Sira Elections: ಭಿನ್ನಮತದ ನಡುವೆ ಶಿರಾದಲ್ಲಿ ಮತ್ತೆ ಕಾಂಗ್ರೆಸ್ ಚಿಗುರೊಡೆಯುತ್ತಾ..?
ತುಮಕೂರು, ಮಾರ್ಚ್. 26: ಶಿರಾ (ಸಿರಾ) ರಾಜ್ಯದ ವಿಧಾನಸಭೆಯ 224 ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ತುಮಕೂರು ಜಿಲ್ಲೆಯಲ್ಲಿದ್ದರೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಭಾಗವಾಗಿದೆ. ಐತಿಹಾಸಿಕ ನಗರವಾಗಿರುವ ಇದು, ಬ್ರಿಟಿಷರು ದೇಶದಲ್ಲಿ ಆಳ್ವಿಕೆಗೆ ಬರುವುದಕ್ಕಿಂತ ಮೊದಲು ಶಿರಾ ರಾಜಕೀಯವಾಗಿ ಹಾಗು ಸೈನಿಕವಾಗಿ ದಕ್ಷಿಣ ಭಾರತದ ಪ್ರಮುಖ ಪ್ರದೇಶವಾಗಿತ್ತು.
2018ರಲ್ಲಿ ಶಿರಾ ಕ್ಷೇತ್ರದಿಂದ ಗೆದ್ದಿದ್ದ ಜೆಡಿಎಸ್ ಶಾಸಕ, ಮಾಜಿ ಸಚಿವ ಬಿ. ಸತ್ಯನಾರಾಯಣ ಅವರು ನಿಧರಾದ ಹಿನ್ನೆಲೆ ಕ್ಷೇತ್ರದಲ್ಲಿ 2020ರಲ್ಲಿ ಉಪ ಚುನಾವಣೆ ನಡೆದಿತ್ತು. ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಡಾ.ಸಿ.ಎಂ. ರಾಜೇಶ್‌ಗೌಡ ಗೆಲುವು ಸಾಧಿಸಿದ್ದರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಟಿ ಬಿ ಜಯಚಂದ್ರ ವಿರುದ್ಧ 13 ಸಾವಿರ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು.

*ಶಿರಾ ಇತಿಹಾಸ*
ಐತಿಹಾಸಿಕ ನಗರ ಶಿರಾ(ಸಿರಾ), ತುಮಕೂರು ಜಿಲ್ಲೆಯ ಒಂದು ಪ್ರಮುಖ ತಾಲೂಕು ಕೇಂದ್ರ. ಬ್ರಿಟಿಷರು ಅಧಿಕಾರಕ್ಕೆ ಬರುವುದಕ್ಕಿಂತ ಮೊದಲು ಶಿರಾ ರಾಜಕೀಯವಾಗಿ ಹಾಗು ಸೈನಿಕವಾಗಿ ದಕ್ಷಿಣ ಭಾರತದ ಪ್ರಮುಖ ಪ್ರದೇಶವಾಗಿತ್ತು. ಹಲವು ಅರಸರು, ಮೊಘಲರು, ಆಳ್ವಿಕೆಗೊಳಪಟ್ಟಿತ್ತು. ಹೈದರ್ ಆಲಿ ಸೇರಿದಂತೆ ಅನೇಖರು ಈ ನಗರವನ್ನು ಆಳಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಎರಡನೇ ಅತಿದೊಡ್ಡ ನಗರ ಎಂದು ಕರೆಯಲಾಗುತ್ತದೆ.
ಗೊಲ್ಲಸಿರಿಮ ಆಳ್ವಿಕೆ ಮಾಡಿದ ಕಾರಣ ಶಿರಾ ಅಥವಾ ಸಿರಾ ಎಂದು ಹೆಸರು ಬರಲು ಕಾರಣವಾಗಿದೆ. ಇಲ್ಲಿನ ಬಲಾಢ್ಯವಾದ ಕಲ್ಲಿನ ಕೋಟೆ ಸುತ್ತಲೂ ಕಂದಕವನ್ನು ಹೊಂದಿದೆ. ಇದು ಜಿಲ್ಲಾ ಕೇಂದ್ರದಿಂದ 50 ಕಿ.ಮೀ ದೂರವಿದೆ ಹಾಗು ರಾಜಧಾನಿ ಬೆಂಗಳೂರಿನಿಂದ ಸುಮಾರು 125 ಕಿಮಿ ದೂರದಲ್ಲಿದ್ದು ರಾಷ್ಟ್ರೀಯ ಹೆದ್ದಾರಿ 4 (ಪುಣೆ-ಬೆಂಗಳೂರು ರಸ್ತೆ) ಕ್ಕೆ ಹೊಂದಿಕೊಂಡಿದೆ. ಶಿರಾ ತಾಲೂಕು ಕಳ್ಳಂಬೆಳ್ಳ, ಕಸಬಾ, ಗೌಡಗೆರೆ, ಬುಕ್ಕಾಪಟ್ಟಣ ಮತ್ತು ಹುಲಿಕುಂಟೆ ಹೊಬಳಿಗಳನ್ನು ಹೊಂದಿದೆ.
*ಶಿರಾ ರಾಜಕೀಯ*
ಶಿರಾದಲ್ಲಿ ಮೈಸೂರು ರಾಜ್ಯ ಅಸ್ವಿತ್ವದಲ್ಲಿದ್ದ ಸಂದರ್ಭದಲ್ಲಿ 1951ರಲ್ಲಿ ಸ್ವತಂತ್ರ ಅಭ್ಯರ್ಥಿ ಬಿ. ಎನ್. ರೇಮೇಗೌಡ, 1957 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ರಲ್ಲಿ ಟಿ. ತಾರೇಗೌಡ (ಆಸನ-1) ಮತ್ತು ಪಿ. ಆಂಜನಪ್ಪ (ಆಸನ-2) ಆಯ್ಕೆಯಾಗಿದ್ದರು. 1962 ರಲ್ಲಿ ಸ್ವತಂತ್ರ ಅಭ್ಯರ್ಥಿ ಸಿ.ಜೆ.ಮುಕ್ಕಣ್ಣಪ್ಪ, 1967ರಲ್ಲಿ ಕಾಂಗ್ರೆಸ್‌ನ ಬಿ.ಎನ್.ರಾಮೇಗೌಡ, 972 ರಲ್ಲಿ ಕಾಂಗ್ರೆಸ್‌ನ ಬಿ.ಪುಟ್ಟಕಾಮಯ್ಯ ಶಾಸಕರಾಗಿದ್ದರು.

ಕರ್ನಾಟಕ ರಾಜ್ಯ ರಚನೆಯಾದ ಮೇಲೆ 1978 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಇಂದಿರಾ) ಪಕ್ಷದ ಎಸ್.ಲಿಂಗಯ್ಯ, 1983 ರಲ್ಲಿ ಸ್ವತಂತ್ರ ಅಭ್ಯರ್ಥಿ ಪಿ.ಮುದ್ಲೇಗೌಡ, 1985 ರಲ್ಲಿ ಕಾಂಗ್ರೆಸ್‌ನ ಸಿ.ಪಿ.ಮುದಲಗಿರಿಯಪ್ಪ , 1989 ರಲ್ಲಿ ಕಾಂಗ್ರೆಸ್‌ನ ಎಸ್.ಕೆ.ದಾಸಪ್ಪ, 1994 ರಲ್ಲಿ ಜನತಾದಳದ ಬಿ.ಸತ್ಯನಾರಾಯಣ, 1999 ರಲ್ಲಿ ಕಾಂಗ್ರೆಸ್‌ನ ಪಿ.ಎಂ.ರಂಗನಾಥ್ ಆಯ್ಕೆಯಾಗಿದ್ದರು.
2004 ರಲ್ಲಿ ಜಾತ್ಯತೀತ ಜನತಾ ದಳದ ಅಭ್ಯರ್ಥಿ ಬಿ. ಸತ್ಯನಾರಾಯಣ, 2008 ಮತ್ತು 2013 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ. ಬಿ. ಜಯಚಂದ್ರ, 2018 ರಲ್ಲಿ ಜಾತ್ಯತೀತ ಜನತಾ ದಳದ ಅಭ್ಯರ್ಥಿ ಬಿ. ಸತ್ಯನಾರಾಯಣ ಶಾಸಕರಾಗಿದ್ದರು. ಆದರೆ, ಅವರ ನಿಧನದ ಕಾರಣ 2020ರಲ್ಲಿ ಉಪಚುನಾವಣೆ ನಡೆದು ಬಿಜೆಪಿ ಅಭ್ಯರ್ಥಿ ಡಾ.ಸಿ.ಎಂ. ರಾಜೇಶ್‌ಗೌಡ ಗೆಲುವು ದಾಖಲಿಸಿದ್ದಾರೆ.
Sira Karnataka Elections
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2020td> | ಡಾ.ಸಿ.ಎಂ. ರಾಜೇಶ್‌ಗೌಡ | 76,564 | ಟಿ ಬಿ ಜಯಚಂದ್ರ | 63,150 |
| 2018td> | ಬಿ ಸತ್ಯನಾರಾಯಣ | 74338 | ಟಿ ಬಿ ಜಯಚಂದ್ರ | 63973 |
| 2013 | ಟಿ ಬಿ ಜಯಚಂದ್ರ | 74089 | ಬಿ ಸತ್ಯನಾರಾಯಣ | 59408 |
| 2008 | ಟಿ ಬಿ ಜಯಚಂದ್ರ | 60793 | ಬಿ ಸತ್ಯನಾರಾಯಣ | 34297 |
ಸದ್ಯ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಪ್ರಯತ್ನದಲ್ಲಿ ಶಿರಾದಿಂದ ಮಾಜಿ ಶಾಸಕ ಟಿ.ಬಿ.ಜಯಚಂದ್ರ ಅವರಿಗೆ ಟಿಕೆಟ್ ನೀಡಿದೆ. ಇದರಿಂದಾಗಿ ಈ ಕ್ಷೇತ್ರದಿಂದ ಟಿಕೆಟ್ ಬಯಸಿದ್ದ ಸಾಸಲು ಸತೀಶ್ ಅಸಮಾಧಾನಗೊಂಡಿದ್ದಾರೆ. ಟಿಕೆಟ್ ಸಿಗುವ ಭರವಸೆಯೊಂದಿಗೆ ಅವರು ಈಗಾಗಲೇ ಕ್ಷೇತ್ರದಲ್ಲಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಆದರೆ, ಈ ಭಿನ್ನಾಭಿಪ್ರಾಯ ದಾಟಿ ಕಾಂಗ್ರೆಸ್ ಮತ್ತೆ ಶಿರಾ ಉಳಿಸಿಕೊಳ್ಳಲಿದೆಯಾ ನೋಡಬೇಕಿದೆ.

ಇನ್ನು, ಸ್ಥಾನ ಉಳಿಸಿಕೊಳ್ಳುವ ಪ್ರಯತ್ನದಲ್ಲಿರುವ ಬಿಜೆಪಿ, ಹಾಲಿ ಶಾಸಕರನ್ನೇ ಕಣಕ್ಕೆ ಇಳಿಸಲಿದೆ. ಶಿರಾ ಕ್ಷೇತ್ರದಲ್ಲಿ ವಿಜಯ ಸಂಕಲ್ಪ ಯಾತ್ರೆಯನ್ನು ನಡೆಸಿ, ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರನ್ನು ಗೆಲ್ಲಿಸಬೇಕು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಕಳೆದ 70 ವರ್ಷಗಳಿಂದ ಆಡಳಿತ ನಡೆಸಿವೆ. ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ನಾವು ಕೊಟ್ಟ ಮಾತು ತಪ್ಪುವುದಿಲ್ಲ ಎಂದು ಭರವಸೆ ನೀಡಿದೆ.
ಕ್ಷೇತ್ರದಲ್ಲಿ ಜೆಡಿಎಸ್ ಇನ್ನು ಅಭ್ಯರ್ಥಿಯನ್ನು ಘೋಷಿಸಿಲ್ಲ. ಪಕ್ಷದ ಒಬ್ಬನೇ ಒಬ್ಬ ಕಾರ್ಯಕರ್ತನೂ ಕೂಡ ಪಕ್ಷಾಂತರಗೊಳ್ಳದೆ ತಟಸ್ಥವಾಗಿದ್ದಾರೆ. ಆಕಾಂಕ್ಷಿಗಳ ದಂಡು ಹೆಚ್ಚಾಗಿದೆ. ಜೆಡಿಎಸ್ ಅಧ್ಯಕ್ಷ ಆರ್.ಉಗ್ರೇಶ್, ಬಿ.ಸತ್ಯಪ್ರಕಾಶ್ ಹಾಗೂ ಸಿ.ಆರ್.ಉಮೇಶ್ ಪ್ರಮುಖ ನಾಯಕರಿದ್ದಾರೆ. ಇದರ ಜೊತೆಗೆ ಪಕ್ಷ ಬಿಟ್ಟು ಬಿಜೆಪಿ ಸೇರಿ ಮತ್ತೆ ಗೂಡಿಗೆ ಮರಳಿರುವ ಎಸ್.ಆರ್.ಗೌಡ, ಇತ್ತೀಚೆಗೆ ಪಕ್ಷಕ್ಕೆ ಸೇರಿದ ಶ್ರೀರಾಮೇಗೌಡ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
*ಮತದಾರರು*
ಸಿರಾ ವಿಧಾನಸಭಾ ಕ್ಷೇತ್ರ ಸಾಮಾನ್ಯ ವರ್ಗದ ವಿಧಾನಸಭಾ ಸ್ಥಾನವಾಗಿದೆ. ಸಿರಾ ವಿಧಾನಸಭೆಯಲ್ಲಿ ಎಸ್‌ಸಿ ಮತದಾರರು ಸರಿಸುಮಾರು 45,871, ಎಸ್ಟಿ ಮತದಾರರು ಸರಿಸುಮಾರು 17,052 , ಮುಸ್ಲಿಂ ಮತದಾರರು ಸರಿಸುಮಾರು 28,349 ಮಂದಿಯಿದ್ದಾರೆ. ಗ್ರಾಮೀಣ ಮತದಾರರು ಸರಿಸುಮಾರು 1, 67,325, ನಗರ ಮತದಾರರು ಸರಿಸುಮಾರು 45,849 ಇದ್ದಾರೆ. 2019 ರ ಸಂಸತ್ ಚುನಾವಣೆಯಂತೆ ಸಿರಾ ವಿಧಾನಸಭೆಯ ಒಟ್ಟು ಮತದಾರರು 2,13,153 .t
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications