• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾಜಿ ಶಾಸಕ ಅಪ್ಪಾಜಿಗೌಡರ ಹೆಸರಿನಲ್ಲಿ ಬಸ್ ನಿಲ್ದಾಣ‌ ನಿರ್ಮಿಸಿದ ಜಿ.ಪಂ ಸದಸ್ಯ

By ಶಿವಮೊಗ್ಗ ಪ್ರತಿನಿಧಿ
|

ಶಿವಮೊಗ್ಗ, ಅಕ್ಟೋಬರ್ 14: ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿನ ಬಸ್ ನಿಲ್ದಾಣಕ್ಕೆ ಮಾಜಿ ಶಾಸಕ ದಿ.ಅಪ್ಪಾಜಿಗೌಡರ ಹೆಸರನ್ನಿಡಲಾಯಿತು.

ಶಿವಮೊಗ್ಗ ಜಿಲ್ಲಾ ಪಂಚಾಯತಿ ಜೆಡಿಎಸ್ ಸದಸ್ಯ ಮಣಿಶೇಖರ್ ಅವರ ಸ್ವಂತ ಖರ್ಚಿನಲ್ಲಿ ನಿರ್ಮಿಸಲಾದ ಬಸ್ ನಿಲ್ದಾಣಕ್ಕೆ ಭದ್ರಾವತಿಯ ಮಾಜಿ ಶಾಸಕ ಅಪ್ಪಾಜಿ ಗೌಡ ಅವರ ಹೆಸರಿಡಲಾಗಿದೆ.

ತೀರ್ಥಹಳ್ಳಿ; ಮಧ್ಯರಾತ್ರಿ ಮನೆಗೆ ನುಗ್ಗಿ ದಾಂಧಲೆ ನಡೆಸಿದ ದುಷ್ಕರ್ಮಿಗಳು

ಕೂಡ್ಲಿಗೆರೆ ಗ್ರಾಮದಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮವನ್ನು ನೆರವೇರಿಸಿ, ಆರಂಭದಲ್ಲಿ ಕೂಡ್ಲಿಗೆರೆಯಲ್ಲಿರುವ ಹರಿಹರೇಶ್ವರ ಮಹಾದ್ವಾರದಲ್ಲಿ ನಿರ್ಮಿಸಲಾಗಿರುವ ಸರ್.ಎಂ.ವಿಶ್ವೇಶ್ವರಯ್ಯನವರ ಪ್ರತಿಮೆಗೆ ಹರಕೆರೆ ಚನ್ನವೀರ ವಿರಕ್ತಮಠದ ಶ್ರೀ ಕರಿಸಿದ್ದೇಶ್ವರ ಸ್ವಾಮೀಜಿ ಮಾಲಾರ್ಪಣೆ ಮಾಡಿದರು.

ನಂತರ ದಿ.ಅಪ್ಪಾಜಿಗೌಡರ ಪತ್ನಿ ಶಾರದಾ ಅಪ್ಪಾಜಿ ಗೌಡ ಅವರು ಬಸ್ ನಿಲ್ದಾಣದ ರಿಬ್ಬನ್ ಕಟ್ ಹಾಗೂ ಗೌಡರ ಫೋಟೋಗೆ ದೀಪ ಬೆಳಗುವ ಮೂಲಕ ಅಪ್ಪಾಜಿ ಗೌಡ ಬಸ್ ನಿಲ್ದಾಣವನ್ನು ಅನಾವರಣಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ ಸದಸ್ಯ ಮಣಿಶೇಖರ್, ಅಪ್ಪಾಜಿಗೌಡ ಅವರು ಸಾವನ್ನಪ್ಪಿ ಒಂದು ತಿಂಗಳು 10 ದಿನ ಕಳೆದಿದೆ. ಅಪ್ಪಾಜಿಗೌಡರು ಭದ್ರಾವತಿ ಹಳ್ಳಿಹಳ್ಳಿಯಲ್ಲಿ ಪ್ರಖ್ಯಾತರಾಗಿದ್ದಾರೆ. ಅವರ ನೆರಳಲ್ಲಿ ಬೆಳೆದ ನಮಗೆ ಅವರ ಜ್ಞಾಪಕಾರ್ಥವಾಗಿ ಇಂದು ಬಸ್ ನಿಲ್ದಾಣವನ್ನು ಸ್ವಂತ ಖರ್ಚಿನಲ್ಲಿ ನಿರ್ಮಿಸಿದ್ದೇನೆ ಎಂದರು.

ಶಿಮುಲ್ ನ ಅಧ್ಯಕ್ಷ ಆನಂದ್ ರವರು ಮಾತನಾಡಿ, ಚುನಾವಣೆಯಲ್ಲಿ ಅಪ್ಪಾಜಿಗೌಡರ ಜೊತೆ ಹೋಗಿ ಗೆಲವು ಸಾಧಿಸುತ್ತಿದ್ದೇವು, ಇನ್ಮುಂದೆ ಅವರ ಫೋಟೋ ಇಟ್ಟುಕೊಂಡು ಜನರ ಬಳಿ ಹೋಗುತ್ತೇವೆ ಎಂದು ತಿಳಿಸಿದರು.

English summary
The bus stop in Koodligere village in Bhadravathi Taluk of Shivamogga district has been named after former MLA Appajigouda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X