• search
  • Live TV
ಸಿಂಗಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಾಹ್, ಎಂಥ ಶೈಕ್ಷಣಿಕ ಬದಲಾವಣೆಗೆ ಸಿದ್ಧವಾಗಿದೆ ಸಿಂಗಾಪುರ!

|

ಮಗು ಪರೀಕ್ಷೆಯಲ್ಲಿ ಮೊದಲು ಬಂತೋ ಅಥವಾ ಕೊನೆ ಬಂತೋ ಇವ್ಯಾವುದರ ವಿವರ ಕೂಡ ಮುಂಬರುವ ವರ್ಷದ ಸಿಂಗಾಪುರ ದೇಶದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಶಾಲೆಯ ಮಾರ್ಕ್ಸ್ ಕಾರ್ಡ್ ಗಳಲ್ಲಿ ಇರಲ್ಲ. ಇದರಿಂದ 'ಕಲಿಕೆ ಎಂಬುದು ಸ್ಪರ್ಧೆಯಲ್ಲ' ಎಂಬುದು ವಿದ್ಯಾರ್ಥಿಗಳಿಗೆ ತಿಳಿಯುತ್ತದೆ ಎಂದು ಶಿಕ್ಷಣ ಸಚಿವರಾದ ಒಂಗ್ ಯೆ ಕುಂಗ್ ಅಭಿಪ್ರಾಯ ಪಟ್ಟಿದ್ದಾರೆ.

ಮುಂದಿನ ವರ್ಷದಿಂದ ರಿಪೋರ್ಟ್ ಬುಕ್ಸ್ ನಲ್ಲಿ ವಿದ್ಯಾರ್ಥಿಯ ಶ್ರೇಯಾಂಕ, ಇತರ ವಿದ್ಯಾರ್ಥಿಗಳ ಜತೆಗೆ ಹೋಲಿಕೆ ಮಾತ್ರ ನಿಲ್ಲಲ್ಲ. ಇದರ ಜತೆಗೆ ಈ ಕೆಳಕಂಡಂಥವು ಸಹ ಇರಲ್ಲ.

ಬಿಬಿಎಂಪಿ ಶಾಲೆಗಳಲ್ಲಿ ವಿಶ್ವದರ್ಜೆಯ ಕಲಿಕಾ ಸೌಲಭ್ಯ

* ಕನಿಷ್ಠ ಹಾಗೂ ಗರಿಷ್ಠ ಅಂಕಗಳು

* ವರ್ಷದ ಕೊನೆಗೆ ತೇರ್ಗಡೆ, ಅನುತ್ತೀರ್ಣ ಎಂಬ ಫಲಿತಾಂಶ

* ಒಟ್ಟಾರೆ ಅಂಕಗಳು

* ಅನುತ್ತೀರ್ಣವಾದ ಅಂಕಗಳ ಕೆಳಗೆ ಗೆರೆ ಎಳೆಯುವುದು, ಬಣ್ಣದ ಪೆನ್ ನಿಂದ ಗುರುತು ಮಾಡುವುದು

ಇತ್ಯಾದಿಗಳು ಇರುವುದಿಲ್ಲ. ವಿದ್ಯಾರ್ಥಿಗಳು ತಮ್ಮ ಕಲಿಕೆ ಮೇಲೆ ಗಮನ ಹರಿಸಬೇಕೆ ವಿನಾ ಇನ್ನೊಬ್ಬರ ಜತೆ ಹೋಲಿಕೆ ಮಾಡುಕೊಳ್ಳಬಾರದು ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಶಿಕ್ಷಣ ಸಚಿವಾಲಯವು ತಿಳಿಸಿದೆ. ಪ್ರಾಥಮಿಕ ಹಂತದ ಒಂದು ಎರಡನೇ ತರಗತಿಗೆ ಪರೀಕ್ಷೆಯನ್ನೇ ತೆಗೆಯಲಾಗುವುದು. ಮೌಲ್ಯಮಾಪನ ಮಾಡಲು ಇರುವ ವಿಧಾನವನ್ನು ಒಟ್ಟಾರೆ ಶ್ರೇಣಿಗೆ ಗಣನೆಗೆ ತೆಗೆದುಕೊಳ್ಳುವುದಿಲ್ಲ.

ನಾನು ಕಂಡ ಕರ್ನಾಟಕದ ಕನಸು ನನಸಾಗುವುದೆ?

ಮಕ್ಕಳ ಕಲಿಕೆಯ ಹಂತದ ಮೌಲ್ಯ ಮಾಪನಕ್ಕಾಗಿ ಶಿಕ್ಷಕರು ಅಂಕ-ಗ್ರೇಡ್ ಗಳ ಬದಲಾಗಿ ಗುಂಪು ಚರ್ಚೆ, ಹೋಮ್ ವರ್ಕ್ ಹಾಗೂ ರಸಪ್ರಶ್ನೆ ಇಂಥವುಗಳನ್ನು ಬಳಸುತ್ತಾರೆ. ಆಯಾ ವಿದ್ಯಾರ್ಥಿಗಳ ಬಗ್ಗೆ ಪೋಷಕರ ಸಭೆಯಲ್ಲಿ ಮಾಹಿತಿ ನೀಡಲಾಗುತ್ತದೆ.

ರಾಜ್ಯದಲ್ಲಿ ಅಂತರರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾನಿಲಯದ ಸ್ಥಾಪನೆ: ಎಚ್‌ಡಿಕೆ

ಹೆಚ್ಚಿನ ಅಂಕ ಪಡೆದೆ ಎಂಬುದು ತರಗತಿಯಲ್ಲಿ ವಿದ್ಯಾರ್ಥಿಗಳನ್ನು ಗುರುತಿಸುವ ಮಾನದಂಡ ಅಂದುಕೊಳ್ಳಬಹುದು. ಆದರೆ ವಿದ್ಯಾರ್ಥಿಗಳು ಕಲಿಕೆಯನ್ನು ಸ್ಪರ್ಧೆ ಅಂದುಕೊಳ್ಳದೆ ಖುಷಿ ಪಡಬೇಕು. ಆದರೆ ರಿಪೋರ್ಟ್ ಪುಸ್ತಕದಲ್ಲಿ ವಿದ್ಯಾರ್ಥಿಯ ಸಾಮರ್ಥ್ಯ ಮತ್ತು ಬಲಹೀನತೆ ಬಗ್ಗೆ ಇರುತ್ತದೆ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ.

English summary
Whether a child finishes first or last will no longer be indicated in primary and secondary school report books from next year in Singapore, – a move which Education Minister Ong Ye Kung hopes will show students that “learning is not a competition”.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X