Get Updates
Get notified of breaking news, exclusive insights, and must-see stories!

ಸಿಎಂ ಸ್ಥಾನಕ್ಕೆ ಬಿಎಸ್ವೈ ರಾಜೀನಾಮೆ ನೀಡಲು ಕಾರಣರಾದ ನಾಲ್ವರ ಹೆಸರು ಬಹಿರಂಗ

ಶಿವಮೊಗ್ಗ, ಜುಲೈ 25: ನಾಳೆಗೆ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಒಂದು ವರ್ಷ. ಆದರೂ, ಅವರು ವಿದಾಯ ಭಾಷಣದಲ್ಲಿ ಹಾಕಿದ ಕಣ್ಣೀರು, ರಾಜೀನಾಮೆ ನೀಡುವಂತ ಪ್ರಸಂಗ ಎದುರಾದ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ.

ಎರಡು ದಿನಗಳ ಕೆಳಗೆ ಯಡಿಯೂರಪ್ಪನವರು ಚುನಾವಣಾ ರಾಜಕೀಯದಿಂದ ಹಿಂದಕ್ಕೆ ಸರಿಯುವುದಾಗಿ ಘೋಷಿಸಿದ್ದರು. ತಮ್ಮ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಶಿಕಾರಿಪುರದಿಂದ ಕಣಕ್ಕಿಳಿಸುವ ಇಂಗಿತವನ್ನು ವ್ಯಕ್ತ ಪಡಿಸಿದ್ದರು.

ಯಡಿಯೂರಪ್ಪನವರ ನಿವೃತ್ತಿಯ ಬಗ್ಗೆ ಕಾಂಗ್ರೆಸ್ಸಿನ ಹಲವು ನಾಯಕರು ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಬಿಜೆಪಿಯ ವರಿಷ್ಠರು ಅವರನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷರಾದಿಯಾಗಿ ಹಲವರು ಬೇಸರ ವ್ಯಕ್ತ ಪಡಿಸಿದ್ದಾರೆ.

ಒಂದು ಕಾಲದಲ್ಲಿ ಬಿಜೆಪಿಯಲ್ಲಿದ್ದು, ಟಿಕೆಟ್ ಸಿಗದ ನಂತರ ಕಾಂಗ್ರೆಸ್ ಸೇರಿಕೊಂಡು ಈಗ ವಕ್ತಾರರಾಗಿರುವ ಬೇಳೂರು ಗೋಪಾಲಕೃಷ್ಣ, ಯಡಿಯೂರಪ್ಪನವರ ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ. ನಾಲ್ವರು ಪಾಪಿಗಳಿಂದ ಬಿಎಸ್ವೈ ಸಿಎಂ ಸ್ಥಾನದಿಂದ ಕೆಳಗಿಳಿಯುವಂತಾಯಿತು ಎಂದು ಹೇಳಿದ್ದಾರೆ.

 ಕಣ್ಣೀರು ಹಾಕಿ ಇಳಿಸಿದ್ದಾರೆ - ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಹೇಳಿಕೆ

ಕಣ್ಣೀರು ಹಾಕಿ ಇಳಿಸಿದ್ದಾರೆ - ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಹೇಳಿಕೆ

"ಯಡಿಯೂರಪ್ಪನವರು ನಿವೃತ್ತಿ ಘೋಷಿಸಿರುವುದು ಸಂಚಲನವನ್ನು ಮೂಡಿಸಿದೆ. ಬಿಜೆಪಿಯನ್ನು ಕಟ್ಟಿ, ಬೆಳೆಸಿ ಈಶ್ವರಪ್ಪನಂತವರನ್ನು ಮುಖಂಡರನ್ನಾಗಿ ಮಾಡಿದ್ದ ಯಡಿಯೂರಪ್ಪನವರನ್ನು ನಿವೃತ್ತಿಗೊಳಿಸಲಾಗಿದೆ. ಈ ಹಿಂದೆ ಮುಖ್ಯಮಂತ್ರಿ ಪದವಿಯಿಂದಲೂ ಇಳಿಸಿದರು, ಸುಮ್ಮನೇ ಇಳಿಸದೇ ಕಣ್ಣೀರು ಹಾಕಿ ಇಳಿಸಿದ್ದಾರೆ. ಯಡಿಯೂರಪ್ಪನವರಿಗೆ ಇಂತಹ ಪರಿಸ್ಥಿತಿಯನ್ನು ತಂದದ್ದು ಬೇರೆಯಾರೂ ಅಲ್ಲ, ಅವರದೇ ಪಕ್ಷದ ನಾಲ್ವರು ಪಾಪಿಗಳು" ಎಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.

 ಯಡಿಯೂರಪ್ಪನವರ ರಾಜಕೀಯ ಭವಿಷ್ಯ ಹಾಳು ಮಾಡಿದ್ದು ನಾಲ್ವರು

ಯಡಿಯೂರಪ್ಪನವರ ರಾಜಕೀಯ ಭವಿಷ್ಯ ಹಾಳು ಮಾಡಿದ್ದು ನಾಲ್ವರು

"ಯಡಿಯೂರಪ್ಪನವರ ರಾಜಕೀಯ ಭವಿಷ್ಯ ಹಾಳು ಮಾಡಿದ್ದು ನಾಲ್ವರು. ಅವರು ಯಾರೆಂದರೆ, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ಕೆ.ಎಸ್.ಈಶ್ವರಪ್ಪ. ಯಡಿಯೂರಪ್ಪನವರ ಕಣ್ಣೀರಿನ ಶಾಪ ಇವರನ್ನೆಲ್ಲಾ ಸುಮ್ಮನೆ ಬಿಡುವುದಿಲ್ಲ"ಎಂದು ಬೇಳೂರು ಗೋಪಾಲಕೃಷ್ಣ ಅಭಿಪ್ರಾಯ ಪಟ್ಟಿದ್ದಾರೆ.

 ವೃಥಾ ಆರೋಪವನ್ನು ದೆಹಲಿಯಲ್ಲಿ ಕಣ್ಣೀರು ಸುರಿಸಿ ಮಾಡುತ್ತಿದ್ದರು

ವೃಥಾ ಆರೋಪವನ್ನು ದೆಹಲಿಯಲ್ಲಿ ಕಣ್ಣೀರು ಸುರಿಸಿ ಮಾಡುತ್ತಿದ್ದರು

"ಯಡಿಯೂರಪ್ಪನವರು ಹಿರಿಯರಿದ್ದರು, ಇನ್ನಷ್ಟು ದಿನ ಮುಖ್ಯಮಂತ್ರಿಯಾಗಿದ್ದರೆ ನಮ್ಮ ಜಿಲ್ಲೆ ಇನ್ನಷ್ಟು ಅಭಿವೃದ್ದಿಯನ್ನು ಕಾಣಬಹುದಿತ್ತು. ಆದರೆ, ಅವರನ್ನು ಬಲವಂತದಿಂದ ಕೆಳಗಿಸಲಾಯಿತು. ಅವರ ಬಗ್ಗೆ ವೃಥಾ ಆರೋಪವನ್ನು ದೆಹಲಿಯಲ್ಲಿ ಕಣ್ಣೀರು ಸುರಿಸಿ ಈ ನಾಲ್ವರು ಮುಖಂಡರು ಮಾಡುತ್ತಿದ್ದರು. ಇದನ್ನೆಲ್ಲಾ ತಿರುಗಿ ಎದುರಿಸುವ ದಿನ ಖಂಡಿತ ಬರಲಿದೆ"ಎಂದು ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.

 ಯಡಿಯೂರಪ್ಪನವರು ಜನನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ

ಯಡಿಯೂರಪ್ಪನವರು ಜನನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ

"ಯಡಿಯೂರಪ್ಪನವರು ಜನನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ನಾನದನ್ನು ಒಪ್ಪಿಕೊಳ್ಳುತ್ತೇನೆ. ಬಿಜೆಪಿಯಲ್ಲಿ ಒಳಹೊಕ್ಕು ಬಂದಿದ್ದೇನೆ. ಅವರಲ್ಲಿ ಗುಂಪುಗಾರಿಕೆ ಜಾಸ್ತಿ, ಒಂದು ಸಂಘ ಪರಿವಾರದ ಶಕ್ತಿ. ಮಧ್ಯದಲ್ಲಿ ಬಂದು ಸೇರಿಕೊಂಡವರದ್ದು ಒಂದು ಗುಂಪಿದೆ. ಕೊನೆಗೆ, ಬಾಂಬೆ ಫ್ರೆಂಡ್ಸ್ ಗುಂಪೊಂದಿದೆ. ಗರ್ಭಗುಡಿ ಸಂಸ್ಕೃತಿಯಂತೆ ಬಿಜೆಪಿಯಲ್ಲಿ ಸಂಘ ನಿಷ್ಟರನ್ನು ಹೊರತು ಪಡಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+