Aaron Finch : ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಆರೋನ್ ಫಿಂಚ್ ವಿದಾಯ

ಆಸ್ಟ್ರೇಲಿಯಾ ಕ್ರಿಕೆಟ್ ಟಿ20 ತಂಡದ ನಾಯಕ ಆರೋನ್ ಫಿಂಚ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದರು.

ಬೆಂಗಳೂರು, ಫೆಬ್ರವರಿ 07; 12 ವರ್ಷಗಳ ಕ್ರಿಕೆಟ್ ಬದುಕಿಗೆ ಆರೋನ್ ಫಿಂಚ್ ವಿದಾಯ ಹೇಳಿದರು. ಆಸ್ಟ್ರೇಲಿಯಾ ಟಿ20 ತಂಡದ ನಾಯಕ ಆರೋನ್ ಫಿಂಚ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಮಂಗಳವಾರ ನಿವೃತ್ತಿ ಘೋಷಿಸಿದರು.

2011ರಲ್ಲಿ ಇಂಗ್ಲೆಡ್ ವಿರುದ್ಧದ ಪಂದ್ಯದ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಆರೋನ್ ಫಿಂಚ್ ಪಾದಾರ್ಪಣೆ ಮಾಡಿದ್ದರು. ಟಿ 20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸ್ಕೋರ್ ಮಾಡಿದ 3ನೇ ಆಟಗಾರ ಎಂಬ ದಾಖಲೆ ಫಿಂಚ್ ಹೆಸರಿನಲ್ಲಿದೆ.

ಮಂಗಳವಾರ ಅವರು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದರು. 2024ರ ಟಿ20 ವಿಶ್ವಕಪ್ ತನಕ ನಾನು ಆಡುವುದಿಲ್ಲ ಎಂದು ಅರಿತು, ಟಿ20 ನಾಯಕತ್ವದಿಂದ ಕೆಳಗಿಳಿದು ತಂಡಕ್ಕೆ ಸಮಯ ನೀಡಲು ಇದು ಸರಿಯಾದ ಸಮಯ ಎಂದು ಆರೋನ್ ಫಿಂಚ್ ಹೇಳಿದ್ದಾರೆ.

Aaron Finch Announces Retirement From International Cricket

12 ವರ್ಷಗಳ ಕಾಲ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಲು ಮತ್ತು ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಜೊತೆ ಆಡಲು, ವಿರುದ್ಧವಾಗಿ ಆಡಲು ಸಾಧ್ಯವಾಗಿರುವುದು ನಂಬಲಾರದ ಶ್ರೇಷ್ಠ ಗೌರವವಾಗಿದೆ ಎಂದು ಫಿಂಚ್ ತಿಳಿಸಿದ್ದಾರೆ.

ಆರೋನ್ ಫಿಂಚ್ ದಾಖಲೆಗಳು; ಆರೋನ್ ಫಿಂಚ್ 254 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದಾರೆ. 5 ಟೆಸ್ಟ್, 146 ಏಕದಿನ ಪಂದ್ಯ ಮತ್ತು 103 ಟಿ20 ಪಂದ್ಯಗಳನ್ನು ಆಡಿದ್ದಾರೆ.

2011ರಲ್ಲಿ ಅಂತರಾಷ್ಟ್ರೀಯ ಪಂದ್ಯವನ್ನು ಆರಂಭಿಸಿದ ಆರೋನ್ ಫಿಂಚ್ 8,804 ರನ್‌ಗಳನ್ನು ಬಾರಿಸಿದ್ದಾರೆ. ಏಕದಿನ ಪಂದ್ಯದಲ್ಲಿ 17 ಶತಕ ಮತ್ತು ಟಿ20 ಪಂದ್ಯದಲ್ಲಿ 2 ಶತಕ ಸಿಡಿಸಿದ್ದಾರೆ.

2022ರ ಸೆಪ್ಟೆಂಬರ್‌ನಲ್ಲಿ ಆರೋನ್ ಫಿಂಚ್ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. ಆದರೆ ಅವರು ಟಿ20 ತಂಡದ ನಾಯಕನಾಗಿ ಮುಂದುವರೆದಿದ್ದರು. ಕೊನೆಯ ಏಕದಿನ ಪಂದ್ಯದಲ್ಲಿ ಅವರು 63 ರನ್ ಸಿಡಿಸಿದ್ದರು. ಐರ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ತಂಡ 42 ರನ್‌ಗಳ ಜಯ ಸಾಧಿಸಿತ್ತು.

2018ರಲ್ಲಿ ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧದ ಟಿ20 ಪಂದ್ಯದಲ್ಲಿ 76 ಎಸೆತದಲ್ಲಿ ಆರೋನ್ ಫಿಂಚ್ 172 ರನ್ ಗಳಿಸಿದ್ದರು. ಈ ಮೂಲಕ ಟಿ20ಯಲ್ಲಿ ತಮ್ಮ ಅತ್ಯಧಿಕ ರನ್ ದಾಖಲು ಮಾಡಿದ್ದರು.

2013ರಲ್ಲಿಇಂಗ್ಲೆಡ್ ವಿರುದ್ಧ ಆರೋನ್ ಫಿಂಚ್ ಟಿ20ಯಲ್ಲಿ 63 ಎಸೆತದಲ್ಲಿ 156 ರನ್‌ಗಳಿಸಿದ್ದರು. ಇದು ಪುರುಷರ ಟಿ20 ಪಂದ್ಯದಲ್ಲಿ ಆಟಗಾರನೊಬ್ಬ ಸಿಡಿಸಿದ 3ನೇ ಅತಿ ಹೆಚ್ಚಿನ ಸ್ಕೋರ್ ಎಂದು ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+