ಶಿರಸಿ: ಹುಡುಗಿಯರ ಮನೆ ಬಾಗಿಲು ಬಡಿಯುವ ಕಿಡಿಗೇಡಿಗಳು

Posted By: Prithviraj
Subscribe to Oneindia Kannada

ಶಿರಸಿ, ಅಕ್ಟೋಬರ್, 20: ಮಧ್ಯರಾತ್ರಿ ಸಂಪೂರ್ಣ ಕತ್ತಲು ಆವರಿಸಿ ನೀರವ ಮೌನವಿರುವಾಗ ಆ ಊರಲ್ಲಿ ಟಕ್... ಟಕ್... ಎಂದು ಬಾಗಿಲು ಬಡಿದ ಸದ್ದು ಕೇಳಿಸುತ್ತದೆ.

ಮನೆಮಂದಿಯೆಲ್ಲಾ ಎಚ್ಚರವಾಗಿ ಹೊರ ಬಂದು ನೋಡಿದರೆ ಯಾರೂ ಕಾಣಿಸುವುದಿಲ್ಲ. ಭಯದಿಂದ ಮತ್ತೆ ಬಾಗಿಲು ಹಾಕಿಕೊಂಡು ಸುಮ್ಮನಾದರು. ಇದು ಯಾವುದೋ ಹಾರರ್ ಸಿನಿಮಾದ ವಿವರಣೆ ಅಲ್ಲ. ಶಿರಸಿಯಲ್ಲಿ ಕಳೆದ 15 ದಿನಗಳಿಂದ ನಡೆಯುತ್ತಿರುವ ಘಟನೆ.[ಹುಡುಗಿಯರಿಗೆ ಕಾಟ ಕೊಡುತ್ತಿದ್ದ ಪೋಲಿ ಮಂಗಣ್ಣ ಸಿಕ್ಕಿಬಿದ್ದ!]

Miscreants hits residents doors on midnight in Shirasi

ಶಿರಸಿಯ ಕಸ್ತೂರಬಾ ನಗರ, ಸಹ್ಯಾದ್ರಿ ಕಾಲೋನಿ, ಆಶೋಕ ನಗರ ವ್ಯಾಪ್ತಿಯ ನಾಗರಿಕರು ದಿನನಿತ್ಯ ಈ ಘಟನೆಯನ್ನು ಎದುರಿಸುತ್ತಿದ್ದಾರೆ.

ಅಪರಾತ್ರಿ ಹೊತ್ತು ಯಾರೋ ಬಾಗಿಲನ್ನು ಜೋರಾಗಿ ಬಡಿಯುತ್ತಿದ್ದು, ಇಂತಹ ಘಟನೆ ಕಳೆದ 15ದಿನಗಳಿಂದ 6-7 ಬಾರಿ ನಡೆದಿದೆ ಎಂದು ಇಲ್ಲಿಯ ನಿವಾಸಿಗಳು ತಿಳಿಸಿದ್ದಾರೆ.

ಘಟನೆಯಿಂದ ಕಂಗಾಲಾಗಿರುವ ನಿವಾಸಿಗಳು ಈ ಕುರಿತಂತೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೃತ್ಯ ನಡೆಸುವವರ ಶೋಧಕ್ಕೆ ಬಲೆ ಬೀಸಿದ್ದಾರೆ.

ತೀವ್ರ ನಿಗಾ ವಹಿಸಿದ್ದರೂ ಬಗಿಲು ಬಡಿಯುವ ಕುಚೇಷ್ಟೇ ಮುಂದು ವರೆಯುತ್ತಲೇ ಇದೆ. ಹುಡುಗಿಯರು ಇರುವ ಮನೆಗಳನ್ನೇ ಗುರಿಯಾಗಿಸಿಕೊಂಡು ಈ ಕುಚೇಷ್ಟೇ ನಡೆಸಲಾಗುತ್ತಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Miscreants hits residents doors on midnight in Shirasi, residents fills complaints in police department.
Please Wait while comments are loading...