• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯೋಗ ಶಿಕ್ಷಣ ಖಡ್ಡಾಯ ಮಾಡಲಾಗುವುದು: ಈಶ್ವರಪ್ಪ

|

ಬೆಂಗಳೂರು, ಜೂ. 21: ಯೋಗ ಸಾಧನೆಯಿಂದ ಕೊರೊನಾ ವೈರಸ್ ಹಿಮ್ಮೆಟ್ಟಿಸಬಹುದು ಎಂದು ಸಾಬೀತಾಗಿದೆ. ಕೊರೊನಾ ವೈರಸ್ ಮಾತ್ರವಲ್ಲ ಆರೋಗ್ಯದ ಹಿತದೃಷ್ಟಿಯಿಂದ ಯೋಗ ಸಾಧನೆ ಅತ್ಯಗತ್ಯ. ಹೀಗಾಗಿಯೆ ಜೂನ್ 21 ಅಂತಾರಾಷ್ಟ್ರೀಯ ಯೋಗ ದಿನಚಾರಣೆಯನ್ನು ಇಡೀ ಜಗತ್ತು ಒಪ್ಪಿಕೊಂಡಿದೆ. ಇದೇ ಸಂದರ್ಭದಲ್ಲಿ ಗ್ರಾಮೀಣಾಭಿವೃಧ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಶಿವಮೊಗ್ಗ ಜಿಲ್ಲೆಯ ಶಾಲಾ-ಕಾಲೇಜುಗಳಲ್ಲಿ ಯೋಗ ಶಿಕ್ಷಣ ಖಡ್ಡಾಯ ಮಾಡಲಾಗುವುದು ಎಂದು ಹೇಳಿದ್ದಾರೆ.

ಅತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಕುಟುಂಬದ ಸದ್ಯರೊಂದಿಗೆ ಯೋಗ ಸಾಧನೆ ಮಾಡಿದ ಬಳಿಕ ಈಶ್ವರಪ್ಪ ಅವರು ಮಾತನಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿನ ಎಲ್ಲ ಜ್ಯೂನಿಯರ್ ಕಾಲೇಜುಗಳು ಹಾಗೂ ಹೈಸ್ಕೂಲ್‌ಗಳಲ್ಲಿ ಯೋಗ ವಿಷಯ ಖಡ್ಡಾಯ ಮಾಡಲಾಗುವುದು. ವಿದ್ಯಾರ್ಥಿಗಳು ಯೋಗ ಶಿಕ್ಷಣ ಪಡೆಯಬೇಕು. ಈ ಕುರಿತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೊಂದಿಗೆ ಚರ್ಚೆ ಮಾಡುತ್ತೇನೆ ಎಂದು ಈಶ್ವರಪ್ಪ ಹೇಳಿದ್ದಾರೆ.

ಯೋಗ ಏಕತೆಯ ಶಕ್ತಿಯಾಗಿ ಹೊರ ಹೊಮ್ಮಿದೆ; ನರೇಂದ್ರ ಮೋದಿ

ಯೋಗ ಇಡೀ ವಿಶ್ವನ್ನೇ ಒಂದು ಮಾಡಿದೆ. ಜೂ. 21 ಯೋಗ ದಿನಾಚರನೆ ಆಗಿರುವುದು ಭಾರತೀಯರಿಗೆ ಹೆಮ್ಮಯ ವಿಷಯ. ದೇಶ, ಧರ್ಮ ಮೀರಿ ಯೋಗ ಸಾಧನೆ ಮಾಡುವುದು ಆರೋಗ್ಯಕ್ಕೆ ಕ್ಷೇಮ. ಕೊರೊನಾ ವೈರಸ್ ಇಡೀ ಪ್ರಪಂಚ ಆಕ್ರಮಿಸಿರುವ ಸಂದರ್ಭದಲ್ಲಿ ಪ್ರತಿ ಮನೆಯಲ್ಲಿ ಯೋಗ ಸಾಧನೆ ಮಾಡಿ ಎಂದು ಪ್ರಧಾನಿ ಆಶಯ ವ್ಯಕ್ತಪಡಿಸಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ.

English summary
Rural Development Minister Eshwarappa has said that he will discuss with the Education Minister Suresh kumar to make yoga education compulsory in school and colleges of Shimoga distric
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X