ಪ್ಲೀಸ್ ವಿರಾಟ್ ಇದೇ ಕ್ರಮಾಂಕದಲ್ಲಿ ಆಡಿ: ಸ್ನೇಹಿತ ಎಬಿಡಿ ಕಳಕಳಿಯ ಮನವಿ
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಆರಂಭಿಕರಾಗಿ ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿದ್ದಾರೆ. ಅಫ್ಘಾನಿಸ್ತಾನದ ವಿರುದ್ಧ ಪಂದ್ಯದಲ್ಲಿ 24 ರನ್‌ಗಳಿಗೆ ಆಟ ಮುಗಿಸಿದರು. ಉಳಿದಂತೆ ಲೀಗ್ ಹಂತದ ಮೂರು ಪಂದ್ಯಗಳಲ್ಲಿ ವಿರಾಟ್ ಸಿಂಗಲ್ ಡಿಜಿಟ್‌ನಲ್ಲಿ ಆಟ ಮುಗಿಸಿದ್ದರು.
ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕೆ ಇಳಿದು ಯಶಸ್ಸು ಕಂಡಿದ್ದರು. ಅಲ್ಲದೆ ಅವರಿಗೆ ಟಿ20 ವಿಶ್ವಕಪ್ 2024ನಲ್ಲಿ ಅವರು ಭಾರತದ ಪರ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಅಮೆರಿಕದಲ್ಲಿ ನಡೆದ ಲೀಗ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಹೀಗಾಗಿ ಅವರ ಅಭಿಮಾನಿಗಳು ತಮ್ಮ ಸ್ಥಾನದಲ್ಲೇ ವಿರಾಟ್ ಆಡಲಿ ಎಂದು ಹೇಳಿದ್ದರು. ಈಗ ವಿರಾಟ್ ಸ್ನೇಹಿತ ಎಬಿ ಡಿ ವಿಲಿಯರ್ಸ್ ಸಹ ಇದಕ್ಕೆ ಧ್ವನಿ ಗುಡಿಸಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿರುವ ಎಬಿ ಡಿ ವಿಲಿಯರ್ಸ್ ಆರಂಭಿಕರಾಗಿ ಆಡಬೇಕೋ ಬೇಡವೋ ಎಂಬುದರ ಬಗ್ಗೆ ತಮ್ಮ ಅನಿಸಿಕೆ ತಿಳಿಸಿದ್ದಾರೆ. ಎಬಿಡಿ ಪ್ರಕಾರ ವಿರಾಟ್, ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರೆ ಬೆಸ್ಟ್ ಎಂದು ಹೇಳಿದ್ದಾರೆ.
ನಾಯಕ, ಕೋಚ್‌ಗೆ ಮನವಿ
ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿ ಎಂದು ಮಿಸ್ಟರ್ 360 ಡಿಗ್ರಿ ಎಬಿಡಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಮನವಿ ಮಾಡಿದ್ದಾರೆ.
ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಬಗ್ಗೆ ಚರ್ಚಿಸುತ್ತಿದ್ದರು. ವಿರಾಟ್‌ರನ್ನು 3ನೇ ಸ್ಥಾನದಲ್ಲಿ ಆಡಿ ಎಂದು ನಾನು ಯಾವಾಗಲೂ ಹೇಳುತ್ತಿದ್ದೆ. ವಿಶೇಷವಾಗಿ ಅವರು ಈಗ ಅವರು ಉತ್ತಮ ವಿಕೆಟ್‌ಗಳ ಮೇಲೆ ಆಡುತ್ತಾರೆ. ಮೂರನೇ ಕ್ರಮಾಂಕದಲ್ಲಿ ಆಡಿದರೆ ಬೆಸ್ಟ್. ಅವರು ಇಲ್ಲಿ ಆಕ್ರಮಣಕಾರಿ ಆಟವನ್ನೂ ಆಡಬಹುದು ಮತ್ತು ಅಗತ್ಯವಿದ್ದರೆ ಒತ್ತಡವನ್ನು ಮೆಟ್ಟಿ ನಿಲ್ಲಬಹುದು. ಅವರು ಮಧ್ಯಮ ಓವರ್‌ಗಳಲ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂದು ತಿಳಿಸಿದ್ದಾರೆ.

ಕಳೆದ ಕೆಲವು ವಿಶ್ವಕಪ್‌ಗಳಲ್ಲಿ, ಅವರು ಸ್ವಲ್ಪ ಸಾಂಪ್ರದಾಯಿಕ ಶೈಲಿಯಲ್ಲಿ ಬ್ಯಾಟ್ ಮಾಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರ ಆಟವನ್ನು ನೋಡಿದ ನಂತರ ನನಗೆ ಹೀಗೆ ಅನಿಸುತ್ತದೆ. ಅವರು ನಿಜವಾಗಿಯೂ ಸ್ವಲ್ಪ ರಿಸ್ಕ್ ತೆಗೆದುಕೊಳ್ಳಬಹುದೆಂದು ನಾನು ಭಾವಿಸುತ್ತೇನೆ ಏಕೆಂದರೆ ಅವರು ಒಮ್ಮೆ ಲಯವನ್ನು ಪಡೆದರೆ, ವಿರಾಟ್ ಕೊಹ್ಲಿ ಹಿಂತಿರುಗಿ ನೋಡುವ ಪ್ರಶ್ನೆಯೇ ಇಲ್ಲ ಎಂದು ಎಬಿಡಿ ಹೇಳಿದ್ದಾರೆ.
ಆಫ್ಘನ್ ವಿರುದ್ಧ 24 ರನ್
ವಿರಾಟ್ ಕೊಹ್ಲಿ ಅಫ್ಘಾನಿಸ್ತಾನದ ವಿರುದ್ಧ ಪಂದ್ಯದಲ್ಲಿ 24 ರನ್ ಸಿಡಿಸಿ ಲಯಕ್ಕೆ ಮರಳುವ ಸೂಚನೆ ನೀಡಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 181 ರನ್ ಸೇರಿಸಿತು. ಟೀಮ್ ಇಂಡಿಯಾ ಪರ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ 28 ಎಸೆತಗಳಲ್ಲಿ 53 ರನ್ ಸಿಡಿಸಿದ್ದರು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಆಫ್ಘನ್ 20 ಓವರ್‌ಗಳಲ್ಲಿ 134 ರನ್‌ಗಳಿಗೆ ಆಲೌಟ್ ಆಗಿದೆ.












Click it and Unblock the Notifications