Breaking:ಕುಸ್ತಿಪಟುಗಳಿಗೆ ಸರ್ಕಾರದ ಪ್ರೋತ್ಸಾಹ-ಪ್ರತಿ ಗರಡಿ ಮನೆ ನಿರ್ಮಾಣಕ್ಕೆ 10ಲಕ್ಷ ಅನುದಾನ
ಮೈಸೂರು, ಸೆ .26: ಕುಸ್ತಿಪಟುಗಳಿಗೆ ಸರ್ಕಾರದಿಂದ ಪ್ರೋತ್ಸಾಹ ಸಿಗಲಿದ್ದು. ನಗರ ಹಳ್ಳಿಗಳಲ್ಲಿ ಪ್ರತಿಯೊಂದು ಗರಡಿ ಮನೆ ನಿರ್ಮಾಣಕ್ಕೆ 10ಲಕ್ಷ ಅನುದಾನ ನೀಡಲಾಗುತ್ತದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ತಿಳಿಸಿದರು.
ನಾಡಹಬ್ಬ ದಸರಾ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿರುವ ಕುಸ್ತಿ ಪಂದ್ಯಾವಳಿಗಳಿಗೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಚಾಲನೆ ನೀಡಿ ಗರಡಿ ಮನೆ ನಿರ್ಮಾಣಕ್ಕೆ ಸಿಗಲಿರುವ ಪ್ರೋತ್ಸಾಹ ಧನದ ಬಗ್ಗೆ ತಿಳಿಸಿದರು.
ನಾಡಹಬ್ಬ ದಸರಾದ ಪ್ರಯುಕ್ತ ಹಲವು ಕಾರ್ಯಕ್ರಮಗಳು, ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಅದರಲ್ಲಿ ಕುಸ್ತಿಯೂ ವಿಶೇಷವಾದದ್ದು. ನಮ್ಮ ರಾಜ-ಮಹಾರಾಜರು ಹಿಂದಿನಿಂದಲೂ ನಾಡ ಕುಸ್ತಿಗೆ ವಿಶೇಷ ಪ್ರಾಧ್ಯಾನತೆ ನೀಡಿ, ಪ್ರೋತ್ಸಾಹಿಸಿ ಬೆಳೆಸಿದ್ದರು. ಜಿಮ್‌ಗಳ ಅಬ್ಬರ ಹೆಚ್ಚಾಗಿದ್ದರೂ ಗರಡಿ ಮನೆಗಳಿಗೆ ವಿಶೇಷ ಮಾನ್ಯತೆ ಇದ್ದೇ ಇದೆ.

ಮೈಸೂರು ವಿಭಾಗ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಹಲವು ಗರಡಿ ಮನೆಗಳಲ್ಲಿ ಕುಸ್ತಿಪಟುಗಳನ್ನು ತಯಾರಿ ಮಾಡಿ, ಪಂದ್ಯಾವಳಿಗಳಿಗೆ ಕಳುಹಿಸುತ್ತಿದ್ದಾರೆ. ನಮ್ಮ ಸರ್ಕಾರ ಕೂಡ ಕುಸ್ತಿಪಟುಗಳಿಗೆ ವಿಶೇಷ ಪ್ರೋತ್ಸಾಹ ನೀಡುತ್ತಿದೆ. ಗರಡಿ ಮನೆಗಳ ನಿರ್ಮಾಣಕ್ಕೆ ನಮ್ಮ ಕ್ರೀಡಾ ಇಲಾಖೆಯಿಂದ 10 ಲಕ್ಷ ಅನುದಾನ ನೀಡುತ್ತಿದ್ದೇವೆ ಎಂದು ಸಚಿವ ಡಾ.ನಾರಾಯಣಗೌಡ ಹೇಳಿದರು.

ಕುಸ್ತಿಯನ್ನು ಮಾಡವ ಮುನ್ನ ಪೂರ್ವ ತಯಾರಿಯನ್ನು ಮಾಡಬೇಕು. ಮಡ್ಡಿಯಲ್ಲಿ ಕುಸ್ತಿಪಟುಗಳು ಸಾಕಷ್ಟು ಕಷ್ಟವನ್ನು ಪಟ್ಟು ಮೈಯನ್ನು ದಂಡಿಸಬೇಕು. ರಾಜಮಹಾರಾಜರ ಕಾಲದಿಂದಲೂ ಕಸ್ತಿಗೆ ವಿಶೇಷ ಪ್ರಾಧನ್ಯತೆ ಲಭ್ಯವಾಗುತ್ತಿದೆ. ಇದರಿಂದಾಗಿಯೇ ಮೈಸೂರು ದಸರಾದಲ್ಲಿ ಸಮಯದಲ್ಲಿ ಕುಸ್ತಿ ಸ್ಪರ್ಥೆಯನ್ನು ಏರ್ಪಡಿಸಲಾಗುತ್ತದೆ. ರಾಜ ಮಹಾರಾಜರೇ ಕ್ರೀಡೆಗಳಿವೆ ವಿಶೇಷ ಗೌರವ ಮತ್ತು ಪ್ರೋತ್ಸಾಹವನ್ನು ನೀಡುತ್ತಿದ್ದರು ಎಂಬದು ತಿಳಿಯಲಿದೆ. ಸರ್ಕಾರವೂ ಕ್ರೀಡೆಗೆ ಪ್ರೋತ್ಸಾಹವನ್ನು ನೀಡಲಿದೆ ಎಂದು ಸಚಿವ ನಾರಾಯಣ ಗೌಡ ಸ್ಪಷ್ಟಪಡಿಸಿದರು. ಇದೇ ವೇಳೆ ಶಾಸಕ ನಾಗೇಂದ್ರ, ಜಿಲ್ಲಾಧಿಕಾರಿ ಬಗಾದಿ ಗೌತಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.












Click it and Unblock the Notifications