ಬಿಎಸ್ ವೈ-ಶೋಭಾ ವಾಮಾಚಾರ ಮಾಡಿಸಲು ಕೇರಳಕ್ಕೆ ಹೋಗುತ್ತಾರೆ: ಬೇಳೂರು

ಶಿವಮೊಗ್ಗ, ನವೆಂಬರ್ 30: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಚಿಕಿತ್ಸೆಯ ನೆಪವೊಡ್ಡಿ ಕೇರಳಕ್ಕೆ ವಾಮಾಚಾರ ಮಾಡಿಸಲು ಹೋಗುತ್ತಾರೆ ಎಂದು ಬೇಳೂರು ಗೋಪಾಲಕೃಷ್ಣ ಹೊಸ ಬಾಂಬ್ ಸಿಡಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಚಿಕಿತ್ಸೆಯ ನೆಪದಲ್ಲಿ ಕೇರಳಕ್ಕೆ ಹೋಗಿ ವಾಮಾಚಾರ ಮಾಡಿಸಿ ಯಾರನ್ನೋ ನಾಶ ಮಾಡಲು ಹೋಗುತ್ತಿದ್ದಾರೆ. ಸರ್ಕಾರವನ್ನು ಉರುಳಿಸಲು ಸಂಚು ರೂಪಿಸುತ್ತಿದ್ದಾರೆ.

ಕೇರಳಕ್ಕೆ ಹೋಗಿದ್ದಾರೆ ಎಂದರೆ ಯಾರನ್ನೋ ಕತ್ತರಿಸಲು ಹೋಗುತ್ತಾರೆ ಎಂದರ್ಥ. ಕೇರಳದಿಂದ ಬಂದ ನಂತರ ಬೆಳಗ್ಗೆ ಮಂಗಳೂರು ಐಬಿಯಲ್ಲಿ ಶೋಭಾ ಕರಂದ್ಲಾಜೆ ಬಿ.ಎಸ್ ವೈ ಇರ್ತಾರೆ. ಯಾರಾದರೂ ಕೇಳಿದರೆ ಪೂಜೆಗೆ ಹೋಗಿದ್ವಿ ಅಂತ ಹೇಳುತ್ತಾರೆ. ಆದ್ರೆ ಇವರು ಜೀವನ ಪೂರ್ತಿ ಸಂಪೂರ್ಣ ವಾಮಾಚರವನ್ನೇ ಮಾಡಿಕೊಂಡು ಬಂದಿದ್ದಾರೆ ಎಂದು ಆರೋಪಿಸಿದರು.

Yeddyurappa, Shobha Karandlaje go to Kerala for witchcraft

ಬಿ.ಎಸ್.ವೈ.ಒಬ್ಬ ಮಹಾನ್ ಸುಳ್ಳುಗಾರ. ರಾಜ್ಯದ ಜನರಿಗೆ ಸುಳ್ಳು ಹೇಳುತ್ತಲೇ ಮುಖ್ಯಮಂತ್ರಿಯಾಗಿದ್ರು . ಶಿಕಾರಿಪುರದ ಜನರು ಅಪ್ಪ-ಮಕ್ಕಳನ್ನು ಹೇಗೆ ಗೆಲ್ಲಿಸುತ್ತಾರೋ ಗೊತ್ತಿಲ್ಲ. ತುಮರಿ ಸೇತುವೆ ಕಟ್ಟುತ್ತೇವೆ ಎಂದು 3 ಬಾರಿ ಗುದ್ದಲಿ ಪೂಜೆ ಮಾಡಿದ ಅವರು ಇನ್ನು ಸೇತುವೆ ಕಟ್ಟಿಲ್ಲ.

Yeddyurappa, Shobha Karandlaje go to Kerala for witchcraft

ಜಿಲ್ಲೆಯ ಜನರು ಇನ್ನು ಕನಸ್ಸು ಕಟ್ಟಿಕೊಂಡು ಅವರಿಗೆ ಮತ ಹಾಕುತ್ತಿದ್ದಾರೆ. ತಮ್ಮ ಪುತ್ರರನ್ನು ಮತೊಮ್ಮೆಮ್ಮೆ ಗೆಲ್ಲಿಸಲು ಹೊಸ ತಂತ್ರವನ್ನು ರೂಪಿಸಿದ್ದಾರೆ ಎಂದು ಬೇಳೂರು ಗೋಪಾಲಕೃಷ್ಣ ಟೀಕಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+