Shorapur Constituency: ಸುರಪುರ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ಭಾರೀ ಪೈಪೋಟಿ
ಸುರಪುರ ಯಾದಗಿರಿ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದರ ಮೂಲ ಹೆಸರು ಶೋರಾಪುರ. ಇದು ಒಂದು ಐತಿಹಾಸಿಕ ಸ್ಥಳ. ಈ ತಾಲೂಕಿಗೆ ದೊಡ್ಡ ಇತಿಹಾಸವಿದೆ. ಹಿಂದೆ ರಾಜ ವೆಂಕಟಪ್ಪನಾಯಕ ಸಾತಂತ್ರ್ಯಕ್ಕಾಗಿ ಹೋರಾಡಿ ತನ್ನ ಪ್ರಾಣವನ್ನೆ ತ್ಯಾಗ ಮಾಡಿದನು.
ದೇಶದ ಭೂಪಟದಲ್ಲಿ ಗಮನ ಸೆಳೆಯುವ ಕ್ಷೇತ್ರ ಸುರಪುರ. ದೆಹಲಿಯ ಸಾಮ್ರಾಟ್ ಔರಂಗಜೇಬ ಕ್ರಿ.ಶ. 1705ರಲ್ಲಿ ಸುರಪುರದ ಮೇಲೆ ದಾಳಿ ಮಾಡಿದ್ದಾಗ ಅಂದಿನ ರಾಜ ಪಿತಂಬರಿ ಬಹರಿ ಪಿಡ್ಡ ನಾಯಕ ಸಾಮ್ರಾಟ್‌ನನ್ನು ಸೋಲಿಸಿದ್ದರು. ಸುರಪುರದ ಗತಕಾಲದ ಇತಿಹಾಸವನ್ನು ಇಂದಿನ ಪೀಳಿಗೆಗೆ ತಿಳಿಸಲು ಸುರಪುರ ಸಂಶೋಧನಾ ಕೇಂದ್ರ ವಿಜಯೋತ್ಸವ ಕಾರ್ಯಕ್ರಮವನ್ನು ಯೋಜಿಸುತ್ತದೆ. ಕ್ಷೇತ್ರದಲ್ಲಿ ಸಾಧಾರಣ ಮಳೆಯಾಗುತ್ತದೆ. ಇಲ್ಲಿನ ಮುಖ್ಯ ಭಾಷೆ ಕನ್ನಡ. ಕೊಡೇಕಲ್ ದೇವಸ್ಥಾನ, ದೇವರ ಗೋನಾಳ, ತಿಂಥಿಣಿ ಶ್ರೀ ಮೌನೇಶ್ವರ, ಟೈಲರ್ಸ್ ಬಂಗ್ಲಾ ಇಲ್ಲಿನ ಪ್ರೇಕ್ಷೇಣಿಯ ಸ್ಥಳಗಳಾಗಿವೆ.

ಆದರೆ, ವಿವಿಧ ಸಂಸ್ಕೃತಿಗಳ ಪರಿಚಯದ ಕಾರಣ ಉರ್ದು, ಮರಾಠಿ, ಹಿಂದಿ ಮುಂತಾದ ಭಾಷೆಗಳನ್ನು ಆಡುವ ಜನರು ಸಿಗುತ್ತಾರೆ. ಜೋಳ, ಗೋಧಿ, ಅಕ್ಕಿಯನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ. ರಾಜಕೀಯವಾಗಿ ಕಾಂಗ್ರೆಸ್‌ನ ರಾಜಾ ವೆಂಕಟಪ್ಪ ನಾಯಕ ಶಾಸಕರು.
ಕಳೆದ ಚುನಾವಣೆ ಫಲಿತಾಂಶ : 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಾಜಾ ವೆಂಕಟಪ್ಪ ನಾಯಕ 65,033 ಮತಗಳನ್ನು ಪಡೆದು ಜಯಗಳಿಸಿದ್ದರು. ಜೆಡಿಎಸ್‌ನ ನರಸಿಂಹ ನಾಯಕ್ ಅವರು 60,958, ಬಿಜೆಪಿಯ ಮದನಗೋಪಾಲ್ ನಾಯಕ್ 3,249 ಮತಗಳನ್ನು ಪಡೆದಿದ್ದರು. 2018ರ ಚುನಾವಣೆಗೆ ಶರಣಪ್ಪ ದರ್ಶನಾಪುರ ಅವರು ಕಾಂಗ್ರೆಸ್ ಅಭ್ಯರ್ಥಿ. ಗುರುಪಾಟೀಲ್ ಶಿರವಾಳ್ ಅವರು ಬಿಜೆಪಿ ಅಭ್ಯರ್ಥಿ. ರಾಜಾಕೃಷ್ಣ ನಾಯಕ್ ಜೆಡಿಎಸ್ ಅಭ್ಯರ್ಥಿ.

ರಾಜಾ ವೆಂಕಟಪ್ಪನಾಯಕ ಮತ್ತು ರಾಜೂಗೌಡ ಎದುರಾಳಿ
ಕಳೆದ ಎರಡು ದಶಗಳಿಂದ ರಾಜಾ ವೆಂಕಟಪ್ಪನಾಯಕ ಮತ್ತು ರಾಜೂಗೌಡ ಅವರೇ ಕಾಯಂ ಎದುರಾಳಿಗಳು. ಕ್ಷೇತ್ರ ಸುರಪುರ ತಾಲ್ಲೂಕಿನ ಕೆಂಭಾವಿ ಹೋಬಳಿ (ಶಹಾಪುರ ವಿಧಾನ ಸಭಾ ಕ್ಷೇತ್ರಕ್ಕೆ ಸೇರಿದೆ) ಹೊರತು ಪಡಿಸಿ ಸುರಪುರ ಮತ್ತು ಹುಣಸಗಿ ತಾಲ್ಲೂಕು ವಿಸ್ತಾರ ವ್ಯಾಪ್ತಿ ಹೊಂದಿದೆ. ಸುರಪುರದಿಂದ ನಾರಾಯಣಪುರ ಕಡೆಯ ಕೊನೆಯ ಹಳ್ಳಿಗಳು 80 ಕಿ.ಮೀ ದೂರದಲ್ಲಿವೆ. ಇಲ್ಲಿ ಪಕ್ಷಕ್ಕಿಂತ ವ್ಯಕ್ತಿಗೆ ಪ್ರಾಮುಖ್ಯತೆ ಹೆಚ್ಚು. ಕಾಂಗ್ರೆಸ್, ಬಿಜೆಪಿ ಪಕ್ಷಗಳು ಸಾಂಪ್ರದಾಯಿಕ ಎದುರಾಳಿಗಳು.
ನೂತನ ಹುಣಸಗಿ ತಾಲ್ಲೂಕಿನಲ್ಲಿ ಶಿಕ್ಷಣ, ಆರೋಗ್ಯ, ಕೃಷಿ ಸೇರಿದಂತೆ ಹಲವು ಇಲಾಖೆಗಳ ಕಚೇರಿಗಳು ಇಲ್ಲ. ಕಾಲುವೆ ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲ ಎಂಬ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಗುಳೆ ಸಮಸ್ಯೆ ನಿಂತಿಲ್ಲ. ನಿರುದ್ಯೋಗ ಸಮಸ್ಯೆ ನೀಗಿಸಲು ಕಾರ್ಖಾನೆ ಸ್ಥಾಪನೆ, ಉದ್ಯೋಗ ಸೃಷ್ಟಿಸುವಂತಹ ಕೆಲಸಗಳು ಆಗಬೇಕಿದೆ.

ಇಬ್ಬರು ನಾಯಕರೂ ಕಳೆದ ಒಂದು ವರ್ಷದಿಂದ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಇಬ್ಬರೂ ತಮ್ಮ ಜನ್ಮದಿನಗಳಂದು ಉಚಿತ ವೈದ್ಯಕೀಯ ಶಿಬಿರ, ರಕ್ತದಾನ, ಅನ್ನ ಸಂತರ್ಪಣೆ, ವಸ್ತ್ರದಾನ ನಡೆಸಿ ವ್ಯಾಪಕ ಪ್ರಚಾರ ನಡೆಸಿದ್ದರು. ಕ್ರಿಕೆಟ್, ಕಬ್ಬಡ್ಡಿ ಇತರ ಕ್ರೀಡೆಗಳನ್ನು ಆಯೋಜಿಸಿ ಮತದಾರರ ಗಮನ ಸೆಳೆಯುವ ಕಾರ್ಯ ನಡೆಸಿದ್ದಾರೆ.
ಮತದಾರರ ಜೊತೆಗೆ ನಿರಂತರ ಸಂಪರ್ಕ, ಹಳ್ಳಿಗಳಿಗೆ ಭೇಟಿ, ಕಾರ್ಯಕರ್ತರ ಸಭೆ ನಡೆಸುತ್ತಿದ್ದಾರೆ. ಮತದಾರರಿಗೆ ಹಲವಾರು ಭರವಸೆಗಳನ್ನು ನೀಡುತ್ತಿದ್ದಾರೆ. ಪಕ್ಷದ ಸೇರ್ಪಡೆ ಕಾರ್ಯಕ್ರಮಗಳನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸುತ್ತಿದ್ದಾರೆ. ತಮ್ಮ ಪಕ್ಷದ ರಾಷ್ಟ್ರ, ರಾಜ್ಯ ನಾಯಕರ ದೊಡ್ಡ ಸಮಾರಂಭಗಳನ್ನು ಆಯೋಜಿಸಿ ಅತಿ ಹೆಚ್ಚು ಜನರನ್ನು ಸೇರಿಸುತ್ತಿದ್ದಾರೆ.
ಬಿಜೆಪಿಯಿಂದ ರಾಜೂಗೌಡ, ಕಾಂಗ್ರೆಸ್‌ನಿಂದ ರಾಜಾ ವೆಂಕಟಪ್ಪನಾಯಕ ಸ್ಪರ್ದಿಸುವುದು ನಿಶ್ಚಿತ, 2023ರ ಚುನಾವಣೆಗೆ ವೇದಿಕೆಯನ್ನು ಇಬ್ಬರು ಭರ್ಜರಿಯಾಗಿಯೇ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
2018ರ ಫಲಿತಾಂಶ
ಕಾಂಗ್ರೆಸ್‌ನಿಂದ ಕಳೆದ ಬಾರಿ ಸೋತಿರುವ ರಾಜಾ ವೆಂಕಟಪ್ಪ ನಾಯಕ ಈ ಬಾರಿ ಗೆಲ್ಲಲೇ ಬೇಕು ಎಂದು ಹಠ ತೊಟ್ಟಿದ್ದಾರೆ. 2018ರಲ್ಲಿ ಒಂಬತ್ತು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬಿಜೆಪಿಯ ರಾಜೂಗೌಡ 1,04,426 ಮತಗಳನ್ನು ಪಡೆದು ಕಾಂಗ್ರೆಸ್‌ನ ರಾಜಾ ವೆಂಕಟಪ್ಪನಾಯಕ ಅವರನ್ನು 22,568 ಮತಗಳಿಂದ ಪರಭವಗೊಳಿಸಿದ್ದರು. ಈ ಬಾರಿ ಜೆಡಿಎಸ್, ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ, ಆಮ್ ಆದ್ಮಿ ಪಕ್ಷಗಳ ಅಭ್ಯರ್ಥಿಗಳು ಕಣಕ್ಕಿಳಿಯುವ ಸಾಧ್ಯತೆ ಇದೆ. ವಾಲ್ಮೀಕಿ ಮತ್ತು ಕುರುಬ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಲಿಂಗಾಯತ, ಪರಿಶಿಷ್ಟ ಜಾತಿ ಮತ್ತು ಮುಸ್ಲೀಂ ಮತದಾರರು ಪ್ರಜ್ಞಾವಂತರಾಗಿದ್ದಾರೆ. ಮತದಾನ ಪ್ರಯಾಣ ಹೆಚ್ಚಿಸಲು ಸರ್ಕಾರ ಸೇರಿದಂತೆ ರಾಜಕೀಯ ಪಕ್ಷಗಳೂ ಕೆಲಸ ಮಾಡುತ್ತಿವೆ.












Click it and Unblock the Notifications