ಸಿಗಂಧೂರು ಸೇತುವೆ ಕಾಮಗಾರಿಗೆ ಟೆಂಡರ್ ಅಂತಿಮ
ಶಿವಮೊಗ್ಗ, ಜುಲೈ 19 : ದಶಕಗಳ ಕನಸಾದ ಸಿಗಂಧೂರು ಸೇತುವೆ ನಿರ್ಮಾಣಕ್ಕೆ ಟೆಂಡರ್ ಅಂತಿಮಗೊಂಡಿದೆ. 2.16 ಕಿ.ಮೀ. ದೂರದ ಸೇತುವೆ ನಿರ್ಮಾಣಕ್ಕೆ 2018ರ ಫೆಬ್ರವರಿಯಲ್ಲಿ ಶಂಕುಸ್ಥಾಪನೆ ಮಾಡಲಾಗಿತ್ತು.
ಶರಾವತಿ ನದಿ ಹಿನ್ನೀರಿನ ಕಳಸವಳ್ಳಿ-ಅಂಬಾರಗೋಡ್ಲು ಪ್ರದೇಶದಲ್ಲಿ ಸೇತುವೆ ನಿರ್ಮಾಣವಾಗಲಿದೆ. ಸುಮಾರು 360 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಲಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ.
ಸಿಗಂಧೂರು ಚೌಡೇಶ್ವರಿ ದೇವಾಲಯಕ್ಕೆ ತೆರಳುವ ಸಾವಿರಾರು ಭಕ್ತರಿಗೆ ಸೇತುವೆ ನಿರ್ಮಾಣದಿಂದ ಅನುಕೂಲವಾಗಲಿದೆ. ಸಿಗಂಧೂರು ಸೇತುವೆ ನಿರ್ಮಾಣ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಅಂತ್ಯಗೊಂಡಿದೆ. ಎರಡು ಕಂಪನಿಗಳಿಗೆ ಟೆಂಡರ್ ಅಂತಿಮಗೊಂಡಿದೆ.

ಮಧ್ಯಪ್ರದೇಶದ ದಿಲೀಪ್ ಬಿಲ್ಡ್‌ಕಾನ್ ಲಿಮಿಟೆಡ್ ಮತ್ತು ಚೀನಾ ಮೂಲದ ಶಾನ್ಕ್ಸಿ ರೋಡ್ ಎಂಡ್ ಬ್ರಿಡ್ಜ್ ಗೂಪ್ ಕಂಪನಿಗಳಿಗೆ ಟೆಂಡರ್ ಸಿಕ್ಕಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ಹಾಗೂ ಒಳನಾಡು ಜಲಸಾರಿಗೆ ಇಲಾಖೆಯಿಂದ ಅಧಿಕೃತ ಆದೇಶ ಸಿಗಬೇಕಿದೆ.
2009ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಸೇತುವೆ ನಿರ್ಮಾಣಕ್ಕೆ ಅನುದಾನ ಘೋಷಣೆ ಮಾಡಿದ್ದರು. ಆದರೆ, 2018ರಲ್ಲಿ ಯೋಜನೆಗೆ ಶಂಕುಸ್ಥಾಪನೆ ಆಯಿತು. ಈ ಸೇತುವೆ ನಿರ್ಮಾಣದಿಂದ ಹಲವು ಗ್ರಾಮದ ಜನರಿಗೆ ಅನುಕೂಲವಾಗಲಿದೆ.












Click it and Unblock the Notifications