ಶಿರಸಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿರಸಿಯಲ್ಲಿ ಡ್ರೈವಿಂಗ್ ಪರೀಕ್ಷೆ ವೇಳೆ ಕಾರು ಸಮೇತ ಕೆರೆಗೆ ಬಿದ್ದ ವ್ಯಕ್ತಿ

|
Google Oneindia Kannada News

ಶಿರಸಿ, ಮಾರ್ಚ್ 19: ಡ್ರೈವಿಂಗ್ ಲೈಸೆನ್ಸ್ ಪಡೆಯಲೆಂದು ಬಂದ ವ್ಯಕ್ತಿ ಕಾರಿನ ಸಮೇತ ಕೆರೆಯ ನೀರಿಗೆ ಬಿದ್ದ ಘಟನೆ ಶಿರಸಿಯಲ್ಲಿ ನಡೆದಿದೆ. ತಕ್ಷಣ ಸಾರ್ವಜನಿಕರು ಚಾಲಕನನ್ನು ರಕ್ಷಿಸಿ, ಕಾರನ್ನು ನೀರಿನಿಂದ ಎತ್ತಿ ಮಾನವೀಯತೆ ಮೆರೆದಿದ್ದಾರೆ.

ಶಿರಸಿಯ ಆರ್ ಟಿಒ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಶಿರಸಿಯಲ್ಲಿರುವ ವಿಭಾಗೀಯ ಆರ್ ಟಿಒ ಕಛೇರಿಯು ಕೆರೆಯ ದಡದಲ್ಲಿದೆ. ಲೈಸೆನ್ಸ್ ಪಡೆಯಲು ಬರುವ ಚಾಲಕರು ಚಾಲನೆಯ ಟ್ರಯಲ್ ಕೊಡುವಾಗ ಕೆರೆಯ ಸಮೀಪವೇ ವಾಹನಗಳನ್ನು ಚಲಾಯಿಸುವದು ಕಡ್ಡಾಯ.

ಗುರುವಾರ ಸಿದ್ದಾಪುರದಿಂದ ನವೀನ ಎನ್ನುವವರು ಕಾರಿನ ಲೈಸೆನ್ಸ್ ಗಾಗಿ ಶಿರಸಿಯ ಆರ್ ಟಿಒ ಕಚೇರಿಗೆ ಬಂದಿದ್ದರು. ನಿಯಮಾನುಸಾರ ಚಾಲನಾ ಟ್ರಯಲ್ ಕೊಡುವ ವೇಳೆ ನಿಯಂತ್ರಣ ತಪ್ಪಿ ಕಚೇರಿಯ ಎದುರಿನ ನೀರು ತುಂಬಿದ ಕೆರೆಗೆ ಹಾರಿದೆ.

Car Jumped To Lake While Trail Driving Near Sirsi RTO Office

ತಕ್ಷಣ ಸ್ಥಳೀಯರು ಈಜು ತಜ್ಞರನ್ನು ಕರೆಯಿಸಿ ಚಾಲಕನನ್ನು ರಕ್ಷಿಸಿದರು ಹಾಗೂ ಕ್ರೇನ್ ಮೂಲಕ ಕಾರನ್ನು ನೀರಿನಿಂದ ಎತ್ತಲಾಯಿತು.

English summary
People rescued a man whose car jumped to lake in sirsi. Naveen from siddapura came to rto office in sirsi for getting driving license. while giving a driving trail, his car jumped to lake
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X