ಶಿವಮೊಗ್; ಸಿಸಿ ಟಿವಿಯಲ್ಲಿ ಸೆರೆಯಾಯ್ತು ಚಿನ್ನ ಕದ್ದವರ ಕೈಚಳಕ
ಶಿವಮೊಗ್ಗ, ಅಕ್ಟೋಬರ್ 5: ಶಿವಮೊಗ್ಗ ನಗರದಲ್ಲಿ ದಿನೇ ದಿನೇ ಕಳ್ಳರ ಕೈಚಳಕ ಜೋರಾಗಿದೆ. ಹಾಗೆಯೇ ಶುಕ್ರವಾರವೂ ಚಿನ್ನದ ಅಂಗಡಿಯೊಂದರಲ್ಲಿ ಕಳ್ಳತನ ನಡೆದಿದ್ದು, ಈ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಚಿನ್ನ ಖರೀದಿಗೆ ಬಂದಿದ್ದ ಇಬ್ಬರು ಮಹಿಳೆಯರು ತಮ್ಮ ಕೈಚಳಕ ತೋರಿಸಿ ಚಿನ್ನಾಭರಣ ಸಮೇತ ಪರಾರಿಯಾಗಿದ್ದಾರೆ. ನಗರದ ಮೈತ್ರಿ ಜ್ಯುವೆಲ್ಲರ್ಸ್ ಗೆ ಬಂದ ಇಬ್ಬರು ಮಹಿಳೆಯರು ಬರೋಬ್ಬರಿ 33 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದಾರೆ. ಮೂರು ಜೊತೆ ಜುಮುಕಿ ಕಳವು ಆಗಿದ್ದು, ಇವು ಸರಿ ಸುಮಾರು 1.27 ಲಕ್ಷ ಮೌಲ್ಯವೆಂದು ಅಂದಾಜಿಸಲಾಗಿದೆ.

ಚಿನ್ನಾಭರಣದಂಗಡಿಯಲ್ಲಿ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಕಳ್ಳರ ಕೈಚಳಕ ಸೆರೆಯಾಗಿದೆ. ಮೈತ್ರಿ ಜ್ಯುವೆಲ್ಲರ್ಸ್ ನಲ್ಲಿ ಕಳವು ಮಾಡುವ ಮೊದಲು ಈ ಮಹಿಳೆಯರು ಜಾಯ್ ಅಲುಕ್ಕಾಸ್ ಗೆ ಹೋಗಿದ್ದಾರೆ. ಇಲ್ಲಿ ಕಳವು ಮಾಡಿಕೊಂಡು ಜೈಲ್ ರಸ್ತೆಯಲ್ಲಿನ ಮತ್ತೊಂದು ಚಿನ್ನಾಭರಣದಂಗಡಿಗೆ ತೆರಳಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ಈ ಕುರಿತು ಮೈತ್ರಿ ಮಳಿಗೆಯ ಮ್ಯಾನೇಜರ್ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.












Click it and Unblock the Notifications