Abhishek Sharma: ಡಿಸಿ ವಿರುದ್ಧ ಎಸ್‌ಆರ್‌ಎಚ್‌ ಪರ ಅಜೇಯ 135 ರನ್‌ ಸಿಡಿಸಿ ಮಿಂಚಿದ ಅಭಿಷೇಕ್ ಶರ್ಮಾ

SRH Vs DC IPL 2026: ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ (ಏಪ್ರಿಲ್ 21) ನಡೆಯುತ್ತಿರುವ ಐಪಿಎಲ್‌ 2026ರ 31ನೇ ಪಂದ್ಯದಲ್ಲಿ ಎಸ್‌ಆರ್‌ಎಚ್‌ ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ಮುಖಾಮುಖಿಯಾಗಿವೆ. ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಹೈದರಾಬಾದ್‌ ನಿಗದಿತ 20 ಓವರ್‌ಗಳಲ್ಲಿ ಅಭಿಷೇಕ್ ಶರ್ಮಾ ಸಿಡಿಸಿದ ಅಜೇಯ 135 ರನ್‌ಗಳ ನೆರವಿನಿಂದ 242 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

ಟಾಸ್‌ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆಯೇ ಮೊದಲು ಬ್ಯಾಟ್‌ ಬೀಸಿದ ಸನ್‌ ರೈಸರ್ಸ್‌ ಹೈದರಾಬಾದ್ ತಂಡವು ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 242 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಇದರಲ್ಲಿ ಅಭಿಷೇಕ್‌ ಶರ್ಮಾ ಅವರದ್ದೇ ಬಹುಪಾಲು ರನ್‌ಗಳಿವೆ. ಅವರು ಅಜೇಯ 135 ರನ್‌ ಕದ್ದು, ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.

Abhishek Sharma 135 Powers Sunrisers Hyderabad to 242 vs Delhi Capitals IPL 2026 Match 31

135 ರನ್‌ ಸಿಡಿಸಿ ಮಿಂಚಿದ ಅಭಿಷೇಕ್ ಶರ್ಮಾ

ಡೆಲ್ಲಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಹೈದರಾಬಾದ್ ಬ್ಯಾಟರ್‌ಗಳು, ತವರು ಮೈದಾನದಲ್ಲಿ ಸಿಕ್ಸರ್‌ಗಳ ಸುರಿಮಳೆಗರೆಯುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ರೋಚಕ ಹಣಾಹಣಿಯಲ್ಲಿ ಎಸ್‌ಆರ್‌ಎಚ್‌ ತಂಡದ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಕೇವಲ 68 ಎಸೆತಗಳಲ್ಲಿ 10 ಬೌಂಡರಿ, 10 ಸಿಕ್ಸರ್‌ಗಳೊಂದಿಗೆ ಅಜೇಯ 135 ರನ್‌ ಸಿಡಿಸಿ ಮಿಂಚಿದರು. ಉಳಿದಂತೆ ಟ್ರಾವಿಸ್ ಹೆಡ್‌ 37(26), ಇಶಾನ್ ಕಿಶನ್ 25(13), ಹೆನ್ರಿಚ್ ಕ್ಲಾಸೆನ್ ಅಜೇಯ 37 ರನ್ ಗಳಿಸಿದರು.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಇದು ಅಕ್ಷರ್ ಪಟೇಲ್ ಅವರಿಗೆ ಡೆಲ್ಲಿ ಕ್ಯಾಪಿಟಲ್ಸ್ ಪರ 100ನೇ ಐಪಿಎಲ್ ಪಂದ್ಯವಾಗಿದ್ದು, ಈ ವಿಶೇಷ ಸಾಧನೆಗೆ ಅವರು ಭಾಜನರಾಗಿದ್ದಾರೆ.

ಅಭಿಷೇಕ್ ಶರ್ಮಾ ಕೈಕಟ್ಟಿ ಸಂಭ್ರಮಿಸಲು ಕಾರಣ ಏನು?

ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಕೇವಲ 47 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಅಬ್ಬರಿಸಿದರು. ಒಟ್ಟು 68 ಎಸೆತಗಳಲ್ಲಿ ಅಜೇಯ 135 ರನ್ ಗಳಿಸಿದ ಅವರು, ಈ ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ 'ಆರೆಂಜ್ ಕ್ಯಾಪ್' ಮುಡಿಗೇರಿಸಿಕೊಂಡಿದ್ದಾರೆ.

ಅಭಿಷೇಕ್ ತಮ್ಮ ಶತಕ ಪೂರೈಸಿದ ನಂತರ ತನ್ನ ಕೈಗಳನ್ನು ಕಟ್ಟಿ ಸಂಭ್ರಮಿಸಿದರು. ಸಾಮಾನ್ಯವಾಗಿ 'ಎಲ್‌' ಸನ್ನೆ ಮಾಡಿ ಸಂಭ್ರಮಿಸುತ್ತಿದ್ದ ಅವರು ಈ ಬಾರಿ ಬದಲಾಗಲು ಕಾರಣವೇನು ಎಂಬ ಕುತೂಹಲ ಮೂಡಿತ್ತು. ಪಂದ್ಯದ ನಂತರ ಈ ಬಗ್ಗೆ ಮಾತನಾಡಿದ ಅವರು ಈ ಕುತೂಹಲಕ್ಕೆ ತೆರೆ ಎಳೆದರು.

ತಂಡದ ಬ್ಯಾಟಿಂಗ್ ಕೋಚ್ ಜೇಮ್ಸ್ ಫ್ರಾಂಕ್ಲಿನ್ ಮತ್ತು ಸ್ಪಿನ್ ಸಲಹೆಗಾರ ಮುತ್ತಯ್ಯ ಮುರಳೀಧರನ್ ಅವರು ಅಭಿಷೇಕ್‌ಗೆ ಒಂದು ವಿಶೇಷ ಜವಾಬ್ದಾರಿ ನೀಡಿದ್ದರು. ಅದು ಪಂದ್ಯದ ಕೊನೆಯವರೆಗೆ (20ನೇ ಓವರ್‌ವರೆಗೆ) ಕ್ರೀಸ್‌ನಲ್ಲಿ ಉಳಿಯುವುದು.

"ನಾನು 20ನೇ ಓವರ್‌ವರೆಗೆ ಕ್ರೀಸ್‌ನಲ್ಲಿ ಉಳಿದು ಬ್ಯಾಟ್ ಮಾಡಿದ್ದು ಬಹುಶಃ ಇದೇ ಮೊದಲು. ಕೋಚ್ ಫ್ರಾಂಕ್ಲಿನ್ ಅವರ ಪ್ಲಾನ್ ಪ್ರಕಾರ, ಪಂದ್ಯದ ಅಂತ್ಯದವರೆಗೂ ಅಜೇಯನಾಗಿ ಉಳಿದಿದ್ದಕ್ಕಾಗಿ ಈ ರೀತಿ ಕೈ ಜೋಡಿಸಿ ಸಂಭ್ರಮಿಸಿದೆ," ಎಂದು ಅಭಿಷೇಕ್ ತಿಳಿಸಿದ್ದಾರೆ.

ಅಭಿಷೇಕ್ ಪ್ರಸ್ತುತ 7 ಇನ್ನಿಂಗ್ಸ್‌ಗಳಿಂದ 323 ರನ್ ಗಳಿಸಿದ್ದು, ತಮ್ಮದೇ ತಂಡದ ಹೆನ್ರಿಚ್ ಕ್ಲಾಸೆನ್ (320 ರನ್) ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ. ಇನ್ನೂ ತಮ್ಮ ನೆಚ್ಚಿನ ಹೈದರಾಬಾದ್ ಮೈದಾನದಲ್ಲಿ 'ಆರೆಂಜ್ ಆರ್ಮಿ' ಮುಂದೆ ಈ ಸಾಧನೆ ಮಾಡಿದ್ದು ಅತ್ಯಂತ ವಿಶೇಷ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+