Get Updates
Get notified of breaking news, exclusive insights, and must-see stories!

Sidlaghatta Elections: ಶಿಡ್ಲಘಟ್ಟದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ನಡುವೆ ನೇರ ಹಣಾಹಣಿ

ಆಂಧ್ರ ಪ್ರದೇಶದ ಗಡಿಯಂಚಿನಲ್ಲಿರುವ ಇನ್ನೂ ಅಭಿವೃದ್ಧಿ ಹೊಂದಬೇಕಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ವಿಧಾನಸಭಾ ಕ್ಷೇತ್ರ ಶಿಡ್ಲಘಟ್ಟ. ರಸ್ತೆ, ಕುಡಿಯುವ ನೀರು ಸೇರಿದಂತೆ ಕೆಲವು ಮೂಲ ಸೌಕರ್ಯಗಳು ಇನ್ನೂ ಆಗಬೇಕು. ಸರ್ಕಾರಿ ಶಾಲೆ, ಕಾಲೇಜು ಅಭಿವೃದ್ಧಿಯಾಗಬೇಕಿದೆ. ಕೈಗಾರಿಕೆಗಳು ಇಲ್ಲದೇ ಯುವಕ, ವಯುವತಿಯರು ವಲಸೆ ಹೋಗುತ್ತಿದ್ದಾರೆ. ತರಕಾರಿ ಬೆಳೆಗೆ ಮಾರುಕಟ್ಟೆ ಸ್ಥಾಪನೆಯಾಗಬೇಕಿದೆ. ರಾಜಕೀಯವಾಗಿ ನೋಡುವುದಾದರೆ ಇಲ್ಲಿ ಬಿಜೆಪಿ ಆಟಕ್ಕುಂಟು, ಲೆಕ್ಕಕ್ಕಿಲ್ಲ. ಕಾಂಗ್ರೆಸ್, ಜೆಡಿಎಸ್ ನಡುವೆಯೇ ನೇರ ಪೈಪೋಟಿ.

ಕಾಂಗ್ರೆಸ್‌ನ ವಿ. ಮುನಿಯಪ್ಪ ಕ್ಷೇತ್ರದ ಹಾಲಿ ಶಾಸಕರು. ಕ್ಷೇತ್ರದಲ್ಲಿ 6 ಬಾರಿ ಅವರು ಗೆದ್ದಿದ್ದಾರೆ. ಈ ಬಾರಿಯ ಚುನಾವಣೆಗೆ ಜೆಡಿಎಸ್ ರವಿಕುಮಾರ್ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಕಳೆದ ಚುನಾವಣೆಯಲ್ಲಿ ಅವರು 66,531 ಮತಗಳನ್ನು ಪಡೆದು ಎರಡನೇ ಸ್ಥಾನಗಳಿಸಿದ್ದರು. ಕಾಂಗ್ರೆಸ್‌ ಮತ್ತು ಬಿಜೆಪಿ ಇನ್ನೂ ಅಭ್ಯರ್ಥಿಯನ್ನು ಘೋಷಣೆ ಮಾಡಬೇಕಿದೆ. ಹಾಲಿ ಶಾಸಕರಿಗೆ ಟಿಕೆಟ್ ಕೊಡುವುದಾದರೆ ವಿ. ಮುನಿಯಪ್ಪ ಮತ್ತೊಮ್ಮೆ ಅಭ್ಯರ್ಥಿಯಾಗಲಿದ್ದಾರೆ.

sidlaghatta constituency map

ರಾಜಕೀಯ ಇತಿಹಾಸ; ಶಿಡ್ಲಘಟ್ಟದಲ್ಲಿ ಇದುವರೆಗೂ ನಡೆದ 14 ಚುನಾವಣೆಯಲ್ಲಿ ಕಾಂಗ್ರೆಸ್ 10 ಬಾರಿ ಗೆದ್ದಿದೆ. ಜೆಡಿಎಸ್ 2 ಬಾರಿ, ಜನತಾಪಕ್ಷ ಮತ್ತು ಸ್ವತಂತ್ರ ಅಭ್ಯರ್ಥಿಗಳು ತಲಾ ಒಮ್ಮೊಮ್ಮೆ ಗೆಲವು ಸಾಧಿಸಿದ್ದಾರೆ. 1957ರಲ್ಲಿ ಪಕ್ಷೇತರರಾದ ಜೆ. ವೆಂಕಟಪ್ಪ ಕಾಂಗ್ರೆಸ್‌ನ ಎಸ್. ಅವಲರೆಡ್ಡಿ ವಿರುದ್ಧ ಗೆದ್ದರು. 1962ರಲ್ಲಿ ಎಸ್. ಅವಲರೆಡ್ಡಿ ಜೆ. ವೆಂಕಟಪ್ಪರನ್ನು ಸೋಲಿಸಿದರು. 1967ರಲ್ಲಿ ಕಾಂಗ್ರೆಸ್‌ ಬಿ. ವೆಂಕಟರಾಯಪ್ಪಗೆ ಟಿಕೆಟ್ ನೀಡಿತು. ಪಕ್ಷೇತರರಾದ ಜಿ. ಪಾಪಣ್ಣ ವಿರುದ್ಧ 3,486 ಮತಗಳ ಅಂತರದಲ್ಲಿ ಗೆದ್ದರು.

1972ರಲ್ಲಿ ಜೆ. ವೆಂಕಟಪ್ಪ ಕಾಂಗ್ರೆಸ್‌ ಟಿಕೆಟ್ ಪಡೆದರು. ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಬಿ. ವೆಂಕಟರಾಯಪ್ಪ ಪಕ್ಷೇತರರಾದರು. ಇಬ್ಬರ ಪೈಪೋಟಿಯಲ್ಲಿ ಜೆ. ವೆಂಕಟಪ್ಪ 14,343 ಮತಗಳ ಅಂತರದಲ್ಲಿ ಗೆದ್ದರು. 1978ರಲ್ಲಿ ಇಂದಿರಾ ಕಾಂಗ್ರೆಸ್‌ನ ಎಸ್. ಮುನಿಶಾಮಪ್ಪ ಜನತಾಪಕ್ಷದ ಇ. ವೆಂಕಟರಾಯಪ್ಪರನ್ನು ಸೋಲಿಸಿದರು. 1983ರಲ್ಲಿ ಎನ್‌ಎಸ್‌ಯುಐನಲ್ಲಿ ಸಕ್ರಿಯರಾಗಿದ್ದ ವಿ. ಮುನಿಯಪ್ಪ ಶಿಡ್ಲಘಟ್ಟಕ್ಕೆ ಬಂದರು. ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಶಿಡ್ಲಘಟ್ಟದಲ್ಲಿ ವಿ. ಮುನಿಯಪ್ಪ 6 ಬಾರಿ ಗೆಲುವು ಸಾಧಿಸಿದ್ದಾರೆ. 1983ರಲ್ಲಿ ಮೊದಲ ಬಾರಿಗೆ ಎಸ್. ಮುನಿಶಾಮಪ್ಪರನ್ನು 2,513 ಮತಗಳ ಅಂತರದಿಂದ ಸೋಲಿಸಿದರು. 1989, 1994,1999ರಲ್ಲಿ ವಿ. ಮುನಿಯಪ್ಪ ಗೆದ್ದರು. ಕೆಪಿಸಿಸಿ ಕಾರ್ಯದರ್ಶಿ, ಕೆಪಿಸಿಸಿ ಉಪಾಧ್ಯಕ್ಷ, ಎಐಸಿಸಿ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ರೇಷ್ಮೆ, ಇಂಧನ, ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವರಾಗಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಣೆ ಮಾಡಿದ್ದಾರೆ. 2004ರಲ್ಲಿ ಎಸ್. ಮುನಿಶಾಮಪ್ಪ ಜೆಡಿಎಸ್‌ ಅಭ್ಯರ್ಥಿಯಾಗಿ 7,447 ಮತಗಳ ಅಂತರಲ್ಲಿ ವಿ. ಮುನಿಯಪ್ಪ ಸೋಲಿಸಿದರು. 2008ರಲ್ಲಿ ವಿ. ಮುನಿಯಪ್ಪ ಮತ್ತೆ ಗೆದ್ದರು.

2013ರ ನಂತರದ ಚುನಾವಣೆ; 2013ರಲ್ಲಿ ಜೆಡಿಎಸ್‌ನ ಎಂ. ರಾಜಣ್ಣ 77,931 ಮತಗಳನ್ನು ಪಡೆದು ವಿ. ಮುನಿಯಪ್ಪ (62,452) ಸೋಲಿಸಿದರು. ಇದು ಶಿಡ್ಲಘಟ್ಟದಲ್ಲಿ ವಿ. ಮುನಿಯಪ್ಪರ ಮೂರನೇ ಸೋಲಾಯಿತು. 2018ರಲ್ಲಿ ಮತ್ತೆ ಕಾಂಗ್ರೆಸ್ ಟಿಕೆಟ್ ಪಡೆದ ವಿ. ಮುನಿಯಪ್ಪ 9,709 ಮತ ಪಡೆದು ಗೆದ್ದರು. ಆದರೆ ಜೆಡಿಎಸ್ ಹಾಲಿ ಶಾಸಕ ಎಂ. ರಾಜಣ್ಣ, ಬಿ. ಎನ್. ರವಿಕುಮಾರ್‌ಗೆ ಬಿಫಾರಂ ನೀಡಿತು. ಗೊಂದಲದ ನಡುವೆ ಸಿಫಾರಂ ಪಡೆದ ಬಿ. ಎನ್. ರವಿಕುಮಾರ್ ಕಣದಲ್ಲಿ ಉಳಿದರು 66,531 ಮತಗಳನ್ನು ಪಡೆದು ಸೋಲು ಕಂಡರು. ಎಂ. ರಾಜಣ್ಣ ಬಂಡಾಯವೆದ್ದು ಪಕ್ಷೇತರರಾದರು, ಪಡೆದ ಮತಗಳು ಕೇವಲ 4,110.

Sidlaghatta Karnataka Elections

ವರ್ಷ ಗೆದ್ದವರು ಮತಗಳು ಸೋತವರು ಮತಗಳು
2018 ವಿ. ಮುನಿಯಪ್ಪ (ಕಾಂಗ್ರೆಸ್) 76,240 ಬಿ. ಎನ್. ರವಿ ಕುಮಾರ್ (ಜೆಡಿಎಸ್‌) 66,531
2013 ಎಂ. ರಾಜಣ್ಣ (ಜೆಡಿಎಸ್) 77,931 ವಿ. ಮುನಿಯಪ್ಪ (ಕಾಂಗ್ರೆಸ್) 62,452
2008 ವಿ. ಮುನಿಯಪ್ಪ (ಕಾಂಗ್ರೆಸ್) 65,939 ಎಂ. ರಾಜಣ್ಣ (ಜೆಡಿಎಸ್) 59,437

ಜೆಡಿಎಸ್‌ನ ಬಿ. ಎನ್. ರವಿಕುಮಾರ್ ಚುನಾವಣಾ ತಯಾರಿ ಜೋರಾಗಿದೆ. ಪಂಚರತ್ನ ರಥಯಾತ್ರೆಯನ್ನು ಉತ್ತಮವಾಗಿ ಸಂಘಟನೆ ಮಾಡಿದ್ದಾರೆ. ಎಂ. ರಾಜಣ್ಣ ಬಿಜೆಪಿ ಸೇರಿ ಚುನಾವಣಾ ತಯಾರಿ ಆರಂಭಿಸಿ, ಟಿಕೆಟ್‌ಗಾಗಿ ಕಾದಿದ್ದಾರೆ. ಬಿಜೆಪಿ 2008ರಲ್ಲಿ 2,713, 2013ರಲ್ಲಿ 1,914 ಮತ್ತು 2018ರಲ್ಲಿ 3,596 ಮತಗಳನ್ನು ಪಡೆದಿದೆ. ಆದ್ದರಿಂದ ಅಭ್ಯರ್ಥಿ ಯಾರಾಗಬಹದು? ಎಂಬ ಕುತೂಹಲ ಜನರಿಗೆ ಇಲ್ಲ. ಕ್ಷೇತ್ರದಲ್ಲಿ 5 ಸಾವಿರ ಮತಗಳನ್ನುಗಳಿಸದ ಬಿಜೆಪಿಗೆ ಕ್ರಾಂತಿ ಮಾಡುತ್ತೇವೆ ಎಂಬ ಭ್ರಮೆಯೂ ಇಲ್ಲ.

ಕಾಂಗ್ರೆಸ್‌ನ ಹಾಲಿ ಶಾಸಕ ವಿ. ಮುನಿಯಪ್ಪಗೆ 76 ವರ್ಷಗಳು. ಸಕ್ರಿಯ ರಾಜಕೀಯದಿಂದ ಹಿಂದೆ ಸರಿಯುವ ಸುಳಿವು ನೀಡಿದ್ದರು. ಪುತ್ರ ಶಶಿಧರ್‌ಗೆ ಟಿಕೆಟ್ ಕೊಡಿಸಲು ಪ್ರಯತ್ನ ನಡೆಸಿದ್ದಾರೆ ಎಂಬ ಮಾತಿದೆ. ಕಳೆದ ಚುನಾವಣೆಯಲ್ಲಿ ಪಕ್ಷೇತರರಾಗಿದ್ದ ಆಂಜಿನಪ್ಪ ಪುಟ್ಟು ಈ ಬಾರಿ ಕಾಂಗ್ರೆಸ್ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಬೆಂಡಗಾನಹಳ್ಳಿಯ ರಾಜೀವ್‌ ಗೌಡ ಸಹ ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿ. ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದರೆ ಪಕ್ಷೇತರನಾಗಿ ಕಣಕ್ಕಿಳಿಯುವ ಸೂಚನೆ ನೀಡಿದ್ದಾರೆ.

ಶಿಡ್ಲಘಟ್ಟದ ಒಟ್ಟು ಮತದಾರರು 1,95,553. ಪುರುಷರು 98,634. ಮಹಿಳೆಯರು 96,902. ಇತರರು 10. ಒಕ್ಕಲಿಗರು, ದಲಿತರು ಸಮಾನ ಸಂಖ್ಯೆಯಲ್ಲಿದ್ದಾರೆ. ಸುಮಾರು 60 ಸಾವಿರ ಒಕ್ಕಲಿಗ ಮತಗಳಿವೆ. ಯಾರ ಒಲವು ಯಾರ ಕಡೆ ಎಂಬುದು ಫಲಿತಾಂಶ ತೀರ್ಮಾನ ಮಾಡಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+