ಶಿರಸಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಲಿಂಗಕಾಮಿಗಳು ಸಮಾಜಕ್ಕೆ ಶಾಪವಲ್ಲ: ಅನಂತ್ ಕುಮಾರ್ ಹೆಗಡೆ

|
Google Oneindia Kannada News

ಶಿರಸಿ, ಸೆಪ್ಟೆಂಬರ್ 15: ಸಲಿಂಗಕಾಮಿಗಳು ಸಮಾಜಕ್ಕೆ ಶಾಪವಲ್ಲ, ಅದು ಅವರ ವಯಕ್ತಿಕ ಆಯ್ಕೆಯಾಗಿರುತ್ತದೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದರು.

ಸಹಮತದ ಸಲಿಂಗಕಾಮ ಅಪರಾಧವಲ್ಲ ಎಂದ ಸುಪ್ರೀಂ ಕೋರ್ಟ್ ಸಹಮತದ ಸಲಿಂಗಕಾಮ ಅಪರಾಧವಲ್ಲ ಎಂದ ಸುಪ್ರೀಂ ಕೋರ್ಟ್

ಶನಿವಾರ ಶಿರಸಿಯ ಸೋಂದಾ ಬಳಿ ಸ್ವಚ್ಛತೆಯೇ ಸೇವೆ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಹಮತದ ಸಲಿಂಗಕಾಮ ಅಪರಾಧವಲ್ಲ ಎಂಬ ಸುಪ್ರೀಂಕೋರ್ಟ್ ನಿರ್ದೇಶನವನ್ನು ಸ್ವಾಗತಿಸಿರುವ ಅವರು, ಸಲಿಂಕಾಮ ಎನ್ನುವುದು ಸಮಾಜದಲ್ಲಿ ಒಂದು ಅಪರಾಧವೆಂಬಂತೆ ಬಿಂಬಿಸಲಾಗುತ್ತಿದೆ. ಆದರೆ ಅದು ಅಪರಾಧವೂ ಅಲ್ಲ ಶಾಪವೂ ಅಲ್ಲ ಎಂದರು.

ಏನಿದು 377 ಸೆಕ್ಷನ್? ಎಂಥ ಸಂಭೋಗ ಅಪರಾಧವಾಗುತ್ತದೆ? ಏನಿದು 377 ಸೆಕ್ಷನ್? ಎಂಥ ಸಂಭೋಗ ಅಪರಾಧವಾಗುತ್ತದೆ?

ಸಲಿಂಗಕಾಮ ಇದು ಅವರವರ ವಯಕ್ತಿಕ ವಿಚಾರ ಈ ಕಾರಣದಿಂದ ಸಮಾಜದಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ, ಸಮಾಜ ವ್ಯಕ್ತಿಗಳ ಮೂಲಭೂತ ಹಕ್ಕನ್ನು ಗೌರವಿಸಬೇಕು, ಪುರುಷ ಹಾಗೂ ಮಹಿಳೆಯರಲ್ಲಿ ಸಲಿಂಗಕಾಮ ಅವರ ವಯಕ್ತಿಕ ಅಪೇಕ್ಷೆಯ ಅನುಸಾರ ಇರಲು ಅವಕಾಶ ಕಲ್ಪಿಸಬೇಕು.

Society should accept Homosexuality: Union minister Hegde

ಇದು ಕೇವಲ ಲೈಂಗಿಕತೆಗೆ ಸಂಬಂಧಿಸಿದ ವಿಚಾರವಾಗಿದ್ದು, ಅದು ಅವರ ವಯಕ್ತಿಕ ಆಯ್ಕೆಯಾಗಿರಬೇಕು. ಇದನ್ನು ಸಂಪೂರ್ಣ ತೊಡೆದುಹಾಕಲು ಸಾಧ್ಯವಿಲ್ಲ, ಅಂತಹ ಲೈಂಗಿಕ ಆಯ್ಕೆಯ ಜತೆಗೆ ಬದುಕಿರುವವರೊಂದಿಗೆ ಸರಿಯಾಗಿ ವರ್ತಿಸಬೇಕು ಎಂದು ಮನವಿ ಮಾಡಿದರು.

English summary
Union minister Anantkumar Hegde said that homosexuality is not a curse and society should accept individual sexual practice
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X