ಶಿವಮೊಗ್ಗ ಜನತೆಗೆ ಸಿಹಿಸುದ್ದಿ ಕೊಟ್ಟ ನೈಋತ್ಯ ರೈಲ್ವೆ

ಶಿವಮೊಗ್ಗ, ಆಗಸ್ಟ್ 24: ಶಿವಮೊಗ್ಗ ಜಿಲ್ಲೆಯ ಜನರಿಗೆ ನೈಋತ್ಯ ರೈಲ್ವೆ ಸಿಹಿಸುದ್ದಿಯನ್ನು ನೀಡಿದೆ. ಪ್ರಾಯೋಗಿಕವಾಗಿ ಆರು ತಿಂಗಳ ಕಾಲ ಅರಸಾಳು, ಕುಂಸಿ ನಿಲ್ದಾಣಗಳಲ್ಲಿ ಕೆಲವು ರೈಲುಗಳನ್ನು ನಿಲ್ಲಿಸಲು ಆದೇಶ ಹೊರಡಿಸಲಾಗಿದೆ.

ಶಿವಮೊಗ್ಗ ನಗರ ಮತ್ತು ಸಾಗರದ ತಾಳಗುಪ್ಪ ನಿಲ್ದಾಣಗಳ ನಡುವಿನ ಅರಸಾಳು ಮತ್ತು ಕುಂಸಿ ನಿಲ್ದಾಣಗಳಲ್ಲಿ ಕೆಲವು ರೈಲುಗಳನ್ನು ಪ್ರಾಯೋಗಿಕವಾಗಿ ನಿಲ್ಲಿಸಲಾಗುತ್ತದೆ. ಆಗಸ್ಟ್‌ 24ರಿಂದಲೇ ಈ ಆದೇಶ ಜಾರಿಗೆ ಬರಲಿದೆ.

Temporary Stoppage Of Trains In Arasalu And Kumsi Shivamoggga Schedule

ಇದೇ ಮಾದರಿಯಲ್ಲಿ ಹೊಟಗಿ, ಕಲ್ಯಾಣ್‌, ನಾಗಪುರ ನಿಲ್ದಾಣಗಳಲ್ಲಿ ಕೆಲವು ರೈಲುಗಳಿಗೆ 6 ತಿಂಗಳ ಕಾಲ ಪ್ರಾಯೋಗಿಕವಾಗಿ ತಾತ್ಕಾಲಿಕ ನಿಲುಗಡೆಗೆ ಅವಕಾಶ ನೀಡಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ರೈಲು ಸಂಖ್ಯೆ, ನಿಲ್ದಾಣಗಳ ಮಾಹಿತಿ ಇಲ್ಲಿದೆ

* ರೈಲುಗಳ ಸಂಖ್ಯೆ 16227/ 16228 ಮೈಸೂರು ಮತ್ತು ತಾಳಗುಪ್ಪ ನಡುವೆ ಸಂಚರಿಸುವ ಪ್ರತಿದಿನದ ಎಕ್ಸ್‌ಪ್ರೆಸ್‌ ರೈಲುಗಳಿಗೆ ಅರಸಾಳು ನಿಲ್ದಾಣದಲ್ಲಿ ಪ್ರಾಯೋಗಿಕ ನಿಲುಗಡೆ. ರೈಲು ಸಂಖ್ಯೆ 16227 ಅರಸಾಳು ನಿಲ್ದಾಣಕ್ಕೆ ಬೆಳಗ್ಗೆ 5.43/ 5:44 ಗಂಟೆಗೆ ಆಗಮಿಸಿ/ ನಿರ್ಗಮಿಸಲಿದೆ. ರೈಲು ಸಂಖ್ಯೆ 16228 ಅರಸಾಳು ನಿಲ್ದಾಣಕ್ಕೆ ರಾತ್ರಿ 10.03/ 10.04 ಗಂಟೆಗೆ ಆಗಮಿಸಿ/ ನಿರ್ಗಮಿಸಲಿದೆ.

* ರೈಲುಗಳ ಸಂಖ್ಯೆ 16206/ 16205 ಮೈಸೂರು ಮತ್ತು ತಾಳಗುಪ್ಪ ನಿಲ್ದಾಣಗಳ ನಡುವೆ ಸಂಚರಿಸುವ ಇಂಟರ್‌ಸಿಟಿ ಪ್ರತಿದಿನದ ಎಕ್ಸ್‌ಪ್ರೆಸ್‌ ರೈಲುಗಳಿಗೆ ಅರಸಾಳು ಮತ್ತು ಕುಂಸಿ ನಿಲ್ದಾಣಗಳಲ್ಲಿ ಪ್ರಾಯೋಗಿಕ ನಿಲುಗಡೆ. ರೈಲು ಸಂಖ್ಯೆ 16206 ಕುಂಸಿ ನಿಲ್ದಾಣಕ್ಕೆ ಬೆಳಗ್ಗೆ 11.25/ 11.26 ಗಂಟೆಗೆ ಆಗಮಿಸಿ/ ನಿರ್ಗಮಿಸಲಿದೆ. ಇದೇ ರೈಲು ಅರಸಾಳು ನಿಲ್ದಾಣಕ್ಕೆ 11.40/ 11.41 ಗಂಟೆಗೆ ಆಗಮಿಸಿ/ ನಿರ್ಗಮಿಸಲಿದೆ.

ರೈಲು ಸಂಖ್ಯೆ 16205 ಅರಸಾಳು ನಿಲ್ದಾಣಕ್ಕೆ ಸಂಜೆ 4/4.01 ಗಂಟೆಗೆ ಆಗಮಿಸಿ/ ನಿರ್ಗಮಿಸಲಿದೆ. ಇದೇ ರೈಲು ಕುಂಸಿ ನಿಲ್ದಾಣಕ್ಕೆ ಸಂಜೆ 4.15/4.16 ಗಂಟೆಗೆ ಆಗಮಿಸಿ/ ನಿರ್ಗಮಿಸಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಹೊಟಗಿ ನಿಲ್ದಾಣ; ರೈಲು ಸಂಖ್ಯೆ 17319/ 17320 ಎಸ್. ಎಸ್. ಎಸ್ ಹುಬ್ಬಳ್ಳಿ ಮತ್ತು ಹೈದರಾಬಾದ್ ನಿಲ್ದಾಣಗಳ ನಡುವೆ ಸಂಚರಿಸುವ ಪ್ರತಿದಿನದ ಎಕ್ಸ್‌ಪ್ರೆಸ್‌ ರೈಲುಗಳಿಗೆ ಹೊಟಗಿ ನಿಲ್ದಾಣದಲ್ಲಿ ಪ್ರಾಯೋಗಿಕ ನಿಲುಗಡೆ ನೀಡಲಾಗಿದೆ. ಈ ಆದೇಶ ಆಗಸ್ಟ್ 23ರಿಂದ ಜಾರಿಗೆ ಬಂದಿದೆ. ರೈಲು ಸಂಖ್ಯೆ 17319 ಹೊಟಗಿ ನಿಲ್ದಾಣಕ್ಕೆ ಬೆಳಗಿನ ಜಾವ 4.20/ 4.30 ಗಂಟೆಗೆ ಆಗಮಿಸಿ/ ನಿರ್ಗಮಿಸಲಿದೆ. ರೈಲು ಸಂಖ್ಯೆ 17320 ಹೊಟಗಿ ನಿಲ್ದಾಣಕ್ಕೆ ರಾತ್ರಿ 10.15/ 10.25 ಗಂಟೆಗೆ ಆಗಮಿಸಿ/ ನಿರ್ಗಮಿಸಲಿದೆ.

ಕಲ್ಯಾಣ್ ನಿಲ್ದಾಣ; ರೈಲು ಸಂಖ್ಯೆ 19667/ 19668 ಉದಯಪುರ ಸಿಟಿ ಮತ್ತು ಮೈಸೂರು ನಿಲ್ದಾಣಗಳ ನಡುವೆ ಸಂಚರಿಸುವ ಹಮ್ಸಪರ್ ಸಾಪ್ತಾಹಿಕ ಎಕ್ಸ್‌ಪ್ರೆಸ್‌ ರೈಲುಗಳಿಗೆ ಕಲ್ಯಾಣ್‌ ನಿಲ್ದಾಣದ ಪ್ರಾಯೋಗಿಕ ನಿಲುಗಡೆ ನೀಡಲಾಗಿದೆ. ಈ ಆದೇಶ ಆಗಸ್ಟ್ 28ರಿಂದ ಉದಯಪುರ ಸಿಟಿ ಮತ್ತು ಆಗಸ್ಟ್ 24 ರಿಂದ ಮೈಸೂರು ನಿಲ್ದಾಣದಿಂದ ಜಾರಿಗೆ ಬರಲಿದೆ. ರೈಲು ಸಂಖ್ಯೆ 19667 ಕಲ್ಯಾಣ್ ನಿಲ್ದಾಣಕ್ಕೆ ಮಧ್ಯಾಹ್ನ 2.02/ 2.05 ಗಂಟೆಗೆ ಆಗಮಿಸಿ/ ನಿರ್ಗಮಿಸಲಿದೆ. ರೈಲು ಸಂಖ್ಯೆ 19668 ಕಲ್ಯಾಣ್ ನಿಲ್ದಾಣಕ್ಕೆ ಬೆಳಗ್ಗೆ 10.57/ 11 ಗಂಟೆಗೆ ಆಗಮಿಸಿ/ ನಿರ್ಗಮಿಸಲಿದೆ.

ನಾಗಪುರ ನಿಲ್ದಾಣ; ರೈಲು ಸಂಖ್ಯೆ 12213/ 12214 ಯಶವಂತಪುರ ಮತ್ತು ದೆಹಲಿ ಸರಾಯ ರೋಹಿಲ್ಲಾ ದುರಂತೋ ಸಾಪ್ತಾಹಿಕ ಎಕ್ಸ್‌ಪ್ರೆಸ್‌ ರೈಲುಗಳಿಗೆ ನಾಗಪುರ ನಿಲ್ದಾಣದ ಪ್ರಾಯೋಗಿಕ ನಿಲುಗಡೆಯನ್ನು ಆಗಸ್ಟ್ 26 ರಿಂದ ಯಶವಂತಪುರ ಮತ್ತು ಆಗಸ್ಟ್ 28ರಿಂದ ದೆಹಲಿಯ ಸರಾಯ ರೋಹಿಲ್ಲಾ ನಿಲ್ದಾಣಗಳಿಂದ ಜಾರಿಗೆ ಬರಲಿದೆ.

ರೈಲು ಸಂಖ್ಯೆ 12213 ನಾಗಪುರ ನಿಲ್ದಾಣಕ್ಕೆ ಸಂಜೆ 4.15/ 4.20 ಗಂಟೆಗೆ ಆಗಮಿಸಿ/ ನಿರ್ಗಮಿಸಲಿದೆ. ರೈಲು ಸಂಖ್ಯೆ 12214 ನಾಗಪುರ ನಿಲ್ದಾಣಕ್ಕೆ 1.25/ 1.30 ಗಂಟೆಗೆ ಆಗಮಿಸಿ/ ನಿರ್ಗಮಿಸಲಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+