ಮ ಸಂಸ್ಕೃತಿಗಳನ್ನು ಆರ್‌ಸಿಬಿ ತಂಡ ಪ್ರತಿನಿಧಿಸುತ್ತದೆ. ಮತ್ತೆ ಆರ್‌ಸಿಬಿಯವರು ಯಾವಾಗ ಆಡಿದರೂ ಒಂದು ಜೋಶ್‌ನಲ್ಲಿ ಆಡುತ್ತಾರೆ. ಆದ್ದರಿಂದ ಈ ಸೀಸನ್‌ನಲ್ಲಿ ಆರ್‌ಸಿಬಿಗೆ ಒಳ್ಳೆಯದಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ನೀವು ಹೋಗಿ ಮ್ಯಾಚ್ ಅನ್ನು ಎಂಜಾಯ್ ಮಾಡಿ ಎಂದು ಅಭಿಮಾನಿಗಳಿಗೆ ಶಿವಣ್ಣ ಕರೆ ನೀಡಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಇದುವರೆಗೂ ಆಡಿರುವ 17 ಸೀಸನ್‌ಗಳಲ್ಲೂ ಒಂದೇ ಒಂದು ಟ್ರೋಫಿಯನ್ನೂ ಕೂಡ ಆರ್‌ಸಿಬಿ ಗೆದ್ದಿಲ್ಲ. ಹಾಗಂತ ಅಭಿಮಾನಿಗಳೇನಿ ಕಡಿಮೆಯಾಗಿಲ್ಲ. ಇನ್ನೂ ಹೆಚ್ಚಾಗುತ್ತಲೇ ಇದ್ದಾರೆ. ಇಡೀ ದೇಶ ಅಷ್ಟೇ ಅಲ್ಲದೆ, ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಐಪಿಎಲ್ ತಂಡ ಅಂದ್ರೆ ಆರ್‌ಸಿಬಿ ಮಾತ್ರ. ಆರ್‌ಸಿಬಿಗೆ ಯಾರೇ ಹೊಸ ಪ್ಲೇಯರ್ ಬಂದರೂ ಕೂಡ ಅವರಿಗೆ ಅಭಿಮಾನಿಗಳು ಕ್ರೇಜ್ ಮೂಲಕ ಉತ್ಸಾಹ ತುಂಬಿಬಿಡುತ್ತಾರೆ.
ರಜತ್ ಪಾಟಿದಾರ್ ಹೇಳಿದ್ದೇನು?: ಇನ್ನು ಡೆಲ್ಲಿ ವಿರುದ್ಧದ ಸೋಲಿನ ಬಗ್ಗೆ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಮಾತನಾಡಿದ್ದಾರೆ. ನಾವು ಅಂದುಕೊಂಡಂತೆ ಬೆಂಗಳೂರು ಪಿಚ್ ಇರಲಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ. ನಾವು ಚೆನ್ನಾಗಿ ಬ್ಯಾಟಿಂಗ್ ಮಾಡಲಿಲ್ಲ. ಬ್ಯಾಟರ್‌ಗಳು ಅತಿಯಾದ ಆತ್ಮವಿಶ್ವಾಸ ಹೊಂದಿದ್ದಾರೆ ಎಂದು ನಾನು ಭಾವಿಸುವುದಿಲ್ಲ. ಪ್ರತಿಯೊಬ್ಬ ಬ್ಯಾಟರ್ ಉತ್ತಮ ಮನಸ್ಥಿತಿಯಲ್ಲಿದ್ದರು, ಸರಿಯಾದ ಉದ್ದೇಶವನ್ನು ತೋರಿಸುತ್ತಿದ್ದರು. ಆದರೆ, ಸೋಲನುಭವಿಸಿದೆವು ಎಂದು ಹೇಳಿದರು.
ನಮ್ಮಲ್ಲಿ ಉತ್ತಮ ಬ್ಯಾಟಿಂಗ್ ಲೈನ್-ಅಪ್ ಇದೆ, ಆದರೆ ನಾವು ಪರಿಸ್ಥಿತಿಯನ್ನು ನಿರ್ಣಯಿಸಬೇಕಾಗಿದೆ. ಅದು ಸಕಾರಾತ್ಮಕವಾಗಿದೆ, ಟಿಮ್ ಡೇವಿಡ್ ಅಂತಿಮ ಹಂತದಲ್ಲಿ ವೇಗವನ್ನು ಹೆಚ್ಚಿಸಿದ ರೀತಿ ಅದ್ಭುತವಾಗಿತ್ತು, ಪವರ್‌ಪ್ಲೇನಲ್ಲಿ ನಮ್ಮ ಬೌಲಿಂಗ್ ಸಹ ಉತ್ತಮವಾಗಿತ್ತು. ನಾವು ನಮ್ಮ ದಾಖಲೆಯ ಬಗ್ಗೆ ಯೋಚಿಸುತ್ತಿಲ್ಲ. ಆದರೆ ನಾವು ಉತ್ತಮ ಕ್ರಿಕೆಟ್ ಆಡಬೇಕೆಂದು ರಜತ್ ಪಾಟಿದಾರ್ ಹೇಳಿದ್ದಾರೆ.












Click it and Unblock the Notifications