ಶಿವಮೊಗ್ಗ ಎಸ್ಪಿ ಅಭಿನವ್ -ಕಾನೂನು ಸುವ್ಯವಸ್ಥೆಗೂ ಸೈ, ಗಾಯನಕ್ಕೂ ಸೈ
Recommended Video

ಶಿವಮೊಗ್ಗ, ಸೆ. 22: ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅಭಿನವ್ ಅಶೋಕ್ ಖರೆ ಅವರು ಎಂಥಾ ಡೈನಾಮಿಕ್ ಅಧಿಕಾರಿ ಎಂಬುದು ಜಿಲ್ಲೆಯವರಿಗೆ ಚಿರಪರಿಚಿತ. ಮತ್ತೂರು ಗ್ರಾಮದ ತುಂಗಾ ನದಿಯಲ್ಲಿ ಈಜಿ ಅಚ್ಚರಿ ಮೂಡಿಸಿದ್ದ ಖರೆ ಅವರು ಈಗ ನವರಾತ್ರಿ ಉತ್ಸವದಲ್ಲಿ ಪ್ರಾರ್ಥನೆ ರೂಪದ ಹಿಂದಿ ಹಾಡೊಂದನ್ನು ರಂಜಿಸಿದ್ದಾರೆ.
ಶಿವಮೊಗ್ಗದ ರವೀಂದ್ರನಗರದ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ನವರಾತ್ರಿ ಕಾರ್ಯಕ್ರಮದ ಉದ್ಘಾಟನೆಗೆ ಬಂದ ಪೊಲೀಸ್ ವರಿಷ್ಟಾಧಿಕಾರಿಗಳು, 'ಇತನಿ ಶಕ್ತಿ ಹಮೇ ದೆನಾ ದಾತ' (ಅಂಕುಶ್ ಎಂಬ ಹಿಂದಿ ಸಿನಿಮಾದಲ್ಲೂ ಈ ಹಾಡು ಪ್ರರ್ಥನೆ ರೂಪದಲ್ಲಿದೆ ) ಹಾಡನ್ನು ಹಾಡಿ ಅಚ್ಚರಿ ಮೂಡಿಸಿದರು.

ಜೀ ಟಿವಿಯ ಸರಿಗಮಪ ಶೋ ಖ್ಯಾತಿಯ ಸ್ಪರ್ಧಿಗಳು ಕಳೆದ ವಾರ ಕುವೆಂಪು ರಂಗಮಂದಿರದಲ್ಲಿ ಕಾರ್ಯಕ್ರಮ ನೀಡಿದ್ದ ಸಂದರ್ಭ ಅಭಿನವ್ ಖರೆ ಪತ್ನಿ ಗೀತಗಾಯನ ಮಾಡಿದ್ದರು. ಒಟ್ಟಿನಲ್ಲಿ ಕಾನೂನು ಸುವ್ಯವಸ್ಥೆಗೂ ಸೈ ಸಂಗೀತಕ್ಕೂ ಸೈ ಎನಿಸಿಕೊಂಡಿದ್ದಾರೆ.
ಶಿವಮೊಗ್ಗದ ದಸರಾ: ಮಲೆನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಗಳ ಪರಿಚಯ ಮಾಡಿಕೊಡುವ ಹತ್ತು ದಿನಗಳ ದಸರಾ ಮಹೋತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿವಮೊಗ್ಗ ಮಹಾನಗರಪಾಲಿಕೆ ವತಿಯಿಂದ ಆಯೋಜಿಸಲಾಗಿದೆ.
ಶಿವಮೊಗ್ಗ ದಸರಾವನ್ನು ಆಚರಿಸುವ ಮಹಾನಗರ ಪಾಲಿಕೆಗೆ ಸರ್ಕಾರವು ಈ ವರ್ಷವು ಒಂದು ಕೋಟಿ ರೂ. ಅನುದಾನ ನೀಡಿದೆ. ಸೆ. 21 ರಿಂದ ಸೆ 30ರ ತನಕ ದಸರಾ ಮಹೋತ್ಸವ ನಗರದ ವಿವಿಧೆಡೆ ಆಚರಿಸಲ್ಪಡುತ್ತದೆ.
ಅಂತಿಮ ದಿನದಂದು ಶಿವಪ್ಪ ನಾಯಕ ಅರಮನೆಯಿಂದ ಆರಂಭವಾಗುವ ಅಂತಿಮ ದಿನದ ಮೆರವಣಿಗೆಯಲ್ಲಿ ವಿವಿಧ ಇಲಾಖೆಗಳ ಸ್ಥಬ್ದ ಚಿತ್ರಗಳು, ಕಲಾಮೇಳಗಳು, ಸಕ್ರೆಬೈಲು ಆನೆಗಳು ಪಾಲ್ಗೊಳ್ಳಲಿವೆ.












Click it and Unblock the Notifications