ವೈರಲ್ ವಿಡಿಯೋ: ದೈತ್ಯ ಹೆಬ್ಬಾವಿನಿಂದ ಪಾರಾದ ಸಾಕು ನಾಯಿ
Recommended Video

ಶಿವಮೊಗ್ಗ, ಜುಲೈ.12: ಜಿಲ್ಲೆಯ ಸೊರಬ ತಾಲೂಕಿನ ಕಾನಳ್ಳಿ ಗ್ರಾಮದ ಜಯಶೀಲಗೌಡ ಎಂಬುವವರ ತೋಟದಲ್ಲಿ ಬೃಹದಾಕಾರ ಹೆಬ್ಬಾವೊಂದು ಸಾಕು ನಾಯಿಯನ್ನು ಹಿಡಿದು, ಸುತ್ತಿಕೊಂಡು ನುಂಗಲೆತ್ನಿಸಿತು. ಅಷ್ಟರಲ್ಲೇ ಓಡಿ ಬಂದ ಜಯಶೀಲಗೌಡ ನಾಯಿಯನ್ನು ಹೆಬ್ಬಾವಿನಿಂದ ಪಾರು ಮಾಡಿದರು.
ಇದೀಗ ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ತಂದೆ ಜಯಶೀಲಗೌಡ ನಾಯಿಯನ್ನು ಹೆಬ್ಬಾವಿನಿಂದ ಬಚಾವ್ ಮಾಡಿದ್ದು ಹಾಗೂ ಮಗಳು ಮೊಬೈಲ್ ನಲ್ಲಿ ಧೈರ್ಯವಾಗಿ ಚಿತ್ರೀಕರಿಸಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಘಟನೆಯ ವಿವರ: ಜಯಶೀಲಗೌಡ ಅವರ ಸಾಕು ನಾಯಿ ಇದಕ್ಕಿದ್ದಂತೆ ಜೋರಾಗಿ ಕೂಗಲಾರಂಭಿಸಿತು. ನಾಯಿಯ ಧ್ವನಿ ಕೇಳಿ ಓಡಿ ಬಂದ ಜಯಶೀಲಗೌಡ ಅವರ ಕಣ್ಣಿಗೆ ಕಂಡದ್ದು ಬೃಹದಾಕರಾದ ಹೆಬ್ಬಾವು. ಜೊತೆಗೆ ಅದು ನಾಯಿಯನ್ನು ಸುತ್ತಿಕೊಳ್ಳುತ್ತಿರುವ ದೃಶ್ಯ.
ಇನ್ನೇನು ನಾಯಿ ಹೆಬ್ಬಾವಿನ ಪಾಲಾಗಬೇಕು ಎನ್ನುವಷ್ಟರಲ್ಲಿ ಜಯಶೀಲಗೌಡ ದೊಡ್ಡ ಕೋಲು ತೆಗೆದುಕೊಂಡು ಹೆಬ್ಬಾವಿಗೆ ಹೊಡೆಯಲಾರಂಭಿಸಿದರು. ಹೊಡೆದ ಮಾತ್ರಕ್ಕೆ ಹೆಬ್ಬಾವೇನೂ ನಾಯಿಯನ್ನು ಬಿಡಲಿಲ್ಲ. ಹೊಡೆಯುತ್ತಾ ಹೋದಂತೆ ಅರ್ಧ ನುಂಗಿದ್ದ ನಾಯಿಯನ್ನು ಬಾಯಿಯಿಂದ ಹೊರ ಹಾಕಲು ಪ್ರಯತ್ನಿಸುತ್ತಿತ್ತು. ಮತ್ತೇ ನುಂಗಲು ಎತ್ತಿಸುತ್ತಿತ್ತು.

ಆಗ ಜಯಶೀಲಗೌಡ ತಕ್ಷಣವೇ ಯೋಚಿಸಿ, ಹೆಬ್ಬಾವಿನ ಬಾಲವನ್ನು ಹಿಡಿದು ಜೋರಾಗಿ ಎಳೆದಿದ್ದಾರೆ. ಆಗ ನಾಯಿ ಹೊರಬಂದಿದೆ. ಇಷ್ಟು ದೃಶ್ಯವನ್ನು ಗೌಡರ ಮಗಳು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು, ಈ ವಿಡಿಯೋ ನೋಡಿದರೆ ಎಂಥವರಿಗೂ ಒಮ್ಮೆ ಮೈ ಜುಮ್ಮೆನ್ನುವುದು ಖಚಿತ.












Click it and Unblock the Notifications