ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗನ ಕಾಯಿಲೆ ಬಳಿಕ ಶಿವಮೊಗ್ಗದಲ್ಲಿ ಹಂದಿ ಜ್ವರದ ಸೋಂಕು ಪತ್ತೆ

|
Google Oneindia Kannada News

ಶಿವಮೊಗ್ಗ, ಫೆಬ್ರವರಿ 26 : ಮಂಗನ ಕಾಯಿಲೆ ಭೀತಿಯ ನಡುವೆಯೇ ಶಿವಮೊಗ್ಗದಲ್ಲಿ ಎಚ್‌1 ಎನ್‌1 ಕಾಣಿಸಿಕೊಂಡಿದೆ. ನಾಲ್ಕು ಜನರಲ್ಲಿ ಶಂಕಿತ ಸೋಂಕು ಕಾಣಿಸಿಕೊಂಡಿದ್ದು, ಇಬ್ಬರಲ್ಲಿ ವೈರಸ್ ಇರುವುದು ಖಚಿತವಾಗಿದೆ.

ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ಎಚ್ 1 ಎನ್‌1 ಸೋಂಕು ಕಾಣಿಸಿಕೊಂಡಿದೆ. ಜಿಲ್ಲಾ ಆರೋಗ್ಯಾಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದು, ನಾಲ್ವರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಇಬ್ಬರಲ್ಲಿ ಸೋಂಕು ಇರುವುದು ದೃಡಪಟ್ಟಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಒಂದೇ ದಿನ ಎಚ್‌1 ಎನ್‌1 ಗೆ 5 ಜನ ಬಲಿರಾಜ್ಯದಲ್ಲಿ ಒಂದೇ ದಿನ ಎಚ್‌1 ಎನ್‌1 ಗೆ 5 ಜನ ಬಲಿ

ವಜನಲಕ್ಷ್ಮೀ (40), ಹೇಮಾವತಿ (39) ಇಬ್ಬರಲ್ಲಿ ಹಂದಿ ಜ್ವರದ ಸೋಂಕು ಇರುವುದು ಖಚಿತವಾಗಿದೆ. 6 ಮತ್ತು 7 ವರ್ಷದ ಇಬ್ಬರು ಮಕ್ಕಳ ರಕ್ತವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಎಲ್ಲರೂ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

ಎಚ್‌1ಎನ್1 ಕುರಿತು ಜಾಗೃತಿಗೆ ಮುಂದಾದ ನಮ್ಮ ಮೆಟ್ರೋಎಚ್‌1ಎನ್1 ಕುರಿತು ಜಾಗೃತಿಗೆ ಮುಂದಾದ ನಮ್ಮ ಮೆಟ್ರೋ

Two swine flu case identified in Shivamogga

ಹಂದಿ ಜ್ವರದ ಸೋಂಕು ಪತ್ತೆಯಾದ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ರೋಹ ಹರಡದಂತೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲೆಯ ಬೇರೆ ತಾಲೂಕುಗಳಲ್ಲಿ ಸೋಂಕು ಕಾಣಿಸಿಕೊಂಡಿದೆಯೇ? ಎಂದು ಜಿಲ್ಲಾಡಳಿತ ಪರಿಶೀಲನೆ ನಡೆಸುತ್ತಿದೆ.

ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಎಚ್ 1 ಎನ್‌ 1ನಿಂದ ವಿಧಿವಶಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಎಚ್ 1 ಎನ್‌ 1ನಿಂದ ವಿಧಿವಶ

ಡಿಎಸ್‌ಓ ಬಿ.ಎಸ್.ಶಂಕ್ರಪ್ಪ ಅವರು ಈ ಕುರಿತು ಮಾಹಿತಿ ನೀಡಿದ್ದು, 'ಎರಡು ಎಚ್1 ಎನ್‌ 1 ಪ್ರಕರಣಗಳು ದೃಢಪಟ್ಟಿವೆ. ಆರೋಗ್ಯ ಇಲಾಖೆ ಹೈ ಅಲರ್ಟ್ ಘೋಷಣೆ ಮಾಡಿದೆ. ಶಂಕಿತರು ಪತ್ತೆಯಾದರೆ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ' ಎಂದು ಹೇಳಿದ್ದಾರೆ.

'ಜಿಲ್ಲೆಯಲ್ಲಿ ಎಚ್ 1 ಎನ್‌1 ರೋಗಿಗಳಿಗೆ ನೀಡುವಷ್ಟು ವಿವಿಧ ಡೋಸೆಜ್‌ಗಳ ಮಾತ್ರೆಗಳು ಲಭ್ಯವಿದೆ. ಜನರು ಆತಂಕಗೊಳ್ಳುವ ಅಗತ್ಯವಿಲ್ಲ. ಸೋಂಕು ಇರುವ ರೋಗಿಗಳು ಕಂಡು ಬಂದರೆ ಪ್ರತ್ಯೇಕವಾದ ವಾರ್ಡ್ ವ್ಯವಸ್ಥೆ ಮಾಡುವಂತೆ ಎಲ್ಲಾ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯಾದ್ಯಂತ ಮಂಗನ ಕಾಯಿಲೆ ಭೀತಿ ಇದೆ. ಸಾಗರ ತಾಲೂಕಿನಲ್ಲಿ 5ಕ್ಕೂ ಹೆಚ್ಚು ಜನರು ಇದರಿಂದಾಗಿ ಮೃತಪಟ್ಟಿದ್ದಾರೆ. ಈಗ ಹಂದಿ ಜ್ವರದ ಸೋಂಕು ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

English summary
Four individuals have tested positive for swine flu in Shivamogga district. According to district health officials two confirmed cases were identified in Hosanagara taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X